ಬೆಂಗಳೂರು: ಕೆಲವು ಕ್ಷಣಗಳ ಕಾಲ ನಟಿ ರಶ್ಮಿಕಾ ಮಂದಣ್ಣ ಅವರ ಮುಖವನ್ನೇ ಹೋಲುವಂಥ ಯುವತಿಯ ಡೀಪ್ ಫೇಕ್ ಮತ್ತು ಡೀಪ್ ನೆಕ್ ಎನ್ನಬಹುದಾದ ವಿಡಿಯೋವೊಂದು ನಿನ್ನೆಯಿಂದ ವೈರಲ್ ಆಗಿತ್ತು. ಅದು ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಗಮನವನ್ನೂ ಸೆಳೆದಿತ್ತು.
ಈ ವಿಡಿಯೋ ವೈರಲ್ ಆದ ಬೆನ್ನಿಗೆ ನಟಿ ರಶ್ಮಿಕಾ ಮಂದಣ್ಣ ಕೂಡ ಪ್ರತಿಕ್ರಿಯೆ ನೀಡಿದ್ದರು. ಝರಾ ಪಟೇಲ್ ಎಂಬಾಕೆಯ ವಿಡಿಯೋವರನ್ನು ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ಅದು ಕೆಲವ ಕ್ಷಣಗಳ ಕಾಲ ರಶ್ಮಿಕಾ ಥರವೇ ಕಾಣುವಂತೆ ಮಾಡಲಾಗಿತ್ತು. ಈ ವಿಡಿಯೋವನ್ನು ಪತ್ರಕರ್ತರೊಬ್ಬರು ಹಂಚಿಕೊಂಡು ಕಾನೂನುಕ್ರಮದ ಅವಶ್ಯಕತೆ ಇದೆ ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ: ಫೇಕ್ ವಿಡಿಯೋ ವೈರಲ್ ಮಾಡಿರುವುದಕ್ಕೆ ರಶ್ಮಿಕಾ ಪ್ರತಿಕ್ರಿಯೆ; ಟೆಕ್ನಾಲಜಿಗಳ ದುರುಪಯೋಗ ಮಾಡಿಕೊಳ್ಳುತ್ತಿರೋದು ಭಯಾನಕ ಕೃತ್ಯ..!
ಅದನ್ನು ರಿಪೋಸ್ಟ್ ಮಾಡಿಕೊಂಡಿದ್ದ ನಟ ಅಮಿತಾಭ್ ಬಚ್ಚನ್, ಇಂಥವುದರ ವಿರುದ್ಧ ಕಠಿಣ ಕಾನೂನುಕ್ರಮ ಅಗತ್ಯವಿದೆ ಎಂದು ಆಗ್ರಹಿಸಿದ್ದರು. ಬಳಿಕ ಈ ವಿಡಿಯೋ ರಶ್ಮಿಕಾ ಗಮನಕ್ಕೂ ಬಂದಿದ್ದು, ಆಕೆಯೂ ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಲ್ಲದೆ ಬೇಸರವನ್ನೂ ವ್ಯಕ್ತಪಡಿಸಿದ್ದರು.
ಇದಾದ ಬಳಿಕ ಅಮಿತಾಭ್ ಬಚ್ಚನ್ ಅವರ ಎಕ್ಸ್ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿರುವ ನಟಿ ರಶ್ಮಿಕಾ ಮಂದಣ್ಣ, ನನ್ನ ಪರವಾಗಿ ನಿಂತಿದ್ದಕ್ಕಾಗಿ ಧನ್ಯವಾದಗಳು ಸರ್, ನಿಮ್ಮಂಥ ನಾಯಕರಿರುವ ದೇಶದಲ್ಲಿ ನಾನು ಸುರಕ್ಷಿತ ಎಂಬ ಭಾವನೆ ಬಂದಿದೆ ಎಂದು ಹೇಳಿಕೊಂಡಿದ್ದಾರೆ.