More

    10 ತಿಂಗಳ ಮಗುವಿನ ತಲೆ ಮೇಲೆ ಕುಸಿದು ಬಿತ್ತು ಅಂಗನವಾಡಿ ಛಾವಣಿ! ಮಾಸದ ನಗು…

    ಯಾದಗಿರಿ: ಆಸರೆ ನೀಡುವ ಕಟ್ಟಡದ ಛಾವಣಿಯೇ ತಲೆ ಮೇಲೆ ಕುಸಿದರೆ ಹೇಗೆ? ಹೀಗಾದರೆ ಯಾರನ್ನು ನಂಬಬೇಕು? ದುರದೃಷ್ಟಕರವಾಗಿ ಇಂತಹದೇ ಘಟನೆ ಕರ್ನಾಟಕದಲ್ಲೇ ನಡೆದಿದೆ. ಇತ್ತೀಚೆಗೆ ಚೀನಾದಲ್ಲೂ ಕಳಪೆ ಗುಣಮಟ್ಟದ ಸಾಮಗ್ರಿ ಬಳಸಿ ಕಟ್ಟಡ ನಿರ್ಮಾಣ ಮಾಡಿದ್ದರ ಪರಿಣಾಮವಾಗಿ ಬರಿಗೈಯಲ್ಲೇ ಕಟ್ಟಡದ ಭಾಗಗಳನ್ನು ಕೀಳುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. ಈ ರೀತಿಯ ಘಟನೆ ನಮ್ಮಲ್ಲೇ ಆಗಿರುವುದು ನಿಜಕ್ಕೂ ದುರದೃಷ್ಟಕರ.

    ಇದನ್ನೂ ಓದಿ: ಗಡಿಯಲ್ಲಿ ಕ್ಯಾತೆ ತೆಗೆದ ಚೀನಾಕ್ಕೆ ತಿನ್ನೋ ಅನ್ನಕ್ಕೆ ನಾವೇ ಗತಿ! ಮೊದಲನೇ ಬಾರಿಗೆ ಭಾರತದಿಂದ ಅಕ್ಕಿ ಖರೀದಿಗೆ ಮುಂದಾದ ಚೀನಾ

    ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮರಕಲ್ ಗ್ರಾಮದಲ್ಲಿ ಅಂಗನವಾಡಿಯೊಂದರ ಛಾವಣಿಯೇ ಕುಸಿದಿದ್ದು ಪರಿಣಾಮವಾಗಿ 10 ತಿಂಗಳ ಮಗುವಿನ ತಲೆಗೆ ಪೆಟ್ಟಾಗಿದೆ.

    ಇದನ್ನೂ ಓದಿ: ಸಂಪಾದಕೀಯ: ಚೀನಾಕ್ಕೆ ಮತ್ತೊಂದು ಹೊಡೆತ, ಭಾರತದ ಭದ್ರತೆ ನಿಟ್ಟಿನಲ್ಲಿ ಮಹತ್ವದ ಕ್ರಮ 

    ಮರಕಲ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇಂದ್ರಧನುಷ್ ಲಸಿಕೆ ಹಾಕುತ್ತಿದ್ದಾಗಲೇ ಮೇಲ್ಛಾವಣಿ ಕುಸಿದಿದ್ದು ಈ ಸಂದರ್ಭ ಅಲ್ಲೇ ಕೆಳಗಿದ್ದ ಮಗುವಿನ ತಲೆ ಮೇಲೇ ಬಿದ್ದಿದೆ. ಇದರಿಂದಾಗಿ 10 ತಿಂಗಳ ಮಗು ಕೀರ್ತಿ ತಲೆಗೆ ಗಾಯ ಉಂಟಾಗಿದೆ. ಆದರೆ ಗಾಯವಾದ ಸ್ಥಳಕ್ಕೆ ಮದ್ದನ್ನು ಹಚ್ಚಿ ಬ್ಯಾಂಡೇಜ್‍ ಹಾಕಿದ ಮೇಲೆ ಮಗು ನಗುತ್ತಿರುವುದು ನೋಡುಗರ ಹೃದಯಸ್ಪರ್ಶಿಸುತ್ತಿದೆ. ಮಕ್ಕಳ ಮುಗ್ಧತೆ ಹೀಗಿರುವಾಗ ಅಂಗನವಾಡಿಯ ಕಾಮಗಾರಿಯನ್ನು ಕಳಪೆಯಾಗಿ ಮಾಡಿರುವುದು ನಿಜಕ್ಕೂ ದುರದೃಷ್ಟಕರ.

    ಇದನ್ನೂ ಓದಿ: ಅರುಣಾಛಲ ಭಾರತಕ್ಕೆ ಬಲ; ಫ್ರಂಟಿಯರ್ ಹೆದ್ದಾರಿ ಚೀನಾಕ್ಕೆ ಸೆಡ್ಡುಹೊಡೆಯಲು ಭಾರತಕ್ಕೆ ರಹದಾರಿ

    ಈ ಸಂದರ್ಭ ಅಂಗನವಾಡಿಯಲ್ಲೇ ಇದ್ದ ಇತರ 6 ಮಕ್ಕಳು ಹಾಗೂ ಪೋಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ಮಗು ಕೀರ್ತಿಯನ್ನು ಶಹಾಪುರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಕಳಪೆ ಕಟ್ಟಡ ನಿರ್ಮಾಣವೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts