ರಾಂಚಿ (ಉತ್ತರಾಖಂಡ): ಬಿಜೆಪಿ ಕಾರ್ಪೊರೇಟರ್ ಒಬ್ಬರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಉತ್ತರಾಖಂಡ್‍ನ ರುದ್ರಾಪುರದಲ್ಲಿ ನಡೆದಿದೆ.
ರುದ್ರಾಪುರದ 13ನೇ ವಾರ್ಡ್‍ನ ಪಾಲಿಕೆ ಸದಸ್ಯರಾಗಿದ್ದ ಪ್ರಕಾಶ್ ದಾಮಿ ಹತ್ಯೆಯಾಗಿರುವ ಬಿಜೆಪಿ ಮುಖಂಡ.
ಇಂದು ಬೆಳಗ್ಗೆ ಸುಮಾರು ಎಂಟು ಗಂಟೆಯ ಹೊತ್ತಿಗೆ ಈ ಘಟನೆ ನಡೆದಿದೆ. ದಾಖಲೆಯೊಂದಕ್ಕೆ ಸಹಿ ಮಾಡಿಸಿಕೊಳ್ಳುವ ನೆಪದಲ್ಲಿ ಪ್ರಕಾಶ್ ಅವರನ್ನು ಮನೆಯಿಂದ ಹೊರ ಕರೆದಿದ್ದ ಕೆಲ ವ್ಯಕ್ತಿಗಳು ನಂತರ ಗುಂಡಿಟ್ಟು ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಎಸ್ಪಿ ದೇವೇಂದ್ರ ಪಿಂಚ ತಿಳಿಸಿದ್ದಾರೆ.
ಇದನ್ನೂ ಓದಿ: ಆರೋಗ್ಯ ಖಾತೆ ಕಿತ್ತುಕೊಂಡ ಬೆನ್ನಲ್ಲೇ ಶ್ರೀರಾಮುಲುಗೆ ಮತ್ತೊಂದು ಆಘಾತ!
ಕಾರಿನ ಬಳಿ ಪ್ರಕಾಶ್ ಅವರನ್ನು ದುಷ್ಕರ್ಮಿಗಳು ಕರೆದಿದ್ದರು. ಏಕೆ ಕರೆಯುತ್ತಿದ್ದಾರೆ ಎಂದು ತಿಳಿಯದ ಪ್ರಕಾಶ್ ಅವರು ಕಾರಿನ ಬಳಿ ಹೋದಾಗ ಈ ಕೃತ್ಯ ಎಸಗಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಕಾಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ದೇವೇಂದ್ರ ತಿಳಿಸಿದ್ದಾರೆ.
ಶತ್ರು ರಾಷ್ಟ್ರಗಳ ದಾಳಿ ತಡೆಗೆ ಗಡಿಯಲ್ಲಿ ಲೋಕಾರ್ಪಣೆಗೊಂಡಿತು 44 ಸೇತುವೆ