More

    ಶೂಟ್‌ಔಟ್‌ ಪ್ರಕರಣ: ಪೊಲೀಸರ ವಶಕ್ಕೆ ಬಿಜೆಪಿ ಮುಖಂಡ- ಕೋರ್ಟ್‌ ಆದೇಶ

    ಬಲ್ಲಿಯಾ (ಉತ್ತರ ಪ್ರದೇಶ): ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳ ಸಮ್ಮುಖದಲ್ಲೇ ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಉತ್ತರ ಪ್ರದೇಶ ಬಲಿಯಾದ ಬಿಜೆಪಿ ಮುಖಂಡ ಧೀರೇಂದ್ರ ಸಿಂಗ್‌ನನ್ನು ಪೊಲೀಸರ ವಶಕ್ಕೆ ಒಪ್ಪಿಸಿ ಕೋರ್ಟ್‌ ಆದೇಶಿಸಿದೆ.

    ಶಾಸಕ ಸುರೇಂದ್ರ ಸಿಂಗ್ ನಿಕಟವರ್ತಿಯೆಂದೇ ಗುರುತಿಸಿಕೊಂಡಿರುವ ಧೀರೇಂದ್ರ ಸಿಂಗ್​ ಇದೇ 16ರಂದು ಕೊಲೆ ಮಾಡಿರುವ ಆರೋಪ ಹೊತ್ತಿದ್ದಾರೆ.

    ಗುಂಡಿನ ದಾಳಿ ಪ್ರಕರಣ ಸಂಬಂಧ ಕಳೆದ ಭಾನುವಾರ ಧೀರೇಂದ್ರ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದರು. ಅಂದಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಧೀರೇಂದ್ರ ಸಿಂಗ್ ಅವರನ್ನು ಬಲ್ಲಿಯಾ ಕೋರ್ಟ್‌ ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ.

    ಪಡಿತರ ಅಂಗಡಿಗಳನ್ನು ಅಧಿಕಾರಿಗಳ ಸುಪರ್ದಿಗೆ ವಹಿಸುವ ಕಾರ್ಯಕ್ರಮವೊಂದರಲ್ಲಿ ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಸುರೇಂದ್ರ ಅವರನ್ನು ಗುಂಡುಹಾರಿಸಿ ಕೊಲೆ ಮಾಡಿರುವ ಆರೋಪ ಧೀರೇಂದ್ರ ಮೇಲಿದೆ. ಇವರಿಗೆ ಸಹಕರಿಸಿರುವ ಆರೋಪ ಹೊತ್ತ ಸಂತೋಷ್ ಯಾದವ್ ಮತ್ತು ಮರಜೀತ್ ಯಾದವ್​ ಕೂಡ ಉತ್ತರಪ್ರದೇಶ ವಿಶೇಷ ಪೊಲೀಸ್ ಪಡೆ (ಎಸ್‌ಟಿಎಫ್ ) ಬಂಧಿಸಲಾಗಿತ್ತು.

    ಇದನ್ನೂ ಓದಿ: ನಟ ರಾಜಶೇಖರ್‌ ದಂಪತಿಗೆ ಕರೊನಾ: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

    ಕೊಲೆಗೆ ಬಳಸಿದ ಶಸ್ತ್ರಾಸ್ತ್ರ, ದೇಶ ನಿರ್ಮಿತ ಪಿಸ್ತೂಲ್ ಅನ್ನು ಆರೋಪಿಯಿಂದ ವಶಪಡಿಸಿಕೊಳ್ಳಲು ಮತ್ತು ಹೆಚ್ಚಿನ ವಿಚಾರಣೆಗಾಗಿ ಧೀರೇಂದ್ರ ಸಿಂಗ್ ಅವರನ್ನು ಕೋರ್ಟ್ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ.

    ಗುಂಡು ಹಾರಿಸಿದ ಕೂಡಲೇ ಧೀರೇಂದ್ರ ಸಿಂಗ್ ತಲೆಮರೆಸಿಕೊಂಡಿದ್ದರು. ಈ ಪ್ರಕರಣ ಭಾರಿ ಸುದ್ದಿ ಮಾಡುವ ಬೆನ್ನಲ್ಲೇ ಸ್ಥಳೀಯ ಅಧಿಕಾರಿಯನ್ನು ಅಮಾನತುಗೊಳಿಸಿ ಮುಖ್ಯಮಂತ್ರಿ ಆದಿತ್ಯನಾಥ್ ಆದೇಶ ಹೊರಡಿಸಿದ್ದರು.

    ಆರ್​ಆರ್​ಆರ್ ಟೀಸರ್‌ ಬಿಡುಗಡೆ- ಮುಸ್ಲಿಂ ಏಕೆ ಎಂದ ಹಲವರು; ಸರಿಯಾಗಿ ನೋಡಿ ಎಂದರು ಕೆಲವರು!

    ಅನುಮತಿಯಿಲ್ಲದೇ ಸಿಬಿಐಗೆ ನೋ ಎಂಟ್ರಿ ಎಂದ ಮಹಾರಾಷ್ಟ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts