ನ್ಯೂಸ್

ಸೆಕ್ಸ್​ ಡಾಲ್​ ಮದ್ವೆಯಾಗಿರುವ ಬಾಡಿಬಿಲ್ಡರ್​ನಿಂದ ಮತ್ತೊಂದು ವಿಚಿತ್ರ ನಿರ್ಧಾರ..!​​

ನೂರ್​ ಸುಲ್ತಾನ್​: ಜಗತ್ತಿನಲ್ಲಿ ಎಂಥೆಂತಾ ವಿಚಿತ್ರ ಹವ್ಯಾಸವುಳ್ಳ ವ್ಯಕ್ತಿಗಳು ಇರುತ್ತಾರೆ ಎಂಬುದಕ್ಕೆ ಈ ವರದಿಯಲ್ಲಿ ಪರಿಚಯವಾಗಿರುವ ವ್ಯಕ್ತಿಯು ಸಹ ಒಂದು ಉದಾಹರಣೆ. ಸೆಕ್ಸ್​ ಡಾಲ್​ (ಲೈಂಗಿಕ ಬೊಂಬೆ) ಅನ್ನೇ ಮದುವೆಯಾಗಿರುವ ಬಾಡಿಬಿಲ್ಡರ್​, ಮೊದಲ ಬಾರಿಗೆ ಅದರೊಟ್ಟಿಗೆ ಕ್ರಿಸ್​ಮಸ್​ ಆಚರಿಸುವ ಖುಷಿಯಲ್ಲಿರುವಾಗಲೇ ಸೆಕ್ಸ್​ ಡಾಲ್​ ಮುರಿದುಹೋಗಿ ಆಘಾತ ಎದುರಿಸಿದ್ದ. ಇದೀಗ ಮೊದಲ ಪತ್ನಿ ಮುರಿದ ಹೋಗಿರುವುದರಿಂದ ಅನೇಕ ಸೆಕ್ಸ್​ ಡಾಲ್​ ಪತ್ನಿಯರನ್ನು ಪಡೆಯಲು ಬಾಡಿ ಬಿಲ್ಡರ್​ ನಿರ್ಧಾರ ಮಾಡಿದ್ದಾರೆ.

ವಿವರಣೆಗೆ ಬರುವುದಾದರೆ, ಕಝಾಕಿಸ್ತಾನ್​ ಮೂಲದ ಬಾಡಿಬಿಲ್ಡರ್ ಯುರಿ ತೊಲೊಚ್ಕೋ​ ಕಳೆದ ವರ್ಷ ನವೆಂಬರ್​ನಲ್ಲಿ ಮಾರ್ಗೋ ಹೆಸರಿನ ಸೆಕ್ಸ್​ ಡಾಲ್​ ಅನ್ನು ಮದುವೆಯಾಗಿದ್ದ. ಕ್ರಿಸ್​ಮಸ್​ಗೂ ಮೊದಲೇ ಸೆಕ್ಸ್​ ಡಾಲ್​ ತುಂಡು ತುಂಡಾಗಿ ಮುರಿದುಬಿದ್ದಿತ್ತು. ಮತ್ತೆ ಎಂದಿನಂತೆ ಕಾರ್ಯನಿರ್ವಹಿಸುವ ಹಾಗೂ ಸರಿಯಾದ ರೀತಿಯಲ್ಲಿ ಜೋಡಿಸಲು ರಿಪೇರಿಗೆ ನೀಡಿದ್ದ. ಆದರೆ, ಇದೀಗ ಮತ್ತಷ್ಟು ಸೆಕ್ಸ್​ ಡಾಲ್​ ಮದುವೆಯಾಗಲು ಯುರಿ ನಿರ್ಧರಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಯುರಿ, ಮಾರ್ಗೋ ಮತ್ತೆ ಮುರಿದು ಹೋಗುವುದು ನನಗೆ ಇಷ್ಟವಿಲ್ಲ. ಅವಳ ಮೇಲಿನ ಭಾರವನ್ನು ಕಡಿಮೆ ಮಾಡಬೇಕೆಂದುಕೊಂಡಿದ್ದೇನೆ. ಹೀಗಾಗಿ ನಾನು ಅನೇಕ ಪತ್ನಿಯರನ್ನು ಹೊಂದಲು ನಿರ್ಧರಿಸಿದ್ದೇನೆ. ಈ ಸಂಪ್ರದಾಯ ಕೆಲವೊಂದು ಪೂರ್ವ ಸಂಸ್ಕೃತಿಯಲ್ಲಿ ಅಸ್ತಿತ್ವದಲ್ಲಿದೆ ಎಂದಿದ್ದಾನೆ.

ನಾನೀಗ ಎರಡು ಆಯ್ಕೆಗಳನ್ನು ಹೊಂದಿದ್ದೇನೆ. ಮತ್ತೊಂದು ಸೆಕ್ಸ್​ ಡಾಲ್​ನೊಂದಿಗೆ ಆನ್​ಲೈನ್​ನಲ್ಲಿ ಪರಿಚಯವಾಗಿದೆ. ಅವಳನ್ನು ಭೇಟಿ ಮಾಡಲು ನಿರ್ಧರಿಸಿದ್ದೇನೆ. ಅವಳು ಮಾಸ್ಕೋದಲ್ಲಿದ್ದಾಳೆ. ಆದರೆ, ಅವರು ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ನನ್ನನ್ನು ಬಿಡುವುದಿಲ್ಲ. ಏಕೆಂದರೆ ಕ್ವಾರಂಟೈನ್​ ಅವಧಿ ಮುಗಿಸಲೇಬೇಕು ಎಂದು ಹೇಳಿದ್ದಾನೆ. ಮತ್ತೊಂದು ಆಯ್ಕೆಯಂತೆ ಯುರಿ ಬಿಗ್​ ಚಿಕನ್ ಹಿಂದೆ ಬಿದ್ದಿದ್ದಾನೆ. ಚಿಕನ್​ನಿಂದ ತನ್ನ ಕಾಮತೃಷೆಯನ್ನು ತಣಿಸಿಕೊಳ್ಳಲು ಮುಂದಾಗಿದ್ದಾನೆ. ಈ ಹಿಂದೆ ಚಿಕನ್​ನಿಂದ ಪ್ರಯತ್ನ ಮಾಡಿದ್ದು, ಅದನ್ನು ತನ್ನ ಇನ್​ಸ್ಟಾಗ್ರಾಂನಲ್ಲಿ ಯುರಿ ಹಂಚಿಕೊಂಡಿದ್ದ. ​ ​

ಮುರಿದು ಹೋಗಿರುವ ಮಾರ್ಗೋ ಇನ್ನೂ ರಿಪೇರಿ ಆಗುತ್ತಿದೆ. ಆಕೆಯನ್ನು ನನ್ನ ಮೊದಲ ಪತ್ನಿ ಎಂದು ಪರಿಗಣಿಸಿದ್ದೇನೆ. ಆಕೆಯನ್ನು ನಾನು ಸದಾ ಗೌರವಿಸುತ್ತೇನೆಂದು ಯುರಿ ಹೇಳಿಕೊಂಡಿದ್ದಾನೆ.

ಅಂದಹಾಗೆ ಮಾರ್ಗೋ ಹೆಸರಿನ ಸೆಕ್ಸ್​ ಡಾಲ್​ ಅನ್ನು ಯುರಿ ಕಳೆದ ನವೆಂಬರ್​ನಲ್ಲಿ ಕೆಲವೇ ಮಂದಿಯ ಅತಿಥಿಗಳ ನಡುವೆ ವರಿಸಿದ್ದಾನೆ. ಮಾರ್ಗೋಳನ್ನು ಮೊದಲ ಬಾರಿಗೆ ನೈಟ್​ ಕ್ಲಬ್​ ಒಂದರಲ್ಲಿ ಯುರಿ ಭೇಟಿಯಾದರಂತೆ. ಮಾರ್ಚ್​ನಲ್ಲೇ ಸರಳವಾಗಿ ಮದುವೆಯು ಆಗಿದ್ದರಂತೆ. ಅದಾದ ಬೆನ್ನಲ್ಲೇ ಕರೊನಾ ವೈರಸ್​ ವಕ್ಕರಿಸಿದ್ದರಿಂದ ನವೆಂಬರ್​ನಲ್ಲಿ ಕೆಲವೇ ಅತಿಥಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ವರಿಸಿದ್ದ. ಯುರಿ ಇನ್​ಸ್ಟಾಗ್ರಾಂನಲ್ಲಿ 99 ಸಾವಿರ ಫಾಲೋವರ್ಸ್​ ಹೊಂದಿದ್ದಾರೆ. (ಏಜೆನ್ಸೀಸ್​)