More

    ಕಾಲೇಜು ವಿದ್ಯಾರ್ಥಿನಿ ಮೇಲೆರಗಿದ ಕಾಮುಕರು: ಅತ್ಯಾಚಾರ ಎಸಗಿ ಬೆತ್ತಲೆ ಬಿಟ್ಟು ಪರಾರಿ..!

    ಹೈದರಾಬಾದ್​: ಕಾಲೇಜು ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಬೀ ಫಾರ್ಮಸಿ ವಿದ್ಯಾರ್ಥಿನಿಯನ್ನು ಆಟೋ ಚಾಲಕ ಸೇರಿದಂತೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆನ್ನಲಾದ ಘಟನೆ ಗಾಟ್ಕೇಸರ್​ನಲ್ಲಿ ನಡೆದಿದೆ.

    ಬುಧವಾರ ಸಂಜೆ 6.30ರ ಸುಮಾರಿಗೆ ಗಾಟ್ಕೇಶ್ವರ್​ ಠಾಣಾ ವ್ಯಾಪ್ತಿಯಲ್ಲೇ ಕೃತ್ಯ ನಡೆದಿದೆ. ರಾಮಪಲ್ಲಿಯ ಆರ್​ಎಲ್​ ನಗರದ ಒಯು ಕಾಲನಿಯ ಯುವತಿ ಕಂದಲ್ಕೊಯಾದ ಬೀ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿನಿ. ಕಾಲೇಜು ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ನಗರಂನಲ್ಲಿ ಬಸ್​ ಇಳಿದಿದ್ದಾಳೆ. ಬಳಿಕ ರಾಮಪಲ್ಲಿ ಆರ್​ಎಲ್​ ನಗರಕ್ಕೆ ತೆರಳಲು ಏಳು ಸೀಟಿನ ಆಟೋವನ್ನೇರಿದ್ದಾಳೆ. ವಿದ್ಯಾರ್ಥಿನಿಯ ಜತೆ ಓರ್ವ ಸೀನಿಯರ್ ವಿದ್ಯಾರ್ಥಿ​ ಮತ್ತು ಇಬ್ಬರು ಇತರೆ ಪ್ರಯಾಣಿಕರಿದ್ದರು. ಆದರೆ, ಕೆಲವೇ ದೂರದಲ್ಲಿ ಮೂವರು ಸಹ ಇಳಿದುಕೊಳ್ಳುತ್ತಾರೆ.

    ಇದನ್ನೂ ಓದಿರಿ: ಟ್ರೋಲಿಗರ ಗಮನಸೆಳೆದ ವಧು-ವರನ ಫೋಟೋ: ವೈರಲ್​ ಆಯ್ತು ‘ಸ್ವಲ್ಪ ತಡಿಯಮ್ಮಾ’ ಮೀಮ್ಸ್​..!

    ಆದರೆ, ಆಟೋದಲ್ಲಿ ವಿದ್ಯಾರ್ಥಿ ಒಬ್ಬಳೇ ಉಳಿದುಕೊಳ್ಳುತ್ತಾಳೆ. ಇದನ್ನೇ ದುರುಪಯೋಗ ಪಡಿಸಿಕೊಳ್ಳುವ ಆಟೋ ಚಾಲಕ, ವಿದ್ಯಾರ್ಥಿನಿ ಇಳಿಯಬೇಕಿದ್ದ ಸ್ಥಳದ್ದಲ್ಲಿ ನಿಲ್ಲಿಸದೇ ವೇಗವಾಗಿ ಆಟೋ ಚಾಲನೆ ಮಾಡಿಕೊಂಡು ಹೋಗುತ್ತಾನೆ. ಬಳಿಕ ಯಮನಪೇಟೆಯಲ್ಲಿ ಮತ್ತೊಂದು ವ್ಯಾನ್​ಗೆ ವಿದ್ಯಾರ್ಥಿಯನ್ನು ಬಲವಂತವಾಗಿ ಆಟೋದಿಂದ ಎಳೆದುಕೊಳ್ಳುತ್ತಾರೆ. ನಂತರ ವ್ಯಾನ್​​ ಅನ್ನು ಗಾಟ್ಕೇಸರ ರೈಲ್ವೆ ಹಳಿ ಬಳಿ ತೆಗೆದುಕೊಂಡು ಹೋಗಿ, ಚಾಲಕ ಹಾಗೂ ಇನ್ನಿಬ್ಬರು ಆಕೆಯ ಬಟ್ಟೆಯನ್ನು ಹರಿದು ಅತ್ಯಾಚಾರ ಎಸಗುತ್ತಾರೆ. ಈ ವೇಳೆ ಪೊಲೀಸ್​ ಸೈರನ್​ ಶಬ್ದ ಕೇಳಿ ಆಕೆಯನ್ನು ಅಲ್ಲಿಂದ ಒಆರ್​ಆರ್​ ಇಂಟರ್ಚೇಂಜ್​ ಸರ್ವೀಸ್​ ರಸ್ತೆಯಲ್ಲಿದ್ದ ಕಟ್ಟಡವೊಂದಕ್ಕೆ ಕರೆದೊಯ್ಯುತ್ತಾರೆ. ಬಳಿಕ ಅಲ್ಲಿಯೂ ಸೈರನ್​ ಶಬ್ದ ಕೇಳಿ ಪೊಲೀಸ್​ ಹಿಂಬಾಲಿಸುತ್ತಿದ್ದಾರೆಂದು ಭಯಬಿದ್ದು ಸ್ಥಳದಿಂದ ಕಾಲ್ಕಿಳುತ್ತಾರೆ.

    ಇದಾದ ಬಳಿಕ ಸಂತ್ರಸ್ತ ವಿದ್ಯಾರ್ಥಿನಿ ತನ್ನ ತಾಯಿಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸುತ್ತಾಳೆ. ಬಳಿಕ ತಾಯಿ ಆಪ್ತ ಸಂಬಂಧಿ ಯುವಕನಿಗೆ ಕರೆ ಮಾಡಿ ಘಟನೆಯನ್ನು ತಿಳಿಸುತ್ತಾರೆ. ನಂತರ ಯುವಕ ಪೊಲೀಸ್​ ಸಹಾಯವಾಣಿ ನಂಬರ್​ 100ಕ್ಕೆ ಕರೆ ಮಾಡಿ ದೂರು ನೀಡುತ್ತಾನೆ. ತಕ್ಷಣವೇ ಕೀಸರಾ ಮತ್ತು ಗಾಟ್ಕೆಸರ್​ ಠಾಣಾ ಪೊಲೀಸರು ತಂಡವೊಂದನ್ನು ರಚಿಸಿಕೊಂಡು ಕಾರ್ಯಾಚರಣೆಗೆ ಇಳಿಯುತ್ತಾರೆ. ಸಂತ್ರಸ್ತೆಯ ಫೋನ್​ ನಂಬರ್​ ಲೊಕೇಶನ್​ ಪತ್ತೆಹಚ್ಚಿ ಅಲ್ಲಿಗೆ ಹೋಗುತ್ತಾರೆ. ಅಷ್ಟರಲ್ಲಾಗಲೇ ಆರೋಪಿ ಪರಾರಿಯಾಗಿದ್ದ.

    ಇದನ್ನೂ ಓದಿರಿ: ಕೇರಳ ವಿದ್ಯಾರ್ಥಿಗಳ ಗಂಟಲದ್ರವ ನಿಮ್ಹಾನ್ಸ್‌ಗೆ, ರೂಪಾಂತರಿ ಕರೊನಾ ಭೀತಿ ಹಿನ್ನೆಲೆ ಜಿಲ್ಲಾಡಳಿತ ತೀರ್ಮಾನ

    ಸಂತ್ರಸ್ತೆಯ ಬಟ್ಟೆಯನ್ನೆಲ್ಲ ಹರಿದು ಆಕೆಯನ್ನು ಅರೆಬೆತ್ತಲೆ ಅವತಾರದಲ್ಲಿ ದುಷ್ಮರ್ಮಿಗಳು ಬಿಟ್ಟು ಹೋಗಿದ್ದರು. ಈ ವೇಳೆ ಸಂತ್ರಸ್ತೆಯ ಬಲಗಾಲಿಗೆ ಗಾಯವಾಗಿದ್ದು, ಸಂಜೆ 7.50ರ ಹೊತ್ತಿಗೆ ಆಕೆಯನ್ನು ರಕ್ಷಿಸಲಾಯಿತು. ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಅದೃಷ್ಟವಶಾತ್​ ಯುವತಿಗೆ ಸಣ್ಣ ಗಾಯ ಬಿಟ್ಟರೆ ಆರೋಗ್ಯ ಉತ್ತಮವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಟೋ ಚಾಲಕನ ಪತ್ತೆಗೆ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. (ಏಜೆನ್ಸೀಸ್​)

    ಪ್ರೇಮಿಗಳ ದಿನ ಹುಡುಗಿಯರ ಕಾಟ ತಾಳಲಾರೆ ಪ್ಲೀಸ್​ 5 ದಿನ ರಜೆ ಕೊಡಿ ಸರ್..!​

    ಜೀವಕ್ಕೆ ಅಪಾಯವಿದ್ರೆ ಸಾಕ್ಷಿ ಗುರುತೇ ಬದಲು!; ಪೊಲೀಸ್, ಪ್ರಾಧಿಕಾರಗಳಿಗೆ ಅನುಮತಿ ನೀಡಿದ ಕೇಂದ್ರ ಗೃಹ ಇಲಾಖೆ

    ಪಿಡಿಒ ಕೊರತೆ, ಅಭಿವೃದ್ಧಿ ಚಿಂತೆ: 800ಕ್ಕೂ ಹೆಚ್ಚು ಸ್ಥಾನ ಖಾಲಿ, ಹೊಸ ಚುನಾಯಿತರಿಗೆ ಆತಂಕ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts