More

    ಈಕೆಯ ಎದೆಹಾಲಿಗೆ ಲಕ್ಷ ಲಕ್ಷ ರೂಪಾಯಿ- ಮನೆಯಲ್ಲೇ ಕೂತು ಸಿಕ್ಕಾಪಟ್ಟೆ ಸಂಪಾದನೆ!

    ಟರ್ಕಿ: ಎದೆಹಾಲಿನ ಮಹತ್ವ ಎಲ್ಲರಿಗೂ ತಿಳಿದದ್ದೇ. ಚಿಕ್ಕಮಕ್ಕಳಿಗೆ ಎದೆಹಾಲು ಜೀವರಕ್ಷಕವಿದ್ದಂತೆ, ಎದೆಹಾಲು ಸಿಗದ ಮಕ್ಕಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಆದ್ದರಿಂದ ಇದು ಅಮೃತ ಎನ್ನುವುದು ಇದಾಗಲೇ ಸಾಬೀತಾಗಿದೆ.

    ಇದೇ ಕಾರಣಕ್ಕೆ ಕೆಲವು ಕಡೆಗಳಲ್ಲಿ ಎದೆಹಾಲಿನ ಬ್ಯಾಂಕ್​ ಕೂಡ ಸ್ಥಾಪನೆ ಮಾಡಲಾಗಿದೆ. ಆದರೆ ಎದೆಹಾಲನ್ನೇ ಮಾರಾಟ ಮಾಡಿ ಓರ್ವ ಮಹಿಳೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾಳೆ ಎನ್ನುವುದು ನಿಮಗೆ ಗೊತ್ತೆ?

    ಈಕಗೆ ಟರ್ಕಿ ದೇಶದ ದಕ್ಷಿಣದಲ್ಲಿರುವ ಸೈಪ್ರಸ್​ ಎಂಬ ಪ್ರಾಂತ್ಯದವಳು. ಹೆಸರು ರಫೇಲ್​ ಲೆಂಪ್ಯೂ. ಈಕೆ ಈಗ ತಿಂಗಳಿಗೆ ಲಕ್ಷಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾಳೆ, ಇದಕ್ಕೆ ಕಾರಣ ಆಕೆಯ ಎದೆಹಾಲು.

    ಎರಡು ವರ್ಷಗಳ ಹಿಂದೆ ಈಕೆಗೆ ತಾಯಿ ಗಂಡು ಮಗುವಾಗಿತ್ತು. ತನ್ನ ಮಗುವಿಗೆ ಎದೆ ಹಾಲು ಉಣಿಸುತ್ತಿದ್ದಳು. ಆದರೆ ಹಾಲು ಅತ್ಯಧಿಕವಾಗಿ ಈಕೆಯಲ್ಲಿ ಉತ್ಪತ್ತಿಯಾಗುತ್ತಿತ್ತು. ಮಗು ಕುಡಿದರು ಕೂಡ ಹಾಲು ಅಧಿಕವಾಗಿ ಉಳಿಯುತ್ತಿತ್ತು.

    ಇದನ್ನೂ ಓದಿ: ಶುರುವಾಗಿದೆ 5 ಅಂತಸ್ತಿನ ವಯಸ್ಕರ ಥೀಮ್​ಪಾರ್ಕ್​- ಪೋರ್ನ್​ ಸ್ಟಾರ್​ಗಳಿಂದಲೇ ಸೇವೆ!

    ಆದ್ದರಿಂದ ಹೆಚ್ಚುವರಿ ಹಾಲನ್ನು ಕಡಿಮೆ ಹಾಲು ಇರುವ ತಾಯಂದಿರಿಗೆ ಕೊಡಳು ಸೈಪ್ರಸ್​ ಮುಂದಾದಳು. ಈಕೆ ಹೀಗೆ ಹಾಲನ್ನು ನೀಡುತ್ತಿರುವ ವಿಷಯ ಕೆಲವು ಬಾಡಿ ಬಿಲ್ಡರ್​ಗಳಿಗೆ ತಿಳಿಯಿತು. ಅವರ ಬಾಡಿಯನ್ನು ಇನ್ನೂ ಚೆನ್ನಾಗಿ ರೂಪಿಸಿಕೊಳ್ಳಬೇಕು ಎಂದರೆ ಎದೆಹಾಲಿನ ಅಗತ್ಯವಿರುವುದಾಗಿ ಅರಿತ ಅವರು, ತಮಗೆ ಹಾಲನ್ನು ಪೂರೈಕೆ ಮಾಡುವಂತೆ ಸೈಪ್ರಸ್​ನನ್ನು ಕೇಳಿದರು.

    ಅದಕ್ಕಾಗಿ ಅವರು ಹಣವನ್ನು ನೀಡುತ್ತಿದ್ದ ಕಾರಣ, ಎದೆಹಾಲಿನ ಮಾರಾಟ ಶುರುವಾಯಿತು. ಹೀಗೆ ಹೆಚ್ಚು ಹೆಚ್ಚು ಬಾಡಿ ಬಿಲ್ಡರ್​ಗಳು ಹೆಚ್ಚು ಹೆಚ್ಚು ಹಣಕೊಟ್ಟು ಈಕೆಯಿಂದ ಹಾಲನ್ನು ಖರೀದಿ ಮಾಡಲು ಶುರು ಮಾಡಿದರು. ಇದರಿಂದಾಗಿ ಸೈಪ್ರಸ್​ ಲಕ್ಷ ಲಕ್ಷ ರೂಪಾಯಿ ಸಂಪಾದನೆ ಮಾಡತೊಡಗಿದಳು. ನಂತರ ಈಕೆಗೆ ಇನ್ನೊಂದು ಮಗುವಾದಾಗಲೂ ಹೀಗೆಯೇ ಆಗಿರುವುದರಿಂದ ಈಕೆಯ ಹಣ ಸಂಪಾದನೆ ಮುಂದುವರೆದಿದೆ.

    ಈ ಹಾಲಿನಲ್ಲಿ ಅತಿ ಹೆಚ್ಚು ಪೌಷ್ಠಿಕಾಂಶವಿರುವ ಕಾರಣ ಬಾಡಿ ಬಿಲ್ಡರ್​ಗಳಿಂದ ಬೇಡಿಕೆ ಹೆಚ್ಚುತ್ತಲೇ ಇದೆ ಎನ್ನುತ್ತಾಳೆ ಸೈಪ್ರಸ್​. ಸುಮಾರು 500 ಲೀಟರ್ ಎದೆಹಾಲನ್ನು ಮಾರಾಟ ಮಾಡಿದ್ದಾರಂತೆ. ಈಗ ತನ್ನಲ್ಲಿ ಇರುವ ಹೆಚ್ಚುವರಿ ಹಾಲಿನ ಕುರಿತು ಫೇಸ್​ಬುಕ್​ನಲ್ಲಿಯೂ ಪೋಸ್ಟ್​ ಮಾಡಿರುವ ಕಾರಣ, ಹಾಲಿಗೆ ಇನ್ನೂ ಹೆಚ್ಚು ಹಣ ಕೊಡಲು ತಯಾರಿರುವವರು ಮುಂದೆ ಬರುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾಳೆ ಸೈಪ್ರಸ್​. ಹಾಲನ್ನು ಪಂಪ್​ ಮಾಡಲು ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದನ್ನೇ ಬಳಕೆ ಮಾಡಿಕೊಂಡು ನಾನು ಹಾಲನ್ನು ತೆಗೆಯುತ್ತೇನೆ ಎನ್ನುತ್ತಾಳೆ.

    ಗ್ಯಾಂಗ್​ರೇಪಿಸ್ಟ್​ಗಳಿಗೆ ಗಲ್ಲುಶಿಕ್ಷೆಯಾಗುವ ಕಾನೂನಾಗಲಿ-ಮನುಸ್ಮೃತಿ ಉಲ್ಲೇಖಿಸಿದ ಹೈಕೋರ್ಟ್​

    ಚಿನ್ನ ತಂದರಷ್ಟೇ ಸೀಮಂತ: ಲಕ್ಷ ಲಕ್ಷ ಕೊಟ್ಟರೂ ಮುಗಿಯದ ಧನದಾಹ- ಟೆಕ್ಕಿ‌ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts