More

    ಚಿನ್ನ ತಂದರಷ್ಟೇ ಸೀಮಂತ: ಲಕ್ಷ ಲಕ್ಷ ಕೊಟ್ಟರೂ ಮುಗಿಯದ ಧನದಾಹ- ಟೆಕ್ಕಿ‌ ಆತ್ಮಹತ್ಯೆ!

    ಹೈದರಾಬಾದ್: ಐದು ಲಕ್ಷ ವರದಕ್ಷಿಣೆ ಕೊಟ್ಟರೂ, ಮತ್ತೂ 12 ಲಕ್ಷಕ್ಕೆ ಬೇಡಿಕೆ ಇಟ್ಟ ಗಂಡನ ಮನೆಯ ಹಣದಾಸೆಗೆ ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

    ಹೈದರಾಬಾದ್‍ನ ಪಿಎಸ್ ಪಾಪಿರೆಡ್ಡಿ ನಗರದ 24 ವರ್ಷದ ಕೃಷ್ಣಪ್ರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕಳೆದ ಜೂನ್ ತಿಂಗಳಿನಲ್ಲಿ ಶ್ರವಣ್ ಕುಮಾರ್ ಎಂಬಾತನೊಂದಿಗೆ ಜತೆ ಇವರ ಮದುವೆಯಾಗಿತ್ತು. ಜಿಮ್ ಟ್ರೈನರ್ ಆಗಿದ್ದ ಶ್ರವಣ್‌ ಮನೆಯವರಿಗೆ ಮದುವೆ ಸಂದರ್ಭದಲ್ಲಿ ಪ್ರಿಯಾ ಪಾಲಕರು 5 ಲಕ್ಷ ರೂ. ವರದಕ್ಷಿಣೆಯನ್ನು ನೀಡಿದ್ದರು.

    ಆದರೆ ಮದುವೆಯಾದ ಸ್ವಲ್ಪ ಸಮಯದ ಬಳಿಕ ಹೆಚ್ಚುವರಿಯಾಗಿ 12 ಲಕ್ಷ ರೂ.ಗಳನ್ನು ತವರು ಮನೆಯಿಂದ ತರುವಂತೆ ಒತ್ತಡ ಹಾಕಿದ್ದ ಎನ್ನಲಾಗಿದೆ. ಐದು ತಿಂಗಳ ಗರ್ಭಿಣಿಯಾಗಿದ್ದ ಕೃಷ್ಣಪ್ರಿಯಾ ಅವರ ಸೀಮಂತ ಮಾಡುವುದಾದರೆ ಚಿನ್ನ ತರುವಂತೆ ಗಂಡ ಹಾಗೂ ಆತನ ಮನೆಯವರು ಬೇಡಿಕೆ ಒಡ್ಡಿದ್ದರು. ಇದರಿಂದ ನೊಂದ ಕೃಷ್ಣಪ್ರಿಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಒಬ್ಬಳು ಬದುಕಿದ್ದಾಗ ಇನ್ನೊಂದು ಮದ್ವೆಯಾದ್ರೆ ಎರಡನೇ ಹೆಂಡತಿ ಮಕ್ಕಳಿಗೆ ಆಸ್ತಿ ಸಿಗುತ್ತಾ?

    ಗಂಡನ ಮನೆಯಲ್ಲಿ ಇವರ ಮೃತದೇಹ ಅನುಮಾನಸ್ಪದ ಸ್ಥಿತಿಯಲ್ಲಿ ಬೆಳಕಿಗೆ ಬಂದಿತ್ತು. ತೀವ್ರ ವಿಚಾರಣೆ ನಡೆಸಿದಾಗ ನೇಣು ಹಾಕಿಕೊಂಡು ಮೃತಪಟ್ಟಿರುವುದಾಗಿ ಅತ್ತೆ ಮನೆಯವರು ಹೇಳಿದ್ದಾರೆ. ಹೆಚ್ಚುವರಿ ವರದಕ್ಷಿಣೆ ತರುವಂತೆ ಪುತ್ರಿಗೆ ಕಿರುಕುಳ ನೀಡಿದ್ದರು. ಆದ್ದರಿಂದ ಆಕೆ ಮೃತಪಟ್ಟಿರುವುದಾಗಿ ಪ್ರಿಯಾ ಪೋಷಕರು ಆರೋಪಿಸಿದ್ದಾರೆ.

    ಹೆಚ್ಚುವರಿ 12 ಲಕ್ಷ ರೂ. ತರುವಂತೆ ಶ್ರವಣ್ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಮದುವೆಯ ವೇಳೆ ಐದು ಲಕ್ಷ ರೂಪಾಯಿ ಕೊಟ್ಟಿದ್ದರೂ ಸಮಾಧಾನವಾಗಿರಲಿಲ್ಲ. ಸೀಮಂತ ಕಾರ್ಯ ನಡೆಸಲು ಕೂಡ ಗಂಡ ಹಾಗೂ ಆತನ ಮನೆಯವರು ಗಲಾಟೆ ಮಾಡಿದ್ದರು, ಚಿನ್ನ ತಂದರಷ್ಟೇ ಸೀಮಂತ ಎಂದಿದ್ದರು. ಹೀಗೆ ಮಾಡಿದರೆ ಮಾತ್ರ ತವರು ಮನೆಗೆ ಕಳುಹಿಸುವುದಾಗಿ ಗಂಡ ಹೇಳಿದ್ದ. ಇದರಿಂದ ಮನನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪಾಲಕರು ಆರೋಪಿಸಿದ್ದಾರೆ.

    ಗಂಡ ಹಾಗೂ ಆತನ ಮನೆಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ವಿಚರಣೆ ಕೈಗೊಂಡಿದ್ದಾರೆ.

    ಆರ್​ಆರ್​ಆರ್ ಟೀಸರ್‌ ಬಿಡುಗಡೆ- ಮುಸ್ಲಿಂ ಏಕೆ ಎಂದ ಹಲವರು; ಸರಿಯಾಗಿ ನೋಡಿ ಎಂದರು ಕೆಲವರು!

    ಶೂಟ್‌ಔಟ್‌ ಪ್ರಕರಣ: ಪೊಲೀಸರ ವಶಕ್ಕೆ ಬಿಜೆಪಿ ಮುಖಂಡ- ಕೋರ್ಟ್‌ ಆದೇಶ

    ಸಚಿವ ಅಮಿತ್​ ಷಾ ಹುಟ್ಟುಹಬ್ಬಕ್ಕೆ ಪ್ರಧಾನಿಯಿಂದ ಹೀಗೊಂದು ಟ್ವೀಟ್​​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts