More

    ಕುಟುಂಬವಾದಿ ಪಕ್ಷಗಳಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ; ಜೆಡಿಎಸ್, ಕಾಂಗ್ರೆಸ್ ವಿರುದ್ಧ ಗುಡುಗಿದ ಮೋದಿ

    ರಾಯಚೂರು: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಕೆಲಸ ಮಾಡಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತುಷ್ಟೀಕರಣ ರಾಜನೀತಿ ಅನುಸರಿಸುತ್ತಿವೆ. ಆದರೆ ಕರ್ನಾಟಕದಲ್ಲಿ ಬಿಜೆಪಿ ಅಭಿವೃದ್ಧಿಯ ಸಂಕಲ್ಪ ಮಾಡಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಹಳ್ಳಿಗಳ ಅಭಿವೃದ್ಧಿ ಮಾಡಿಲ್ಲ

    ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹಣ ಲೂಟಿ ಮಾಡಿದ್ದು, ಗ್ರಾಮೀಣ ಭಾಗದ ಜನರಿಗೆ, ರೈತರಿಗೆ ಮೋಸ ಮಾಡಿವೆ. ದೆಹಲಿಯಿಂದ 1 ರೂಪಾಯಿ ಕಳುಹಿಸಿದರೆ ಜನರಿಗೆ 15 ಪೈಸೆ ಮಾತ್ರ ಸಿಗುತ್ತಿತ್ತು. ಸ್ವಾತಂತ್ರ್ಯದ ಹೆಸರಲ್ಲಿ ದೇಶವನ್ನು ಪೂರ್ತಿ ಲೂಟಿ ಮಾಡಿದರೇ ಹೊರತು, ಹಳ್ಳಿಗಳ ಅಭಿವೃದ್ಧಿ ಮಾಡಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಮೋದಿ ಹೇಳಿದರು.

    ಕಾಂಗ್ರೆಸ್ ನಾಯಕರ ಸುಳ್ಳಿಗೆ ಬಲಿಯಾಗಬೇಡಿ

    ಕಾಂಗ್ರೆಸ್ ಒಂದು ಪರಿವಾರದ ಪಕ್ಷವಾಗಿದೆ. ಈ ಬಾರಿಯ ಕರ್ನಾಟಕದ ಜನರ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಆಗಿರಲಿದೆ. ಜನರ ಅಭಿವೃದ್ಧಿ ಮಾಡುತ್ತಿರುವ ಡಬಲ್ ಇಂಜಿನ್ ಸರ್ಕಾರಕ್ಕೆ ಮತನೀಡಿ. ಕಾಂಗ್ರೆಸ್ ನಾಯಕರ ಸುಳ್ಳುಗಳಿಗೆ ಕರ್ನಾಟಕದ ಜನರು ಬಲಿಯಾಗಬೇಡಿ. ಕಾಂಗ್ರೆಸ್, ಜೆಡಿಎಸ್​ ಪಕ್ಷಕ್ಕೆ ಕರ್ನಾಟಕದ ಅಭಿವೃದ್ಧಿ ಬೇಡವಾಗಿದೆ. ಎರಡು ಕುಟಂಬವಾದ ಪಕ್ಷಗಳು ತಮ್ಮ ಕುಟುಂಬವನ್ನು ಮಾತ್ರ ಬೆಳೆಸುತ್ತಾರೆ ಎಂದು ಪ್ರಧಾನಿ ಮೋದಿ ಕಿಡಿಕಾರಿದರು.

    ಬಿಜೆಪಿ ಕರ್ನಾಟಕದ ಅಭಿವೃದ್ಧಿಗಾಗಿ ಮತ ಕೇಳುತ್ತಿದೆ

    ಕಾಂಗ್ರೆಸ್​ಗೆ ಬಡವರು, ಮಧ್ಯಮ ವರ್ಗದ ಜನರ ಬಗ್ಗೆ ಕಾಳಜಿ ಇಲ್ಲ. ಕರೊನಾದಂತಹ ಸಂಕಷ್ಟದ ಸಮಯದಲ್ಲಿ ತುಷ್ಟೀಕರಣ ಮಾಡಿದೆ. ನಾವು ಕರ್ನಾಟಕವನ್ನು ನಂ. 1 ರಾಜ್ಯವನ್ನಾಗಿ ಮಾಡಲು ಮತ ಕೇಳುತ್ತಿದ್ದೇವೆ. ಆದರೆ ಕಾಂಗ್ರೆಸ್ ನಮ್ಮ ನಾಯಕರೊಬ್ಬರು ನಿವೃತ್ತಿಯಾಗುತ್ತಿದ್ದಾರೆ. ಇದು ಅವರ ಕೊನೆಯ ಚುನಾವಣೆ ಎನ್ನುತ್ತಾ ಮತ ಕೇಳುತ್ತಿದ್ದಾರೆ. ಜೆಡಿಎಸ್ ತಮ್ಮ ಕುಟುಂಬದ ರಾಜಕೀಯದ ಅಸ್ತಿತ್ವ ಕಾಪಾಡಿಕೊಳ್ಳಲು ಮತ ಕೇಳುತ್ತಿದ್ದಾರೆ ಎಂದು ಮೋದಿ ಗುಡುಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts