More

    ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಟ್ರಂಪ್​ಗೆ ಕೈ ಕೊಟ್ಟ ಮೆಲನಿಯಾ ಟ್ರಂಪ್​?! 15 ವರ್ಷಗಳ ದಾಂಪತ್ಯ ಅಂತ್ಯ?

    ವಾಷಿಂಗ್ಟನ್​: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್​ ಟ್ರಂಪ್​ ಹೀನಾಯ ಸೋಲುಂಡಿದ್ದು, ಜೋ ಬೈಡೆನ್​ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದಾಗಿದೆ. ಟ್ರಂಪ್​ ಕುಟುಂಬ ಶ್ವೇತಭವನದಿಂದ ಹೊರನಡೆದು ಹೋಗಿದೆ. ಆದರೆ ಶ್ವೇತಭವನದಿಂದ ಹೊರನಡೆಯುತ್ತಿದ್ದಂತೆಯೇ ಟ್ರಂಪ್​ರ ಪತ್ನಿ ಮೆಲನಿಯಾ ಟ್ರಂಪ್​ ಕೂಡ ಟ್ರಂಪ್​ಗೆ ಕೈ ಕೊಡಲಿದ್ದಾರಾ ಎನ್ನು ಕುತೂಹಲ ಆರಂಭವಾಗಿದೆ. ಇಷ್ಟಕ್ಕೆಲ್ಲ ಕಾರಣವಾಗಿರುವುದು ಆ ಒಂದು ವಿಡಿಯೋ.

    ಇದನ್ನೂ ಓದಿ: 31 ಬಾರಿ ಕೋವಿಡ್ ಪಾಸಿಟಿವ್​: ಟೆಸ್ಟ್​ ಮಾಡಿದಾಗಲೆಲ್ಲ ಬಿಡದ ಕರೊನಾ, ಮಹಿಳೆಯ ರಿಪೋರ್ಟ್​ ನೋಡಿ ವೈದ್ಯರು ಶಾಕ್​!​​

    ಶ್ವೇತಭವನದಿಂದ ವಾಪಾಸಾದ ದಂಪತಿ, ಫ್ಲೋರಿಡಾದಲ್ಲಿ ವಿಮಾನವನ್ನು ಇಳಿದು ಕೆಳಗೆ ಬರುತ್ತಿದ್ದಂತೆಯೇ ಟ್ರಂಪ್​, ಮಾಧ್ಯಮದವರಿಗೆ ಕೈ ಬೀಸಿದ್ದಾರೆ. ಆದರೆ ಟ್ರಂಪ್​ ಪಕ್ಕ ನಿಲ್ಲಲೂ ಇಷ್ಟ ಪಡದ ಮೆಲನಿಯಾ ಸೀದಾ ನಡೆದು ಹೋಗಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗಿದೆ. ಟ್ರಂಪ್​ ಸೋತರೆ ಮೆಲನಿಯಾ ವಿಚ್ಛೇದನ ನೀಡಲಿದ್ದಾರೆ ಎನ್ನುವ ಸುದ್ದಿಗಳು ಈ ಮುಂಚೆಯೇ ಹರಿದಾಡಿದ್ದರಿಂದಾಗಿ ಈಗ ಅಂತದ್ದೊಂದು ನಿರ್ಧಾರವನ್ನು ಮೆಲನಿಯಾ ತೆಗೆದುಕೊಂಡಿದ್ದಾರೆಯೇ ಎನ್ನುವ ಪ್ರಶ್ನೆಗಳೂ ಮೂಡಿವೆ.

    ಇದನ್ನೂ ಓದಿ: ಮದುವೆ ನಿಶ್ಚಯವಾಗಿದ್ದ ಮಧುಮಗಳಿಗೆ ತಾಳಿಕಟ್ಟಿ ಬಿಗ್ ​ಶಾಕ್​ ಕೊಟ್ಟ ಯುವಕನ ವಿರುದ್ಧ ದೂರು ದಾಖಲು!

    ಮೂಲಗಳ ಪ್ರಕಾರ ಟ್ರಂಪ್​ ಪತ್ನಿ ಮೆಲನಿಯಾ ಟ್ರಂಪ್​ ವಿಚ್ಛೇದನ ನೀಡಲು ತಯಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಈ ಹಿಂದೆಯೇ ಕೇಳಿಬಂದಿತ್ತು. ಟ್ರಂಪ್​ ಆಡಳಿತದಲ್ಲಿದ್ದ ಸಹಾಯಕರೊಬ್ಬರು ಈ ವಿಚಾರವನ್ನು ತಿಳಿಸಿದ್ದು, ಯಾವುದೇ ಕ್ಷಣದಲ್ಲಿ ಮೆಲನಿಯಾ ಡಿವೋರ್ಸ್​ ನೀಡಬಹುದು ಎಂದಿದ್ದರು. ಶ್ವೇತಭವನದಲ್ಲಿ ಟ್ರಂಪ್​ ಅವರು ಪ್ರತ್ಯೇಕ ಬೆಡ್​ರೂಮ್​ ಹೊಂದಿದ್ದರು. ಅವರ ಮದುವೆ ಒಂದು “ವಹಿವಾಟು” ಆಗಿತ್ತು ಎಂದು ಅಮೆರಿಕದ ಮಾಜಿ ಪ್ರಥಮ ಮಹಿಳೆ ಮೆಲೆನಿಯಾ ಟ್ರಂಪ್​ ಅವರ ಹಿರಿಯ ಸಲಹೆಗಾರರಾಗಿ ನೇಮಕವಾಗಿದ್ದ ಸ್ಟೇಫನೈ ವಾಕ್​ಆಫ್​ ಅವರು ಅಮೆರಿಕ ಮಾಧ್ಯಮಗಳಿಗೆ ತಿಳಿಸಿದ್ದರು. (ಏಜೆನ್ಸೀಸ್​)

    ಆನೆಗೇ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಕೊನೆಯುಸಿರೆಳೆದ ಆನೆ

    ಎಣ್ಣೆ ಕುಡಿಯಲು ಹೋದವನು ವಾಪಾಸು ಬರಲೇ ಇಲ್ಲ; ಸ್ಕೆಚ್​ ಹಾಕಿ ಕೊಲೆ ಮಾಡಿಸಿದಳಾ ಪತ್ನಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts