More

    ‘ಮದುವೆ ಆದ ಮೇಲೆ ಹಿಂದೂ ಧರ್ಮಕ್ಕೆ ಮತಾಂತರ ಆದ್ರಾ?’ ಪ್ರಶ್ನೆಗೆ ಬಿಜೆಪಿ ನಾಯಕಿಯ ಖಡಕ್ ಉತ್ತರ

    ನವದೆಹಲಿ: ಇತ್ತೀಚೆಗೆ ಬಿಜೆಪಿ ನಾಯಕಿ ಖುಷ್ಬೂ ಸುಂದರ್​ ಮದುವೆಯಾದ ಮೇಲೆ ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರ ಆದ್ರಾ? ಎನ್ನುವ ರೀತಿಯ ಪ್ರಶ್ನೆಗಳು, ಟ್ರೋಲ್​ಗಳನ್ನು ಎದುರಿಸುತ್ತಿದ್ದರು. ಈ ಎಲ್ಲಾ ವಿಚಾರಗಳಿಗೂ ಅಂತ್ಯ ಹಾಡಲು ಶಾಸಕಿ ಖುಷ್ಬೂ ಸುಂದರ್ ಟ್ವಿಟರ್​ನಲ್ಲಿ ಪೋಸ್ಟ್ ಹಾಕಿದ್ದರು.

    ಇದನ್ನೂ ಓದಿ: ರಾಹುಲ್​ ಗಾಂಧಿ ಅನರ್ಹತೆ: ಬಿಜೆಪಿ ನಾಯಕಿ ಖುಷ್ಬೂ ಸುಂದರ್​ ಹಳೇ ಟ್ವೀಟ್ ವೈರಲ್​

    ಈ ಟ್ವೀಟ್​ನಲ್ಲಿ ಅವರು ತಮ್ಮ ಧರ್ಮ ಯಾವುದು ಎನ್ನುವುದಕ್ಕೆ ಉತ್ತರಿಸಿದ್ದು ತಮ್ಮ ದಾಂಪತ್ಯ ಹೇಗೆ ಗಟ್ಟಿಯಾಗಿದೆ ಎನ್ನುವುದನ್ನು ವಿವರಿಸಿದರು. “ನನ್ನ ಮದುವೆಯನ್ನು ಪ್ರಶ್ನಿಸುವವರು ಅಥವಾ ನನ್ನ ಪತಿಯನ್ನು ಮದುವೆಯಾಗಲು ನಾನು ಮತಾಂತರಗೊಂಡಿದ್ದೇನೆ ಎಂದು ಹೇಳುವವರು, ದಯವಿಟ್ಟು ಇಲ್ಲಿ ಕೇಳಿ. ದುಃಖಕರ ವಿಚಾರ ಏನೆಂದರೆ, ನಮ್ಮ ದೇಶದಲ್ಲಿ ಅನೇಕರಿಗೆ ಅಸ್ತಿತ್ವದಲ್ಲಿರುವ ‘ವಿಶೇಷ ವಿವಾಹ ಕಾಯ್ದೆ’ ಬಗ್ಗೆ ಗೊತ್ತಿಲ್ಲ. ನಾನು ಮತಾಂತರಗೊಂಡಿಲ್ಲ. ಹಾಗೆ ಮಾಡುವಂತೆ ನನ್ನನ್ನು ಯಾರೂ ಕೇಳಿಕೊಂಡಿಲ್ಲ. ನನ್ನ 23 ವರ್ಷಗಳ ದಾಂಪತ್ಯವು ನಂಬಿಕೆ, ಗೌರವ, ಸಮಾನತೆ ಮತ್ತು ಪ್ರೀತಿಯನ್ನು ಆಧರಿಸಿದೆ. ಹಾಗಾಗಿ ಸಂದೇಹ ಇರುವವರು, ದಯವಿಟ್ಟು ಯಾವುದಾದರೂ ಟ್ರಿಪ್​ಗೆ ಹೋಗಿ” ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ತಂದೆಯಿಂದಲೇ ಲೈಂಗಿಕ ದೌರ್ಜನ್ಯ: ಬಾಲ್ಯದ ಕಹಿ ಘಟನೆಯನ್ನು ಬಿಚ್ಚಿಟ್ಟ ಖುಷ್ಬೂ ಸುಂದರ್

    ಖುಷ್ಬೂ ಸುಂದರ್, ಮೊದಲಿಗೆ ನಟಿಯಾಗಿದ್ದವರು. ಅವರು ಮುಂಬೈ ಮೂಲದ ಮುಸ್ಲಿಂ ಕುಟುಂಬದಲ್ಲಿ ನಖತ್ ಖಾನ್ ಆಗಿ ಜನಿಸಿದ್ದು ನಂತರ ಅವರು ನಟಿಯಾಗಿ ಕೆಲಸ ಮಾಡಿದ್ದು ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದರು. ನಿರೂಪಕಿಯಾಗಿಯೂ ಕೆಲಸ ಮಾಡಿದ್ದ ಇವರು ಬಿಜೆಪಿ ಪಕ್ಷವನ್ನೂ ಸೇರಿದ್ದರು. ಇವರು ತಮಿಳಿನಲ್ಲಿ 34ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದ ಸುಂದರ್ ಸಿ ಅವರನ್ನು ಮದುವೆಯಾಗಿದ್ದರು. ಆ ನಂತರ ಅವರು ತಮ್ಮ ಹೆಸರನ್ನು ಖುಷ್ಬೂ ಸುಂದರ್​ ಎಂದು ಬದಲಾಯಿಸಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts