ಪಿಎಫ್​ಐ ನಿಷೇಧಕ್ಕೆ ಪ್ರತೀಕಾರ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ!: ಹಿಮಂತ ಬಿಸ್ವಾ ಶರ್ಮಾ

Himanta Biswa Sarma
Published on

ಬೆಂಗಳೂರು: ನಿಷೇಧಿತ ಪಿಎಫ್​ಐ ಹಾಗೂ ಮುಸ್ಲಿಂ ಮೂಲಭೂತವಾದಿಗಳು ನಿರ್ದೇಶನದಂತೆ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ಸಿದ್ಧಪಡಿಸಿದ್ದು, ಪಿಎಫ್​ಐ ನಿಷೇಧಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಬಜರಂಗದಳ ನಿಷೇಧ ಭರವಸೆ ನೀಡಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಿಡಿಕಾರಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಸ್ತೃತ ತನಿಖೆ, ವಿಧ್ವಂಸಕ ಕೃತ್ಯಗಳು ಸಾಕ್ಷ್ಯಾಧಾರ ಪುರಾವೆಗಳ ಆಧಾರದಲ್ಲಿ ಉಗ್ರ ಸಂಘಟನೆ ಪಿಎಫ್​ಐಯನ್ನು ಈಗಾಗಲೇ ಕೇಂದ್ರ ಸರ್ಕಾರ ನಿಷೇಧಿಸಿದೆ. ಆದರೂ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪಿಎಫ್ ಐ ಹಾಗೂ ಬಜರಂಗದಳ ನಿಷೇಧಿಸುವ ಭರವಸೆ ನೀಡಿದ್ದು, ಅದರ ಗುರಿಯಿರುವುದು ಬಜರಂಗದಳ ಎನ್ನುವುದು ಸ್ಪಷ್ಟವಾಗಿದೆ. ಪಿಎಫ್​ಐ ಅಣತಿಯಂತೆ ಈ ವಿಷಯ ಪ್ರಸ್ತಾಪಿಸಿದೆ ಎಂದು ಕಿಡಿಕಾರಿದರು.

ಬಿಜೆಪಿ ಪ್ರಣಾಳಿಕೆಯಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಭರವಸೆ ನೀಡಿದೆ. ಜತೆಗೆ ಅಸಂವಿಧಾನಿಕ ಮುಸ್ಲಿಮ್ ಮೀಸಲು ರದ್ದುಪಡಿಸಿ ಕರ್ನಾಟಕ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ. ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಜಾರಿಗೆ ಕರ್ನಾಟಕದ ಬಿಜೆಪಿ ಚುನಾವಣಾ ಪ್ರಣಾಳಿಕೆ ಒತ್ತಾಸೆ ನೀಡಿದೆ ಎಂದರು.

ಹಾಸ್ಯಾಸ್ಪದ ಕನಿಷ್ಠ ಪಕ್ಷ ಲೋಕಸಭೆ ಸದಸ್ಯರೂ ಅಲ್ಲದ ರಾಹುಲ್ ಗಾಂಧಿ ಕರ್ನಾಟಕದ ಜನತೆಗೆ ಗ್ಯಾರಂಟಿ ಕೊಡುವ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಗ್ಯಾರಂಟಿ ಎಂಬ ಪದವೇ ಕರ್ನಾಟಕದ ಜನರಿಗೆ ಅಪಮಾನಿಸುತ್ತದೆ. ರಾಜ್ಯದ ಜನರ ಮುಂದೆ ತನ್ನ ಬದ್ಧತೆ, ನಿವೇದನೆಯಿಡುವ ಬದಲು ಗ್ಯಾರಂಟಿ ಎಂದು ಹೇಳಿ, ಕರ್ನಾಟಕದ ಜನರಿಗೆ ಅವಹೇಳನ ಮಾಡಿದೆ ಎಂದು ಹಿಮಂತ್ ಬಿಸ್ವ ಶರ್ಮಾ‌ ಆಕ್ಷೇಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net