ನ್ಯೂಸ್

'ಚಾಂಪ್​​'ನನ್ನು ಕಳೆದುಕೊಂಡ ಬೇಸರದಲ್ಲಿ ರಮ್ಯಾ; ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಗೈರು

ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ಸದ್ಯ ಬೇಸರದಲ್ಲಿದ್ದಾರೆ. ಅವರ ಮುದ್ದಿನ ನಾಯಿ 'ಚಾಂಪ್' ಇನ್ನಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಮುದ್ದಿನ ನಾಯಿಯ ಸಾವಿನಿಂದಾಗಿ ರಮ್ಯಾ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ.

ಪ್ರಚಾರದಿಂದ ದೂರ

ಕಾಂಗ್ರೆಸ್​​ನ ಸ್ಟಾರ್ ಪ್ರಚಾರಕಿಯಾಗಿರುವ ರಮ್ಯಾ ಪ್ರೀತಿಯ ನಾಯಿಯ ಸಾವಿನಿಂದ ನೊಂದಿದ್ದಾರೆ. ಹೀಗಾಗಿ ಪ್ರಚಾರ ಕಾರ್ಯಕ್ರಮಗಳಿಂದ ಹಿಂದೆ ಸರಿದಿದ್ದಾರೆ. ಇಂದು ಬೆಂಗಳೂರಿನ ಬಸವನಗುಡಿ, ಜಯನಗರ, ಹೆಬ್ಬಾಳದಲ್ಲಿ ರಮ್ಯಾ ಪ್ರಚಾರ ಕಾರ್ಯ ನಿಗದಿಯಾಗಿತ್ತು. ಇದೀಗ ಮುದ್ದಿನ 'ಚಾಂಪ್' ನಿಧನದಿಂದ ಪ್ರಚಾರ ಕಾರ್ಯಕ್ರಮಗಳಿಗೆ ಗೈರಾಗಿದ್ದಾರೆ.

ಸಹಾಯಕ್ಕೆ ಧನ್ಯವಾದ

ನಿನ್ನೆ ತಮ್ಮ ಮುದ್ದಿನ ನಾಯಿ ನಾಪತ್ತೆಯಾಗಿದ್ದು, ಅವನನ್ನು ಹುಡುಕಲು ದಯವಿಟ್ಟು ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ್ದ ರಮ್ಯಾ, ಅದಾದ ಆರೇ ಗಂಟೆಗಳಲ್ಲಿ ನಾಯಿ ಸಾವಿಗೀಡಾದ ಸುದ್ದಿಯನ್ನು ಟ್ವೀಟ್ ಮಾಡಿದ್ದರು. ‘ಚಾಂಪ್ ಇನ್ನಿಲ್ಲ, ಅವನನ್ನು ಹುಡುಕಿದ್ದಾಗಿ ಧನ್ಯವಾದಗಳು’ ಎಂದು ಅವರು ಹೇಳಿಕೊಂಡಿದ್ದರು.