More

    ಜು-ಜುತ್ಸು ಟೂರ್ನಮೆಂಟ್ ಗೆದ್ದ ಫೇಸ್​ಬುಕ್​ ಒಡೆಯ!

    ನವದೆಹಲಿ: ಮೆಟಾ ಸಂಸ್ಥೆಯ ಒಡೆಯ, ಮಾರ್ಕ್ ಝುಕರ್​ಬರ್ಗ್​ ಅನೇಕ ವಿಶಿಷ್ಟ ಹವ್ಯಾಸಗಳನ್ನು ಹೊಂದಿರುವವರು. ಒಂದೇ ಬಣ್ಣದ ಟಿ-ಶರ್ಟ್ ಧರಿಸಿರುವ ಮೂಲಕ ಅನೇಕರ ಗಮನ ಸೆಳೆದಿದ್ದ ಫೇಸ್​ಬುಕ್​ ಸ್ಥಾಪಕ, ಇಂದು ಜು-ಜುತ್ಸು ಸ್ಪರ್ಧೆಯಲ್ಲಿ ಗೆದ್ದ ಕ್ಷಣಗಳನ್ನು ತಮ್ಮ ಫೇಸ್​ಬುಕ್​ ವಾಲ್ ಮೇಲೆ ಹಂಚಿಕೊಂಡಿದ್ದಾರೆ 

    ಇದನ್ನೂ ಓದಿ: ನಿಜವಾದ ಸ್ನೇಹ ಅಂದ್ರೆ ಇದು! ಭೇಟಿಯೇ ಆಗದ ಫೇಸ್​ಬುಕ್​ ಫ್ರೆಂಡ್​ ಕಷ್ಟಕ್ಕೆ ಮಿಡಿದ ಶಿಕ್ಷಕ, 16 ಲಕ್ಷ ರೂ. ಸಂಗ್ರಹ

     

    ಮಾರ್ಕ್ ಜುಕರ್‌ಬರ್ಗ್ ಜು-ಜುತ್ಸು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು ಕೆಲವು ಪದಕಗಳನ್ನು ಗೆದ್ದಿದ್ದಾರೆ. ಮೆಟಾ (ಈಗ ಫೇಸ್​ಬುಕ್​ ಸಂಸ್ಥೆಯ ಮಾತೃಸಂಸ್ಥೆ) ಸಂಸ್ಥೆಯ ಸಿಇಒ ಈವೆಂಟ್‌ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಬೆಂಬಲ ನೀಡಿದ್ದಕ್ಕಾಗಿ ತಮ್ಮ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. “ನನ್ನ ಮೊದಲ ಜು-ಜುತ್ಸು ಪಂದ್ಯಾವಳಿಯಲ್ಲಿ ಸ್ಪರ್ಧಿಸಿದ್ದು “ಗೆರಿಲ್ಲಾ ಜು-ಜುತ್ಸು” ತಂಡಕ್ಕಾಗಿ ಕೆಲವು ಪದಕಗಳನ್ನು ಗೆದ್ದಿದ್ದೇನೆ. ನನಗೆ ತರಬೇತಿ ನೀಡಿದ ಡೇವ್ ಕ್ಯಾಮರಿಲ್ಲೊ, ಖೈ ವು ಮತ್ತು ಜೇಮ್ಸ್ ಟೆರಿ ಅವರಿಗೆ ಧನ್ಯವಾದಗಳು!” ಎಂದು ಜುಕರ್‌ಬರ್ಗ್ ಫೇಸ್‌ಬುಕ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts