More

    ಕೀನ್ಯಾದಿಂದಲೂ ಚೀನಾಕ್ಕೆ ಮುಖಭಂಗ: ಬೃಹತ್‌ ರೈಲ್ವೆ ಯೋಜನೆಗೆ ಫುಲ್‌ಸ್ಟಾಪ್‌!

    ಕೀನ್ಯಾ: ಭಾರತದ ಜತೆ ಸಂಘರ್ಷಕ್ಕೆ ಇಳಿದು ಭಾರತದಿಂದ ಛೀಮಾರಿ ಹಾಕಿಸಿಕೊಳ್ಳುತ್ತಿರುವ ಚೀನಾಕ್ಕೆ ಇದೀಗ ಅತ್ಯಂತ ಚಿಕ್ಕ ರಾಷ್ಟ್ರವಾಗಿರುವ ಕೀನ್ಯಾದಿಂದಲೂ ಮುಖಭಂಗವಾಗಿದೆ.

    ಚೀನಾ ದೇಶವು, ಕೀನ್ಯಾದಲ್ಲಿ 3.2 ಬಿಲಿಯನ್ ಡಾಲರ್ ಮೊತ್ತದ (ಸುಮಾರು 230 ಲಕ್ಷ ಸಾವಿರ ಕೋಟಿ ರೂಪಾಯಿ) ರೈಲು ಯೋಜನೆ ಕೈಗೊಂಡಿತ್ತು. ಪೂರ್ವ ಆಫ್ರಿಕಾದ ಚಿಕ್ಕ ರಾಷ್ಟ್ರವಾಗಿರುವ ಕೀನ್ಯದಲ್ಲಿ ಚೀನಾ ರೈಲು ಹಳಿ ಹಾಗೂ ರೈಲುಗಳ ನಿರ್ಮಾಣಕ್ಕೆ ಮುಂದಾಗಿತ್ತು.

    ಆದರೆ ಇದೀಗ ಈ ಯೋಜನೆಯೇ ಕಾನೂನು ಬಾಹಿರ ಎಂದು ಕೀನ್ಯಾ ಕೋರ್ಟ್‌ ಆದೇಶಿಸಿದೆ. ಆದ್ದರಿಂದ ರೈಲು ನಿರ್ಮಾಣದಲ್ಲಿ ಚೀನಾಕ್ಕೆ ದೊಡ್ಡ ಆಘಾತವೇ ಆಗಿದೆ.

    ಇದನ್ನೂ ಓದಿ: ಚೀನಾ ವಸ್ತುವಲ್ಲ… ಇಲ್ಲಿ ಚೀನಿಯರಿಗೇ ಬಹಿಷ್ಕಾರ… ನೋ ಎಂಟ್ರಿ ಬೋರ್ಡ್‌!

    ಸಿಆರ್‌ಬಿಸಿ (ಚೀನಾ ರೋಡ್‌ ಆ್ಯಂಡ್‌ ಬ್ರಿಡ್ಜ್‌ ಕಾರ್ಪೋರೇಷನ್‌) ತಯಾರಿಸಿರುವ ಯೋಜನೆ ಸರಿಯಿಲ್ಲ ಎಂದು ಈ ಯೋಜನೆಯನ್ನು ಪ್ರಶ್ನಿಸಿ 2014ರಲ್ಲೇ ಸಾಮಾಜಿಕ ಹೋರಾಟಗಾರ ಓಕಿಯಾ ಒಮ್ಟಾಹಾ ನ್ಯಾಯಾಲಯದ ಮೆಟ್ಟಿಲೇರಿದ್ದರು.

    ಈ ವಿಚಾರಣೆ ಇತ್ತೀಚೆಗೆ ಪೂರ್ಣಗೊಂಡಿದ್ದು, ಚೀನಾ ವಿರುದ್ಧ ತೀರ್ಪು ನೀಡಿದೆ. 2017ರಲ್ಲೇ ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಈಗಾಗಲೇ ದೇಶದ ಹಲವು ಭಾಗಗಳಲ್ಲಿ ರೈಲು ಸಂಚಾರ ಆರಂಭವಾಗಿದೆ. ಇಂಥ ಸಂದರ್ಭದಲ್ಲಿ ಈ ತೀರ್ಪು ಚೀನಾಕ್ಕೆ ದೊಡ್ಡ ಆಘಾತ ತಂದಿದೆ.

    ಇದಾಗಲೇ ಭಾರತ ಸರ್ಕಾರ ಚೀನಾ ಕಂಪನಿಗೆ ನೀಡಿದ್ದ 471 ಕೋಟಿ ರೂಪಾಯಿ ವೆಚ್ಚದ ರೈಲ್ವೆ ಯೋಜನೆಯನ್ನು ರದ್ದುಪಡಿಸಿರುವುದು ಇಲ್ಲಿ ಉಲ್ಲೇಖಾರ್ಹ. ಕಾನ್ಪುರ್-ದೀನ್ ದಯಾಳ್ ಉಪಾಧ್ಯಾಯ ವಿಭಾಗದಲ್ಲಿ ಸಿಗ್ನಲಿಂಗ್ ಮತ್ತು ದೂರಸಂಪರ್ಕ ಕಲ್ಪಿಸುವ ಯೋಜನೆಯನ್ನು ಬೀಜಿಂಗ್ ನ್ಯಾಷನಲ್ ರೈಲ್ವೆ ರಿಸರ್ಚ್ ಅಂಡ್ ಡಿಸೈನ್ ಇನ್ಸಿಟ್ಯೂಷನ್ ಆಫ್ ಸಿಗ್ನಲ್ ಆ್ಕಯಂಡ್ಮ್ಯೂ್ನ‌ ಕೇಷನ್ ಗ್ರೂಪ್ ಕಂಪನಿಗೆ ಜೂನ್ 2016ರಲ್ಲಿ ಗುತ್ತಿಗೆ ನೀಡಲಾಗಿತ್ತು. ವಿಶ್ವಬ್ಯಾಂಕ್ ನಿಂದ 471 ಕೋಟಿ ರೂಪಾಯಿ ಸಾಲ ಪಡೆದು ಗುತ್ತಿಗೆ ನೀಡಲಾಗಿತ್ತು.

    ನಾಲ್ಕು ವರ್ಷದಲ್ಲಿ ಕೇವಲ 20ರಷ್ಟು ಕೆಲಸ ಮಾತ್ರ ಪೂರ್ಣಗೊಂಡಿದ್ದು ಕಳಪೆ ಸಾಧನೆ ಎಂಬ ಕಾರಣ ನೀಡಿ ಒಪ್ಪಂದವನ್ನು ಕೇಂದ್ರ ರೈಲ್ವೆ ಸಚಿವಾಲಯ ರದ್ದು ಮಾಡಿದೆ.

    ಮದುಮಕ್ಕಳು ನೀಡಿದರು ಅಪೂರ್ವ ಉಡುಗೊರೆ- ಶ್ಲಾಘನೆಗಳ ಮಹಾಪೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts