More

    3 ಲಕ್ಷ ಮೆಣಸಿನಕಾಯಿ ಚೀಲ ಆವಕ

    ಬ್ಯಾಡಗಿ: ಅಂತಾರಾಷ್ಟ್ರೀಯ ಮಾರುಕಟ್ಟೆ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರ 3,01,934 ಲಕ್ಷ ಚೀಲ ಮೆಣಸಿನಕಾಯಿ ಆವಕವಾಗುವ ಮೂಲಕ 2 ಬಾರಿ ಮೂರು ಲಕ್ಷ ಚೀಲ ದಾಟಿದ ದಾಖಲೆಯಾಗಿದೆ.

    ಪ್ರಸಕ್ತ ಸಾಲಿನಲ್ಲಿ ಒಟ್ಟು 8 ಬಾರಿ ಒಂದು ಲಕ್ಷ ಚೀಲ ಹಾಗೂ 3 ಬಾರಿ 2 ಲಕ್ಷ ಚೀಲ, 2 ಬಾರಿ 3 ಲಕ್ಷ ಚೀಲ ದಾಟುವ ಮೂಲಕ ದಾಖಲೆಯ ಆವಕ ತಲುಪಿದೆ.

    2023-24ರ ಸಾಲಿನಲ್ಲಿ ಮಾರುಕಟ್ಟೆ ಶುಲ್ಕ 18 ಕೋ.ರೂ. ಗುರಿ ತಲುಪಬೇಕಿದ್ದು, ಫೆ. 26ರವರೆಗೆ ಒಟ್ಟು 13.5 ಕೋ.ರೂ. ಗುರಿ ಸಾಧನೆ ಮಾಡಿದೆ. ಗುರಿ ತಲುಪಲು ಇನ್ನೂ 4.5 ಕೋ. ರೂ. ಶುಲ್ಕ ಸಂಗ್ರಹ ತಲುಪಬೇಕಿದ್ದು, ಒಂದೂವರೆ ತಿಂಗಳ ಬಾಕಿಯಿದೆ. ಬರದ ಮಧ್ಯೆಯೂ ಮೆಣಸಿನಕಾಯಿ ಹೆಚ್ಚು ಬೆಳೆದ ಪರಿಣಾಮ ಹಾಗೂ ರಾಜ್ಯದ ಎಲ್ಲ ಮಾರುಕಟ್ಟೆಗಳಿಗಿಂತ ಬ್ಯಾಡಗಿಯಲ್ಲಿ ಗುಣಮಟ್ಟದ ದರ ಲಭಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ರೈತರು ಈ ಕಡೆ ಮುಖ ಮಾಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಖರೀದಿದಾರರಿದ್ದು, 30ಕ್ಕೂ ಹೆಚ್ಚು ಕೋಲ್ಡ್ ಸ್ಟೋರೇಜ್‌ಗಳನ್ನು ನಿರ್ಮಿಸಿರುವುದು ಮಾರುಕಟ್ಟೆಯ ಬೆಳವಣಿಗೆಯಲ್ಲಿ ಪ್ರಮುಖ ಕಾರಣವಾಗಿದೆ.

    75 ಲಕ್ಷ ರೂ. ಶುಲ್ಕ: ಒಂದು ತಿಂಗಳಿಂದ ಸತತವಾಗಿ 2 ಲಕ್ಷ ದಾಟಿದ ಮಾರುಕಟ್ಟೆಯ ಆವಕ ದಿನದಿನವೂ ಏರಿಕೆ ಕಾಣುತ್ತಿದೆ. ಫೆ. 26ರಂದು ಒಂದೇ ದಿನದಲ್ಲಿ ಸುಮಾರು 75 ಲಕ್ಷ ರೂ. ಆವಕ ಮಾರುಕಟ್ಟೆಗೆ ಜಮೆಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

    ಸೋಮವಾರದ ಮಾರುಕಟ್ಟೆ ದರ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿತಳಿ ಮೆಣಸಿನಕಾಯಿ 2389-38091, ಡಬ್ಬಿ ತಳಿ 3069-55003, ಗುಂಟೂರು 1589-18129 ಬೆಲೆಯಲ್ಲಿ ಮಾರಾಟವಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts