ಕೋಲ್ಕತ: ಮೃತ ಮಗನ ವೀರ್ಯ ಸಂಗ್ರಹ ಸಂಬಂಧ ತಂದೆ ಹೂಡಿದ್ದ ದಾವೆಯನ್ನು ತಿರಸ್ಕರಿಸಿರುವ ಕೋಲ್ಕತ ಹೈಕೋರ್ಟ್ ವಿಧವೆಗೆ ಮಾತ್ರ ಮೃತ ಗಂಡನ ವೀರ್ಯದ ಮೇಲೆ ಹಕ್ಕಿದೆ ಎಂಬ ಮಹತ್ವದ ತೀರ್ಪು ಪ್ರಕಟಿಸಿದೆ.
ನ್ಯಾಯಮೂರ್ತಿ ಸವ್ಯಸಾಚಿ ಭಟ್ಟಾಚಾರ್ಯ ಆದೇಶ ಹೊರಡಿಸಿದ್ದು, ದೆಹಲಿಯ ವೀರ್ಯ ಬ್ಯಾಂಕಿನಲ್ಲಿ ಸಂರಕ್ಷಿಸಲಾಗಿರುವ ಏಕೈಕ ಮಗನ ವೀರ್ಯವನ್ನು ನೀಡುವಂತೆ ತಂದೆ ಮನವಿ ಮಾಡಿದ್ದರು. ಆದರೆ, ನ್ಯಾಯಾಲಯ ತಿರಸ್ಕರಿಸಿದೆ.
2020ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ತಂದೆ, ಮಗನ ವೀರ್ಯ ನೀಡಲು ನನ್ನ ಸೊಸೆ ತಿರಸ್ಕರಿಸಿದಲ್ಲದೆ, ನಮ್ಮ ಮನವಿಯನ್ನು ಸಹ ಅಂಗೀಕರಿಸಲಿಲ್ಲ. ಆಸ್ಪ್ರತೆಯ ವೀರ್ಯ ಬ್ಯಾಂಕ್ ಜತೆಗಿನ ಒಪ್ಪಂದದ ಸಮಯದಲ್ಲಿ ವೀರ್ಯ ಏನಾದರೂ ನಾಶವಾದರೆ, ನಾವು ಕುಲವನ್ನೇ ಕಳೆದುಕೊಳ್ಳಲಿದ್ದೇವೆ ಎಂದು ತಂದೆ ಆತಂಕ ವ್ಯಕ್ತಪಡಿಸಿದ್ದರು.
ಜನವರಿ 19ರಂದು ಮೂರು ಪುಟಗಳ ಆದೇಶ ಓದಿದ ನ್ಯಾಯಮೂರ್ತಿ ಸವ್ಯಸಾಚಿ ಭಟ್ಟಾಚಾರ್ಯ ಅವರು, ವೀರ್ಯ ಪಡೆ ಅನುಮತಿಗೆ ಯಾವುದೇ ಮೂಲಭೂತ ಹಕ್ಕುಗಳು ಇಲ್ಲ. ಆ ಅಧಿಕಾರವೇನಿದ್ದರು ಪತ್ನಿಗೆ ಮಾತ್ರ ಇದೆ ಎಂದು ಹೇಳಿದ್ದಾರೆ.
ಮೃತ ವ್ಯಕ್ತಿಗೆ ಸಂಬಂಧಿಸಿದ ವೀರ್ಯವನ್ನು ದೆಹಲಿ ಆಸ್ಪತ್ರೆಗೆಯಲ್ಲಿ ಸಂಗ್ರಹಿಸಿ ಇಡಲಾಗಿದೆ. ಮದುವೆಯಾದಾಗಿನಿಂದ ಮತ್ತು ಮೃತಪಟ್ಟಾಗಿನಿಂದ ಆತನ ವೀರ್ಯದ ಹಕ್ಕು ಆತನನ್ನು ಹೊರತುಪಡಿಸಿ ಪತ್ನಿಗೆ ಮಾತ್ರ ಇದೆ. ಆದರೆ, ತಂದೆ-ಮಗನಿಗೆ ಇದು ಸಂಬಂಧಿಸಿದ್ದಲ್ಲ ಎಂದು ತಿಳಿಸಿದೆ. (ಏಜೆನ್ಸೀಸ್)