ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರಸ್ತೆಗಳಿದಿರುವ ರೈತರು ಡಿಸೆಂಬರ್ 8ರಂದು ಭಾರತ್ ಬಂದ್ಗೆ ಕರೆ ನೀಡಿದ್ದಾರೆ. ಅನೇಕ ರಾಜಕೀಯ ಪಕ್ಷಗಳು ಹಾಗೂ ಒಕ್ಕೂಟ, ಸಂಘಟನೆಗಳು ಈ ಬಂದ್ಗೆ ಬೆಂಬಲ ಸೂಚಿಸಿವೆ. ಆದರೆ ನಾವು ಮಾತ್ರ ಬೆಂಬಲ ನೀಡುವುದಿಲ್ಲ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ತಿಳಿಸಿದೆ.
ಭಾರತ್ ಬಂದ್ ವಿಚಾರದಲ್ಲಿ ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘ (ಎಟ್ವಾ) ಮತ್ತು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಚರ್ಚೆ ನಡೆಸಿದೆ. ಭಾರತ್ ಬಂದ್ನಲ್ಲಿ ಈ ಎರಡೂ ಒಕ್ಕೂಟಗಳು ಬೆಂಬಲ ಸೂಚಿಸುವುದಿಲ್ಲ. ಸಾರಿಗೆ ಮತ್ತು ವ್ಯಾಪಾರ ವಹಿವಾಟು ಎಂದಿನಂತೆ ನಾಳೆಯೂ ನಡೆಯಲಿದೆ ಎಂದು ತಿಳಿಸಲಾಗಿದೆ.
ಈ ವಿಚಾರವಾಗಿ ಮಾತನಾಡಿರುವ ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ ಭಾರ್ತಿಯ, 'ರೈತ ಹೋರಾಟಕ್ಕೆ ಅಥವಾ ಭಾರತ್ ಬಂದ್ಗೆ ಬೆಂಬಲ ಸೂಚಿಸಿ ಎಂದು ಯಾವುದೇ ರೈತ ಸಂಘಟನೆಯಾಗಲೀ ಅಥವಾ ಮುಖಂಡರಾಗಲಿ ನಮ್ಮನ್ನು ಭೇಡಿ ಮಾಡಿಲ್ಲ. ಆದ್ದರಿಂದ ಬೆಂಬಲದ ಬಗ್ಗೆ ನಾವು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮೊನ್ನೆ ಬರ್ತಡೇ ಗಿಫ್ಟ್ ಪಡೆದಿದ್ದ ಬೈಕ್ನಿಂದಲೇ ಹೊಯ್ತು ವಿದ್ಯಾರ್ಥಿಗಳಿಬ್ಬರ ಪ್ರಾಣ: ಪೊಲೀಸರಿಗೆ ಸಿಕ್ತು ರಹಸ್ಯ ವಸ್ತು!
ರೈತರು ಸರ್ಕಾರದ ಜತೆ ಮಾತುಕತೆಯಲ್ಲಿರುವಾಗ ಈ ಬಂದ್ ಸರಿಯಲ್ಲ. ವ್ಯಾಪಾರಿಗಳು ಮತ್ತು ಸಾರಿಗೆ ದೇಶದ ಆರ್ಥಿಕತೆಯ ಅವಿಭಾಜ್ಯ ಅಂಗಗಳು. ರೈತರ ಬೇಡಿಕೆಗಳನ್ನು ಸರ್ಕಾರ ಚರ್ಚೆ ನಡೆಸುತ್ತಿರುವುದರಿಂದಾಗಿ ಇವೆಲ್ಲವೂ ಒಂದು ಅಂತ್ಯಕ್ಕೆ ಬರುತ್ತದೆ ಎಂದು ನಂಬಿದ್ದೇವೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)