ಗೌಡ್ರ ಹುಡುಗನನ್ನೇ ಹುಡುಕಿ ಕೊಡಿ… ಮದ್ವೆಯಾಗ್ತೀನಿ; ಹಸೆಮಣೆ ಏರಲು ತಯಾರಾದ್ರಾ ರಮ್ಯ?

Divya Spandana
Published on

ಮಂಡ್ಯ: ಕಾಂಗ್ರೆಸ್​ ಮಾಜಿ ಸಂಸದೆ, ನಟಿ ರಮ್ಯಾ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲಾ 'ನಿಮ್ಮ ಮದುವೆ ಯಾವಾಗ?' ಎಂಬ ಪ್ರಶ್ನೆ ಎದುರಿಸುತ್ತಲೇ ಇರುತ್ತಾರೆ. ಇದೀಗ ಮಂಡ್ಯದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ವೇಳೆ ಅಭಿಮಾನಿಗಳಿಂದ ಮತ್ತದೇ ಪ್ರಶ್ನೆ ಎದುರಾಗಿದೆ.

ಹುಡುಗನನ್ನು ಹುಡುಕಿ

ಮದುವೆ ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆಗೆ ರಮ್ಯಾ ಉತ್ತರಿಸುತ್ತಾ, ನನಗೆ ಮೊದಲು ಹುಡುಗನನ್ನು ಹುಡುಕಿ. ಗೌಡರ ಹುಡುಗ ಸಿಕ್ತಾರೆ ಅಂದ್ರೆ ನೋಡಿ. ನನಗೆ ಒಬ್ಬರೂ ಕಾಣುತ್ತಿಲ್ಲ, ನೀವೇ ಹುಡುಕಿ ಕೊಡಿ. ನನಗೂ ಹುಡುಕಿ... ಹುಡುಕಿ ಸಾಕಾಗಿದೆ ಎಂದು ಹೇಳಿದ್ದಾರೆ.

ಸ್ವಯಂವರ ಏರ್ಪಾಟು ಮಾಡಿ

ರಮ್ಯಾ ಮಾತನಾಡುತ್ತಾ, ನನಗೂ ಹುಡುಗನನ್ನು ನೋಡಿ ನೋಡಿ ಸಾಕಾಗಿದೆ. ಬೇಕಿದ್ದರೆ ನೀವೇ ಸ್ವಯಂವರ ಏರ್ಪಾಟು ಮಾಡಿ, ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ.

ನಾನು ಯಾವಾಗಲೂ ಮಂಡ್ಯದ ಗೌಡ್ತಿನೆ

ನಾನು ಯಾವಾಗಲೂ ಮಂಡ್ಯದವಳು. ನಾನು ಗೌಡತಿ ಎಂಬುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ. ನಮ್ಮ ತಾಯಿ ಊರು ಮಂಡ್ಯ, ನಮ್ಮ ತಂದೆ ಸತ್ತಿದ್ದು ಇಲ್ಲೇ, ನನ್ನ ಅಭ್ಯರ್ಥಿ ಮಾಡಿದ್ದು ಇಲ್ಲೇ, ಮಂಡ್ಯ ಜಿಲ್ಲೆಯ ಜನರು ನನಗೆ ಬೆಂಬಲ‌ ನೀಡಿದ್ದಾರೆ. ಈ ಅಭಿಮಾನವನ್ನು ನಾನು ಯಾವತ್ತೂ ಮರೆಯಲ್ಲ, ಇದು ಕಮ್ಮಿಯೂ ಆಗಲ್ಲ. ಮಂಡ್ಯ ಸಂಬಂಧ ಕೇವಲ‌ ರಾಜಕೀಯವಾಗಿ ಅಲ್ಲ, ನನಗೆ ಮಂಡ್ಯ ಕುಟುಂಬದ ರೀತಿ ಎಂದ ರಮ್ಯಾ, ನಾನು ಮಂಡ್ಯಕ್ಕೆ ಬಂದುಹೋಗುತ್ತಾ ಇರುತ್ತೇನೆ ಎಂದು ರಮ್ಯಾ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net