ನ್ಯೂಸ್

ಬೆಳಗ್ಗೆ ವಾಕಿಂಗ್‍ಗೆಂದು ತೆರಳಿದ್ದ ಬಿಜೆಪಿ ನಾಯಕನನ್ನು ಗುಂಡಿಟ್ಟು ಕೊಂದ್ರು!

ಉತ್ತರಪ್ರದೇಶ: ಉತ್ತರಪ್ರದೇಶದ ಮೊರಾದಾಬಾದ್‍ನಲ್ಲಿ 30 ವರ್ಷದ ಬಿಜೆಪಿ ನಾಯಕ ಅನುಜ್ ಚೌಧರಿಯನ್ನು ಗುರುವಾರ ಸಂಜೆ ಅವರ ನಿವಾಸದ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು.

ಅನುಜ್ ಚೌಧರಿ ತಮ್ಮ ಅಪಾರ್ಟ್ಮೆಂಟ್ ಹೊರಗೆ ನಡೆಯುತ್ತಿರುವಾಗ ಮೋಟರ್ ಸೈಕಲ್ ಗಳಲ್ಲಿ ಅಪರಿಚಿತ ಹಲ್ಲೆಕೋರರಿಂದ ಹಲ್ಲೆಗೊಳಗಾದರೆಂದು ಆರೋಪಿಸಲಾಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಆದರೆ ಚಿಕಿತ್ಸೆಯ ಸಮಯದಲ್ಲಿ ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೊರಾದಾಬಾದ್ ಹೆಮರಾಜ್ ಮೀನಾದ ಪೊಲೀಸ್ ಹಿರಿಯ ಅಧೀಕ್ಷಕ ( ಎಸ್ ಎಸ್ ಪಿ )“ ಮೃತರ ಕುಟುಂಬ ಸದಸ್ಯರು ದೂರು ದಾಖಲಿಸಿದ್ದು ಅಮಿತ್ ಚೌಧರಿ ಮತ್ತು ಅನಿಕೇತ್‍ ಎಂಬ ಇಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

ಅನುಜ್ ಚೌಧರಿ ಸಾಂಬಲ್‍ನ ಅಸ್ಮೋಲಿ ಬ್ಲಾಕ್‍ನಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ವಿಫಲರಾಗಿದ್ದರು. ಕೊಲೆ ಹಿಂದೆ ರಾಜಕೀಯ ಪ್ರತಿಸ್ಪರ್ಧಿಗಳ ಕೈವಾಡ ಇದೆ ಎಂದು ಚೌಧರಿಯ ಕುಟುಂಬ ಆರೋಪಿಸಿದೆ.

ಪೊಲೀಸರು ನಾಲ್ಕು ಜನರ ವಿರುದ್ಧ ಪ್ರಕರಣವನ್ನು ನೋಂದಾಯಿಸಿಕೊಂಡಿದ್ದಾರೆ ಮತ್ತು ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.

"ಅನುಜ್ ಚೌಧರಿ ಹಾಗೂ ಕೊಲೆ ಆರೋಪಿಗಳ ನಡುವೆ ವೈಯಕ್ತಿಕ ದ್ವೇಷ ಇತ್ತು ಎನ್ನಲಾಗಿದ್ದು ನಾಲ್ಕು ಜನರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಐದು ತಂಡಗಳನ್ನು ರಚಿಸಲಾಗಿದ್ದು ಅವರನ‍ನು ವಶಕ್ಕೆ ಪಡೆದ ನಂತರ ಕಟ್ಟುನಿಟ್ಟಾದ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಮೊರಾದಾಬಾದ್ ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಏಜೆ್ನ್ಸೀಸ್)