More

    ಕಾರ್ಮಿಕ ವರ್ಗಕ್ಕೆಂದು ಮಾಡಲಾಗಿದ್ದ ಉಚಿತ ಬಸ್‍ಪಾಸ್ ಯೋಜನೆ ಸ್ಥಗಿತ?

    ಹುಬ್ಬಳ್ಳಿ: ಕಾರ್ಮಿಕ ವರ್ಗದ ಓಡಾಟಕ್ಕೆ ಹೊಸ ಪಾಸ್‍ ನೀಡದೇ ಇರುವ ಮೂಲಕ ಉಚಿತ ಬಸ್ ಪಾಸ್ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ.

    ಕಾರ್ಮಿಕರ‌‌ ವಿಚಾರದಲ್ಲಿ ಹಿಂದಿನ ಸರ್ಕಾರದ ಚುನಾವಣಾ ಗಿಮಿಕ್ ಎಂಬ ನಿಲುವನ್ನು ಕಾಂಗ್ರೆಸ್ ತಳೆದಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಕಾರ್ಮಿಕರಿಗಾಗಿ ಜಾರಿಗೆ ತಂದಿದ್ದ ನಗರ ಹಾಗೂ ಗ್ರಾಮೀಣ ಭಾಗದಿಂದ 45 ಕಿಮೀ ದೂರದವರೆಗೆ ಓಡಾಡಲು ಉಚಿತ ಬಸ್ ಪಾಸ್ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸಿದೆ.

    ಇದನ್ನೂ ಓದಿ: ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್​ ಪಾಸ್​ ವಿತರಣೆ, ಶ್ರೇಯೋಭಿವೃದ್ಧಿಗೆ 2,100 ಕೋಟಿ ರೂ. ಮೀಸಲು

    ಆರಂಭದಲ್ಲಿ ಬಿಎಂಟಿಸಿಯಲ್ಲಿ ಆರಂಭಿಸಿ ನಂತರ ರಾಜ್ಯಾದ್ಯಂತ ಈ ಯೋಜನೆಯನ್ನು ಬಿಜೆಪಿ‌ ಸರ್ಕಾರ ವಿಸ್ತರಿಸಿತ್ತು. ಆದರೆ, ಇದೀಗ ಯೋಜನೆಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಂತಿಮ ಮೊಳೆ ಹೊಡೆದಿದೆ ಎಂದೇ ಹೇಳಬಹುದು.

    ಇದನ್ನೂ ಓದಿ: ಬಿಜೆಪಿ ಪ್ರಣಾಳಿಕೆಯಲ್ಲೂ ಮಹಿಳೆಯರಿಗೆ ಉಚಿತ ಬಸ್​ ಪಾಸ್!

    ಇತ್ತ ಕಡೆ ಬಸ್ ಪಾಸ್ ಅವಧಿ ಮುಗಿದ ಹಿನ್ನೆಲೆ ಯೋಜನೆಯ ಮುಂದುವರಿಕೆಗಾಗಿ ಕಾರ್ಮಿಕರು ಕಾದು ಕುಳಿತಿದ್ದರೆ, ಸರ್ಕಾರ ಮಾರ್ಚ್ 31ರ ನಂತರ ಪಾಸ್ ವಿತರಿಸದಂತೆ ಹಾಗೂ ಅಂತಹ ಪಾಸ್‌ಗಳಿಗೆ ಪ್ರಯಾಣಕ್ಕೆ ಅವಕಾಶ ನೀಡದಂತೆ ಸಾರಿಗೆ ಸಂಸ್ಥೆಗೆ ಸೂಚನೆ ನೀಡಿದೆ ಎನ್ನಲಾಗಿದೆ. ಈ ಯೋಜನೆ ಮುಂದುವರಿಯಲಿದೆ ಎಂಬ ಕಾರ್ಮಿಕರ ನಿರೀಕ್ಷೆಯನ್ನು ಸರ್ಕಾರ ಸುಳ್ಳಾಗಿಸಿದ್ದು ಈ ಮೂಲಕ ಕಾರ್ಮಿಕರಿಗಾಗಿ ಜಾರಿ‌ತಂದಿದ್ದ ಯೋಜನೆಗೆ ನೂತನ ಸರ್ಕಾರ ಅಂತ್ಯ ಹಾಡಿದೆ.

    ಸದ್ಯ ಕಳೆದ ಐದು ತಿಂಗಳಿನಿಂದ ಕಾರ್ಮಿಕರಿಗೆ ಯಾವುದೇ ಬಸ್ ಪಾಸ್‌ ನೀಡಲಾಗುತ್ತಿಲ್ಲ. ಕಳೆದ ಮಾರ್ಚ್ 31ಕ್ಕೆ ಮುಗಿದಿದೆ ಕಾರ್ಮಿಕರ ಬಸ್ ಪಾಸ್ ಅವಧಿ ಮುಗಿದಿದ್ದು ಬಸ್ ಪಾಸ್ ನವೀಕರಣ ಮಾಡದಂತೆ ಸರ್ಕಾರದಿಂದ ಸೂಚನೆ ಬಂದಿದೆ ಎನ್ನುವ ಮಾಹಿತಿ ದಿಗ್ವಿಜಯ ನ್ಯೂಸ್ ಚ್ಯಾನಲ್‍ಗೆ ಲಭಿಸಿದೆ.

    ಇದನ್ನೂ ಓದಿ: ಪಿಯು ಪಾಸ್ ಮಾಡಿದ ಮಾದರಿ ಹೆಣ್ಣು, ಪಿಯುಸಿ ಪೂರೈಸಿದ ಇರುಳ್‌ಪಟ್ಟಿ ಗ್ರಾಮದ ಮೊದಲ ವಿದ್ಯಾರ್ಥಿನಿ ಖಾಕಿ ಪಡೆ ಅಭಿನಂದನೆ

    ಸದ್ಯ ಧಾರವಾಡ ಜಿಲ್ಲೆಯೊಂದರಲ್ಲೇ 40 ಸಾವಿರಕ್ಕೂ ಅಧಿಕ ಬಸ್ ಪಾಸ್ ಬಳಕೆಯ ಕಾರ್ಮಿಕರು ಇದ್ದು ಆರಂಭದಲ್ಲಿ ಎರಡು ಲಕ್ಷ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್ ವಿತರಿಸಿ ನಂತರ ಹಂತ ಹಂತವಾಗಿ ಇದನ್ನು ವಿಸ್ತರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಕಟ್ಟಡ ಕಾಮಗಾರಿಗಾಗಿ ಕಾರ್ಮಿಕರು ವಲಸೆ ಹೋಗುವುದು ಹೆಚ್ಚು ಎನ್ನುವ ಹಿನ್ನೆಲೆಯಲ್ಲಿ ಪ್ರತಿ 3 ತಿಂಗಳಿಗೊಮ್ಮೆ ನವೀಕರಣ ನಿಯಮದೊಂದಿಗೆ ಈ ಯೋಜನೆಯನ್ನು ರೂಪಿಸಲಾಗಿತ್ತು. ಹೀಗಾಗಿ ಮೊದಲ ಬಾರಿಗೆ 2022ರ ಸೆಪ್ಟೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳಲ್ಲಿ ಎರಡು ಬಾರಿ ಕಾರ್ಮಿಕರಿಗೆ ಹಿಂದಿನ‌ ಸರ್ಕಾರ ಉಚಿತ ಪಾಸ್ ನೀಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts