ಫೇಕ್​ ವಿಡಿಯೋ ವೈರಲ್ ಮಾಡಿರುವುದಕ್ಕೆ ರಶ್ಮಿಕಾ ಪ್ರತಿಕ್ರಿಯೆ; ಟೆಕ್ನಾಲಜಿಗಳ ದುರುಪಯೋಗ ಮಾಡಿಕೊಳ್ಳುತ್ತಿರೋದು ಭಯಾನಕ ಕೃತ್ಯ..!

ರ್ಇನಅಲ
Published on

ಮುಂಬೈ: ಸೆಲಬ್ರಿಟಿಗಳ ಮೇಲೆ ಫೇಕ್​ ನ್ಯೂಸ್​, ಫೋಟೋ, ವೀಡಿಯೋಗಳನ್ನು ತಯಾರಿಸಿ ಅವರ ವ್ಯಕ್ತಿಗತ ಜೀವನಕ್ಕೆ ದಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಭಾನುವಾರ ನಟಿ ರಶ್ಮಿಕಾ ಮಂದಣ್ಣ ಮುಖದ ವಿಡಿಯೋ ವೈರಲ್ ಆಗಿದೆ.



ರಶ್ಮಿಕಾ ಡೀಪ್​ ನೆಕ್​ ಬ್ಲಾಕ್​ ಕಲರ್​ ಡ್ರೆಸ್​ನಲ್ಲಿ ಲಿಫ್ಟ್​ ಒಳಗೆ ನಿಂತಿರುವ ವೀಡಿಯೋ ವೈರಲ್​ ಆಗುತ್ತಿದೆ. ಈ ವೀಡಿಯೋ ನೋಡಿದ ಎಲ್ಲರೂ ರಶ್ಮಿಕಾನೇ ಎಂದು ನಂಬಿದ್ದಾರೆ. ಜತೆಗೆ ಈ ರೀತಿ ರಶ್ಮಿಕಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಎಷ್ಟುಯ ಸರಿ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.


ವಿಡಿಯೋ ವಿಚಾರವಾಗಿ ರಾಶ್ಮಿಕಾ ಪ್ರತಿಕ್ರಿಯೆ..!
ಸದ್ಯ ಈ ವಿಡಿಯೋ ವಿಚಾರವಾಗಿ ರಶ್ಮಿಕಾ ಮಂದಣ್ಣ ತಮ್ಮ ಅಧಿಕೃತ ಇನ್ಸ್​ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಒಂದನ್ನ ಪೋಸ್ಟ್​​ ಮಾಡಿದ್ದಾರೆ. ಹಾಗಿದ್ರೆ ರಶ್ಮಿಕಾ ಮಾಡಿದ ಪೋಸ್ಟ್​​​ನಲ್ಲಿ ಏನಿದೆ ಅನ್ನೋದನ್ನ ನೋಡೋಣ


ಈ ರೀತಿಯ ವಿಡಿಯೋ ಆನ್ಲೈನ್​​​ನಲ್ಲಿ ಹರಿದಾಡುತ್ತಿರುವುದು ಬಗ್ಗೆ ಮಾತನಾಡುವುದಕ್ಕೆ ನನಗೆ ಅತ್ಯಂತ ಬೇಜಾರಾಗಿದೆ. ಟೆಕ್ನಾಲಜಿಗಳನ್ನ ಈ ರೀತಿಯಾಗಿ ಮಿಸ್​ಯೂಸ್​​​ ಮಾಡಿಕೊಳ್ಳುತ್ತಿರೋದು ಭಯಾನಕ ಕೃತ್ಯ. ನಾನೊಬ್ಬ ಮಹಿಳೆ ಮತ್ತು ನಟಿಯಾಗಿ ನನ್ನ ಜತೆ ನಿಂತಿರುವ ನನ್ನ ಫ್ರೆಂಡ್ಸ್​​ ಮತ್ತು ಕುಟುಂಬವೇ ನನಗೆ ಧೈರ್ಯ ಮತ್ತಯ ಸ್ಥೈರ್ಯ. ನಾನು ಶಾಲೆ ಅಥವಾ ಕಾಲೇಜಿಗೆ ಹೋಗುತ್ತಿದ್ದಾಗ ಈ ರೀತಿ ಏನಾದ್ರೂ ಆಗಿದ್ದರೆ ಅದನ್ನ ಹೇಗೆ ಎದುರಿಸುತ್ತಿದ್ದೆನೋ ನನಗೆ ಗೊತ್ತಿಲ್ಲ. ಈ ರೀತಿಯ ಕೃತ್ಯಗಳ ವಿರುದ್ಧ ನಾವು ಕಮ್ಯುನಿಟಿಯಂತೆ ಹೋರಾಡಬೇಕು. ಈ ರೀತಿ ತಮ್ಮ ಗುರುತನ್ನ ಮರೆಮಾಚಿ ವಿಡಿಯೋ ಹರಿಬಿಟ್ಟಿರುವ ಕಳ್ಳರನ್ನ ಪತ್ತೆ ಮಾಡಬೇಕು.


ಸದ್ಯ ರಶ್ಮಿಕಾ ವಿಡಿಯೋವನ್ನ ಈ ರೀತಿ ಮಾಡಿರುವುದಕ್ಕೆ ಜನರು ಬಿಗ್​​ ಬಿ ಅಮಿತಾಬ್​​ ಬಚ್ಚನ್​ ಕೂಡಾ ಆಕ್ರೋಶ ಹೊರಹಾಕಿದ್ದಾರೆ. ನಕಲಿ ವಿಡಿಯೋ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಆಗ್ರಹಿಸಿದ್ದಾರೆ. ದೇಶದಲ್ಲಿ ಫೇಕ್‌ಗಳನ್ನು ಎದುರಿಸಲು ಕಾನೂನು ಮತ್ತು ನಿಯಂತ್ರಕ ಚೌಕಟ್ಟನ್ನು ರೂಪಿಸಬೇಕು ಎಂದು ಪತ್ರಕರ್ತರೊಬ್ಬರು ‘x’ನಲ್ಲಿ ಒತ್ತಾಯಿಸಿದ್ದು, ಇದನ್ನು ರಿಪೋಸ್ಟ್ ಮಾಡುವ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಮಿತಾಬ್ ಬಚ್ಚನ್ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net