More

    ಕರ್ನಾಟಕವನ್ನು ಸಮೃದ್ಧ, ಸುರಕ್ಷಿತ ರಾಜ್ಯವಾಗಿಸಲು ಮೋದಿಯಿಂದ ಮಾತ್ರ ಸಾಧ್ಯ: ಅಮಿತ್​ ಶಾ ಹೇಳಿಕೆ

    ಮೈಸೂರು: ಕರ್ನಾಟಕವನ್ನು ಸಮೃದ್ಧ, ಸುರಕ್ಷಿತ ರಾಜ್ಯವಾಗಿಸಲು ಪ್ರಧಾನಿ ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ ಎಂದು ಗೃಹ ಸಚಿವ ಅಮಿತ್​ ಶಾ ಹೇಳಿದರು.

    ವರುಣ ಕ್ಷೇತ್ರದ ಪ್ರಚಾರ ಸಭೆಯನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಿದರು. ಚಾಮುಂಡೇಶ್ವರಿ, ನಂಜುಂಡೇಶ್ವರ ಹಾಗೂ ಸುತ್ತೂರು ಮಠಕ್ಕೆ ನಮಸ್ಕಾರ ಸಲ್ಲಿಸಿ ನಾನು ಮಾತು ಆರಂಭಿಸುತ್ತೇನೆ.‌ ಇದು ಪ್ರಮುಖ ಚುನಾವಣೆಯಾಗಿದೆ. ವರುಣದಲ್ಲಿ ವಿ.ಸೋಮಣ್ಣ ಅವರನ್ನು ಗೆಲ್ಲಿಸಿ ಕಳುಹಿಸಿ. ಅವರನ್ನು ದೊಡ್ಡ ವ್ಯಕ್ತಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ಇದನ್ನೂ ಓದಿ: ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ: ಕಾಂಗ್ರೆಸ್ ವಿರುದ್ಧ ಬಿಜೆಪಿಗೆ ಪ್ರಬಲ ಅಸ್ತ್ರ

    ಭ್ರಷ್ಟಾಚಾರ ಬಿಟ್ಟು ಬೇರೇನೂ ಮಾಡಲಿಲ್ಲ

    ಸೋಮಣ್ಣ ಹಾಗೂ ಡಾ.ರೇವಣ್ಣ ಅವರಿಗೆ ನೀಡುವ ಮತ ಮೈಸೂರನ್ನು ಸುರಕ್ಷಿತವಾಗಿ ಇಡುವ ಮತವಾಗುತ್ತದೆ. ಕರ್ನಾಟಕವನ್ನು ಸಮೃದ್ಧ ಹಾಗೂ ಸುರಕ್ಷಿತ ರಾಜ್ಯವಾಗಿಸಲು ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ. ಸಿದ್ದರಾಮಯ್ಯ ಅವರು ಗೆದ್ದರೆ ಪಿಎಫ್‌ಐ ಬ್ಯಾನ್ ತೆಗೆಯುತ್ತದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕರ್ನಾಟಕವನ್ನು ಕಾಂಗ್ರೆಸ್​ ಎಟಿಎಂ ಮಾಡಿಕೊಂಡಿತ್ತು. ಸಿದ್ದರಾಮಯ್ಯ ಭ್ರಷ್ಟಾಚಾರ ಬಿಟ್ಟು ಬೇರೆನೂ ಮಾಡಲಿಲ್ಲ. ದೇಶದಲ್ಲೇ ಭ್ರಷ್ಟ ಸರ್ಕಾರ ಸಿದ್ದರಾಮಯ್ಯ ಸರ್ಕಾರ ಆಗಿತ್ತು ಎಂದು ಅಮಿತ್​ ಶಾ ವಾಗ್ದಾಳಿ ನಡೆಸಿದರು.

    ಲಿಂಗಾಯತರಿಗೆ ಅಪಮಾನ ಮಾಡಿದ್ದಾರೆ

    ಸಿದ್ದರಾಮಯ್ಯ ಅವರು ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಅಂತ ಹೇಳಿದ್ದಾರೆ. ಕಾಂಗ್ರೆಸ್ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರಿಗೆ ಅಪಮಾನ ಮಾಡಿತ್ತು. ಈಗ ಸಿದ್ದರಾಮಯ್ಯ ಲಿಂಗಾಯತರಿಗೆ ಅಪಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಪ್ರತಿ ಬಾರಿ ಯಾಕೆ ಕ್ಷೇತ್ರ ಬದಲಿಸುತ್ತೀರಿ? ಏಕೆ ಚಾಮುಂಡೇಶ್ವರಿ, ಬಾದಾಮಿ, ವರುಣ ಅಂತ ಓಡಾಡುತ್ತೀರಿ? ಅಭಿವೃದ್ಧಿ ಮಾಡದ ಕಾರಣಕ್ಕೆ ಕ್ಷೇತ್ರ ಬದಲಾಯಿಸುತ್ತಿದ್ದೀರಿ. ಮತದಾರರೇ, ನಿವೃತ್ತಿ ಪಡೆಯುವ ಅಭ್ಯರ್ಥಿ ಬೇಕಾ ಅಥವಾ ಕೆಲಸ ಮಾಡುವ ಅಭ್ಯರ್ಥಿ ಬೇಕಾ ಆಯ್ಕೆ ಮಾಡಿ ಎಂದು ಸಿದ್ದು ವಿರುದ್ಧ ಅಮಿತ್​ ಶಾ ಗುಡುಗಿದರು.

    ಇದನ್ನೂ ಓದಿ: ನಾನು ಬಜರಂಗದಳ ಕಾರ್ಯಕರ್ತೆ, ತಾಕತ್ತಿದ್ದರೆ ನನ್ನನ್ನು ಬಂಧಿಸಿರಿ: ಕಾಂಗ್ರೆಸ್​ಗೆ ಶೋಭಾ ಕರಂದ್ಲಾಜೆ ಸೆಡ್ಡು

    ತುಷ್ಟೀಕರಣ ಬಿಟ್ಟು ಬೇರೇನೂ ಗೊತ್ತಿಲ್ಲ

    ಹೊಸ ಮೀಸಲಾತಿ ವಿಚಾರ ಪ್ರಸ್ತಾಪ ಮಾಡಿದ ಅಮಿತ್ ಶಾ, ನಾವು ಲಿಂಗಾಯತರಿಗೆ ನೀಡಿರುವ ಮೀಸಲಾತಿಯನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತೆಗೆಯುತ್ತಾರೆ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ತೆಗೆದು ಹಾಕುತ್ತಾರೆ. ಅವರಿಗೆ ತುಷ್ಟೀಕರಣ ಬಿಟ್ಟು ಬೇರೇನೂ ಗೊತ್ತಿಲ್ಲ. ನರೇಂದ್ರ ಮೋದಿ ದೇಶವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. 2024ರಲ್ಲಿ ಮತ್ತೆ ಮೋದಿ ಅವರನ್ನ ಪ್ರಧಾನಿ ಮಾಡುತ್ತೀರಾ? ಕಾಂಗ್ರೆಸ್ ದೇಶವನ್ನು ಸುರಕ್ಷಿತ, ಸಮೃದ್ಧವಾಗಿ ಇಡುತ್ತಾ? ಕಾಂಗ್ರೆಸ್​ನಿಂದ ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿ ಮಾಡಲು ಆಗುತ್ತಾ? ಹಾಗಿದ್ದರೆ ವರುಣದಲ್ಲಿ ಸಿದ್ದರಾಮಯ್ಯ ಅವರಿಗೆ ಯಾಕೆ ಮತ ಹಾಕುತ್ತೀರಾ? ನಾನು ನಿಮ್ಮ ಮೇಲೆ ವಿಶ್ವಾಸ ಇಡುತ್ತೇನೆ. ವರುಣದಲ್ಲಿ ಸೋಮಣ್ಣ ಅವರನ್ನು ಗೆಲ್ಲಿಸಿದರೆ ಕ್ಷೇತ್ರವನ್ನು ಮಾದರಿ ಮಾಡುತ್ತೇವೆ ಎಂದರು. (ದಿಗ್ವಿಜಯ ನ್ಯೂಸ್​)

    ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ: ಕಾಂಗ್ರೆಸ್ ವಿರುದ್ಧ ಬಿಜೆಪಿಗೆ ಪ್ರಬಲ ಅಸ್ತ್ರ

    ಪಿಎಫ್​ಐ ನಿಷೇಧಕ್ಕೆ ಪ್ರತೀಕಾರ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ!: ಹಿಮಂತ ಬಿಸ್ವಾ ಶರ್ಮಾ

    ಹಾಟ್​ ಫೋಟೋಗಳನ್ನು ಹರಿಬಿಟ್ಟು ಗೇಲಿ ಮಾಡಿದವರಿಗೆ ತಿರುಗೇಟು ಕೊಟ್ಟ ಖುಷ್ಬೂ ಪುತ್ರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts