ಟ್ರೋಲಿಗರ ಗಮನಸೆಳೆದ ವಧು-ವರನ ಫೋಟೋ: ವೈರಲ್​ ಆಯ್ತು 'ಸ್ವಲ್ಪ ತಡಿಯಮ್ಮಾ' ಮೀಮ್ಸ್​..!

memes
Published on

ಈ ಚಿತ್ರದಲ್ಲಿರುವ ವರ ಕಂಪ್ಯೂಟರ್ ಮೇಲಿನ ತನ್ನ ವ್ಯಾಮೋಹವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿದ್ದಾನೆ. ಮದುವೆಯ ಉಡುಪಿನಲ್ಲೇ ವಧುವಿನ ಮುಂದೆ ಕುಳಿತಿರುವ ವರ ಕಂಪ್ಯೂಟರ್​ ಬಳಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಟ್ರೋಲಿಗರಿಗೆ ಆಹಾರವಾಗಿದೆ. ಹೀಗಾಗಿ ಜಾಲತಾಣಗಳಲ್ಲಿ ಸಾಕಷ್ಟು ಮೀಮ್ಸ್​ಗಳು ಹರಿದುಬರುತ್ತಿವೆ.

ಅಸಲಿಗೆ ಚಿತ್ರದಲ್ಲಿ ಏನಿದೆ?: ವರ ಮದುವೆಯ ಉಡುಪಿನಲ್ಲಿ ಕಂಪ್ಯೂಟರ್​ ಮುಂದೆ ಕುಳಿತಿರುವಾಗ ವಧು, ವರನಿಗಾಗಿ ಕಾಯುತ್ತಾ ಮಧುಚಂದ್ರ ಮಂಚದಲ್ಲಿ ಕಾಯುತ್ತಿರುತ್ತಾಳೆ.

ಈ ವಿಚಿತ್ರ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಮಂದಿಯ ಗಮನ ಸೆಳೆದಿದೆ. ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದು, ಮೀಮ್ಸ್​ಗಳನ್ನು ಹರಿಬಿಡುತ್ತಿದ್ದಾರೆ. ಅದರಲ್ಲೂ ಹೋಲ್ಡ್​ ಆನ್​ ಬೇಬ್​ ( ಸ್ವಲ್ಪ ತಡಿಯಮ್ಮಾ) ಎಂಬ ಪದ ತುಂಬಾ ವೈರಲ್​ ಆಗಿದೆ.

ಸ್ವಲ್ಪ ತಡಿಯಮ್ಮ ನನ್ನ ಶಿಫ್ಟ್​ ಮುಗಿಸಿ ಬರುತ್ತೇನೆ. ಸ್ವಲ್ಪ ಇರಮ್ಮ ಸರ್ಚ್​ ಹಿಸ್ಟರಿ ಅಳಿಸಿ ಬರುತ್ತೇನೆ ಮತ್ತು ಸ್ವಲ್ಪ ಇರಮ್ಮ ನನ್ನ ಟ್ವಿಟರ್​ ನೋಟಿಫಿಕೇಶನ್​ ಮೊದಲು ನೋಡಿಬಿಡುತ್ತೇನೆ... ಹೀಗೆ ವಿವಿಧ ರೀತಿಯಲ್ಲಿ ನೆಟ್ಟಿಗರು ಮೀಮ್ಸ್​ಗಳನ್ನು ಹರಿಬಿಡುತ್ತಿದ್ದಾರೆ.

ಚಿತ್ರ ಎಲ್ಲಿಂದ ಬಂದಿದೆ ಮತ್ತು ಅದು ಟ್ವಿಟರ್‌ ಗಮನವನ್ನು ಹೇಗೆ ಸೆಳೆಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಜಾಲತಾಣಗಳಲ್ಲಿ ಕಂಡುಬರುವ ಚಿತ್ರವಿಚಿತ್ರ ಕ್ಷಣಗಳು ಇದೇ ಮೊದಲೇನಲ್ಲ. ಅನೇಕ ಫೋಟೋಗಳು ಟ್ರೋಲಿಗರಿಗೆ ಆಹಾರವಾಗಿ ವೈರಲ್​ ಆಗಿರುವುದು ಸುಳ್ಳಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net