More

    ಅಮ್ಮನ ಆಸ್ತಿ ತೆಗೆದುಕೊಂಡು ಬಾ ಎಂದು ಅಕ್ಕನಿಗೆ ಗಂಡ ಪೀಡಿಸುತ್ತಿದ್ದಾನೆ- ಅವಳಿಗೂ ಪಾಲು ಇದೆಯಾ?

    ಅಮ್ಮನ ಆಸ್ತಿ ತೆಗೆದುಕೊಂಡು ಬಾ ಎಂದು ಅಕ್ಕನಿಗೆ ಗಂಡ ಪೀಡಿಸುತ್ತಿದ್ದಾನೆ- ಅವಳಿಗೂ ಪಾಲು ಇದೆಯಾ?ನಮ್ಮ ತಾಯಿಗೆ ಮೂರು ಜನ ಗಂಡು ಮತ್ತು ಎರಡು ಹೆಣ್ಣುಮಕ್ಕಳು. ಹಿರಿಯ ಅಕ್ಕನ ಗಂಡ ಕುಡುಕ. ಯಾವಾಗಲೂ ಅವಳಿಗೆ ಚಿತ್ರಹಿಂಸೆ ಕೊಡುತ್ತಿರುತ್ತಾನೆ. ಅವನಿಗೂ ನಮಗೂ ಯಾವಾಗಲೂ ಜಗಳ ಆಗುತ್ತಿರುತ್ತದೆ. ನಮ್ಮ ತಾಯಿ ಅವರ ತಂದೆ ತಾಯಿಗೆ ಒಬ್ಬಳೇ ಹೆಣ್ಣುಮಗಳು. ಅವರಿಗೆ ತನ್ನ ತವರಿನಿಂದ ಮೂರು ಎಕರೆ ಜಮೀನು ಬಂದಿದೆ. ಅದು ಅವರ ಹೆಸರಿನಲ್ಲೇ ಇದೆ. ಈಗ ನಮ್ಮ ಅಕ್ಕನ ಗಂಡ ಆ ಆಸ್ತಿಯಲ್ಲಿ ನಿನಗೂ ಭಾಗ ಇದೆ ಎಂದು ಕೇಸು ಹಾಕು ಎಂದು ಗಲಾಟೆ ಮಾಡುತ್ತಿದ್ದಾನೆ. ಅಕ್ಕನಿಗೂ ಸಹ ಅವಳಿಗೂ ಭಾಗ ಇದೆ ಎಂದು ನಂಬಿಸಿದ್ದಾನೆ. ಈಗ ನನ್ನ ಪ್ರಶ್ನೆ ಏನೆಂದರೆ, ನಮ್ಮ ತಾಯಿಯ ಆಸ್ತಿಯಲ್ಲಿ ಅಕ್ಕನಿಗೆ ಭಾಗ ಇದೆಯೇ ಅವರು ಕೇಸು ಹಾಕಿದರೆ ನಾವು ಹೋರಾಟ ಮಾಡಲು ಕಾನೂನು ಇದೆಯೇ?

    ಉತ್ತರ: ನೀವು ಹೆದರಬೇಕಾಗಿಲ್ಲ. ನಿಮ್ಮ ತಾಯಿಗೆ ಆಕೆಯ ತವರಿನಿಂದ ಬಂದ ಆಸ್ತಿಯಲ್ಲಿ, ನಿಮ್ಮ ತಾಯಿ ಬದುಕಿರುವವರೆಗೆ ನಿಮ್ಮ ತಂದೆಗಾಗಲೀ, ಯಾವುದೇ ಮಕ್ಕಳಿಗಾಗಲೀ ಹಕ್ಕು ಇರುವುದಿಲ್ಲ. ನಿಮ್ಮ ತಾಯಿ ಬದುಕಿರುವಾಗ ಆಸ್ತಿಯನ್ನು ಏನಾದರೂ ಮಾಡಬಹುದು. ಯಾರಿಗೆ ಬೇಕಾದರೂ ದಾನ, ಭೋಗ್ಯ ಕ್ರಯ, ವಿಲ್ ಮಾಡಬಹುದು.

    ಆದರೆ, ನಿಮ್ಮ ತಾಯಿ ಆಸ್ತಿಯನ್ನು ಹಾಗೇ ಉಳಿಸಿ ಸತ್ತರೆ, ಆ ಆಸ್ತಿಯಲ್ಲಿ ನಿಮ್ಮ ತಾಯಿಯ ಐದೂ ಮಕ್ಕಳಿಗೆ ಸಮಪಾಲು ಇರುತ್ತದೆ. ಅಂತಹ ಸಂದರ್ಭದಲ್ಲಿ ನಿಮ್ಮ ಅಕ್ಕನಿಗೂ ಒಂದು ಪಾಲು ಸಿಗುತ್ತದೆ. ತಾಯಿ ಬದುಕಿರುವಾಗ ನಿಮ್ಮ ಅಕ್ಕ ಕೇಸು ಹಾಕಿದರೆ ನೀವು ಹೆದರಬೇಕಾಗಿಲ್ಲ.ಇನ್ನು ಆಕೆಗೆ ಅವಳ ಗಂಡನಿಂದ ಆಗುತ್ತಿರುವ ಚಿತ್ರಹಿಂಸೆಯಿಂದ ತಪ್ಪಿಸಿಕೊಳ್ಳಲು, ನಿಮ್ಮ ಅಕ್ಕ ಧೈರ್ಯ ಮಾಡಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾನೂನಿನ ಕೆಳಗೆ ಪ್ರಕರಣ ದಾಖಲಿಸಿ ರಕ್ಷಣೆಯ ಆದೇಶ ಪಡೆಯಬಹುದು.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ   https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಅಪ್ಪನ ಕೆಲಸ ಅಮ್ಮನಿಗೆ ಸಿಕ್ಕರೆ ಅವರು ಬೇಕಾದವರಿಗೆ ಮಾತ್ರ ಆಸ್ತಿ ಬರೆಯಬಹುದೆ?

    ಗಂಡ ಸಂಶಯಪಿಶಾಚಿ- ಅಮ್ಮನ ಮನೆಗೆ ಬಂದಿದ್ದೇನೆ; ಡಿವೋರ್ಸ್​ ಪಡೆದರೆ ನನ್ನ ವಸ್ತು ವಾಪಸ್​ ಸಿಗುವುದೆ?

    ಅತ್ತೆ ಬ್ಲ್ಯಾಕ್​ಮೇಲ್​ ಮಾಡಿ ಮೃತ ಮಗನ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ- ಅವರಿಗೂ ಕೊಡಬೇಕಾ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts