More

    ರಾಹುಲ್​ ಗಾಂಧಿ ಅನರ್ಹತೆ: ಬಿಜೆಪಿ ನಾಯಕಿ ಖುಷ್ಬೂ ಸುಂದರ್​ ಹಳೇ ಟ್ವೀಟ್ ವೈರಲ್​

    ನವದೆಹಲಿ: ಲೋಕಸಭಾ ಸದಸ್ಯತ್ವದಿಂದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅನರ್ಹಗೊಂಡ ಬೆನ್ನಲ್ಲೇ ಬಿಜೆಪಿ ನಾಯಕಿ ಖುಷ್ಬೂ ಸುಂದರ್​ ಅವರು 2018ರಲ್ಲಿ ಮಾಡಿರುವ ಟ್ವೀಟ್​ ಇದೀಗ ವೈರಲ್​ ಆಗಿದೆ. ಟ್ವೀಟ್​ ಮಾಡಿದ ದಿನ ಖುಷ್ಬೂ ಅವರು ಕಾಂಗ್ರೆಸ್​ನ ವಕ್ತಾರೆಯಾಗಿದ್ದರು.

    2018ರಲ್ಲಿ ಟ್ವೀಟ್​ ಮಾಡಿದ್ದ ಖುಷ್ಬೂ, ಪ್ರತಿಯೊಬ್ಬ ಮೋದಿಯ ಮುಂದೆ ಭ್ರಷ್ಟಾಚಾರದ ಉಪನಾಮವಿದೆ. ಆಗ ಯಾರಿಗಾದರೂ ವಿಷಯ ಅರ್ಥವಾಗುತ್ತದೆ, ಮೋದಿ ಎಂದರೆ ಭ್ರಷ್ಟಾಚಾರ. ಮೋದಿ ಅರ್ಥವನ್ನು ಭ್ರಷ್ಟಾಚಾರ ಎಂದು ಬದಲಾಯಿಸಿ, ಅದು ಸರಿ ಹೊಂದುತ್ತದೆ. ನೀರವ್​, ಲಲಿತ್​ ನಮೋ= ಭ್ರಷ್ಟಾಚಾರ ಎಂದು ಟ್ವೀಟ್​ ಮಾಡಿದ್ದರು.

    ಇದನ್ನೂ ಓದಿ: ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ… ಇನ್ನು ಮುಂದೆಯೂ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತೇನೆ; ರಾಹುಲ್ ಗಾಂಧಿ

    ಖುಷ್ಬೂ ಮಾಡಿದ್ದ ಟ್ವೀಟ್​, 2019ರಲ್ಲಿ ರಾಹುಲ್​ ಗಾಂಧಿ ಆಡಿತ ಮಾತಿನ ನಿಖರ ಪಡಿಯಚ್ಚು ಆಗಿತ್ತು. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪ್ರಚಾರ ಮಾಡುವಾಗ ಮಾತನಾಡಿದ್ದ ರಾಹುಲ್​, ಮೋದಿ ಎಂಬ ಉಪನಾಮ ಹೊಂದಿರುವವರೆಲ್ಲರೂ ಕಳ್ಳರು ಎಂಬ ಹೇಳಿಕೆ ನೀಡಿದ್ದರು. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಈ ಹೆಸರು ಹೊಂದಿರುವವರನ್ನು ಉಲ್ಲೇಖಿಸಿದ್ದ ಅವರು, ಎಲ್ಲ ಮೋದಿಗಳೂ ಕಳ್ಳರು. ಮೋದಿ ಉಪನಾಮ ಹೊಂದಿರುವವರು ಕಳ್ಳರಾಗಲು ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದ್ದರು.

    ರಾಹುಲ್​ ಹೇಳಿಕೆಯಿಂದ ಸಿಟ್ಟಿಗೆದ್ದಿದ್ದ ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ, ದೂರು ದಾಖಲು ಮಾಡಿದ್ದರು. 2019ರ ಏಪ್ರಿಲ್​​​ ತಿಂಗಳಲ್ಲಿ ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್​​ 499 ಮತ್ತು 500ರ ಅಡಿ ಮಾನಹಾನಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ರಾಹುಲ್​ ಗಾಂಧಿ ಅವರನ್ನು ಸೂರತ್​ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ್ದು, ಇದರ ಅಡಿಯಲ್ಲಿ 2 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದರೆ, ಮೇಲ್ಮನವಿ ಸಲ್ಲಿಸಲು ರಾಹುಲ್​ ಅವರಿಗೆ ನ್ಯಾಯಾಲಯ 30 ದಿನಗಳ ಕಾಲಾವಕಾಶ ನೀಡಿದೆ. ಆದರೆ, ಸಂಸತ್ತಿನ ಕಾರ್ಯದರ್ಶಿ ರಾಹುಲ್​ ಅವರನ್ನು ಲೋಕಸಭಾ ಸದಸ್ಯತ್ವದಿಂದ ವಜಾಗೊಳಿಸಿದ್ದಾರೆ.

    ಇದನ್ನು ಓದಿ: ಪ್ರಾಣಾಪಾಯದಿಂದ ಪ್ರೇಮಿಗಳು ಪಾರು ಮನೆಯವರು ಪ್ರೀತಿ ನಿರಾಕರಿಸಿದ್ದಕ್ಕೆ ನೊಂದು ಆತ್ಮಹತ್ಯೆ ಯತ್ನ ಸಾಯಲು ರಾಮದೇವರ ಬೆಟ್ಟದಿಂದ ಜಿಗಿದರು

    ಈ ಬಗ್ಗೆ ಭಾರಿ ಚರ್ಚೆಯಾಗುತ್ತಿರುವ ನಡುವೆಯೇ ಖುಷ್ಬೂ ಟ್ವೀಟ್​ ಭಾರೀ ಚರ್ಚೆಯಾಗುತ್ತಿದೆ. ರಾಹುಲ್​ಗೂ ಮುಂಚೆಯೇ ಖುಷ್ಬೂ ಟ್ವೀಟ್​ ಮಾಡಿದ್ದು, ಪೂರ್ಣೇಶ್​ ಮೋದಿ ಅವರು ಖುಷ್ಬೂ ವಿರುದ್ಧವೂ ದೂರು ದಾಖಲಿಸುತ್ತಾರಾ ಎಂದು ಕಾಂಗ್ರೆಸ್​ ಬೆಂಬಲಿಗರು ಪ್ರಶ್ನೆ ಮಾಡಿದ್ದಾರೆ.

    ಕಾಂಗ್ರೆಸ್​ನಲ್ಲಿದ್ದ ಖುಷ್ಬೂ 2021ರ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 2020ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಮೋದಿ ಎಂಬ ನಿಮ್ಮ ಶಿಷ್ಯನೊಬ್ಬ ಖುಷ್ಬೂ ಸುಂದರ್ ವಿರುದ್ಧವೂ ಮಾನನಷ್ಟ ಮೊಕದ್ದಮೆ ಹೂಡುವಂತೆ ಮಾಡುತ್ತೀರಾ? ಎಂದು ಕಾಂಗ್ರೆಸ್​ ನಾಯಕ ಹಾಗೂ ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್​ ಟ್ವೀಟ್​ ಮೂಲಕ ಪ್ರಧಾನಿ ಮೋದಿ ಅವರನ್ನು ಪ್ರಶ್ನೆ ಮಾಡಿದ್ದಾರೆ.

    ಈವರೆಗೂ ಖುಷ್ಬೂ ಅವರು ಮಾಡಿರುವ ಟ್ವೀಟ್​ ಡಿಲೀಟ್​ ಆಗಿಲ್ಲ ಮತ್ತು ಅವರು ಕೂಡ ತಮ್ಮ ಟ್ವೀಟ್​ ವೈರಲ್​ ಆಗುತ್ತಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಲೋಕಸಭಾ ಸದಸ್ಯತ್ವದಿಂದ ರಾಹುಲ್​ ಅವರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿರುವ ಖುಷ್ಬೂ, ಕೆಲವು ದಿನಗಳ ಹಿಂದೆ ತಾನು ದುರದೃಷ್ಟವಶಾತ್ ಸಂಸದ ಎಂದು ರಾಹುಲ್​ ಹೇಳಿಕೊಂಡಿದ್ದರು. ಅವರು ಮಾತು ಈಗ ನಿಜವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

    ಇದನ್ನು ಓದಿ: ಪ್ರಪಾತದಿಂದ ಉರುಳಿ ಮನೆಗೆ ಗುದ್ದಿದ ಕಾರು: ಅದೃಷ್ಟವಶಾತ್ ಐವರು ಪ್ರಾಣಾಪಾಯದಿಂದ ಪಾರು

    ಇಷ್ಟೇ ಅಲ್ಲದೆ, ರಾಹುಲ್​ ವಿರುದ್ಧ ಕಿಡಿಕಾರಿರುವ ಖುಷ್ಬೂ, ಮನಮೋಹನ್ ಸಿಂಗ್ ಅವರು 2013ರಲ್ಲಿ ಹೊರಡಿಸಿದ ಸುಪ್ರೀಂಕೋರ್ಟ್​ ತೀರ್ಪಿನ ಮೇಲೆ ಸುಗ್ರೀವಾಜ್ಞೆಯನ್ನು ತರಲು ಬಯಸಿದ್ದರು. ರಾಹುಲ್ ಗಾಂಧಿ ಅದನ್ನು ತುಂಡುಗಳಾಗಿ ಹರಿದು ಹಾಕಿದರು. ವಿಪರ್ಯಾಸವೆಂದರೆ ಅವರ ಅನರ್ಹತೆಯು ಅದೇ ತೀರ್ಪಿನಿಂದ ಬಂದಿದೆ. ಕರ್ಮದ ಫಲ ಎಂದು ವ್ಯಂಗ್ಯವಾಡಿದ್ದಾರೆ.

    ಮಾನಹಾನಿ ಪ್ರಕರಣದಲ್ಲಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್​, 1951ರ ಜನಪ್ರತಿನಿಧಿ ಕಾಯ್ದೆ ಅಡಿಯಲ್ಲಿ 8 ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ. ಒಂದು ವೇಳೆ ಸೂರತ್​ ನ್ಯಾಯಾಲಯ ನೀಡಿರುವ ತೀರ್ಪನ್ನು ಉನ್ನತ ನ್ಯಾಯಾಲಯ ವಜಾಗೊಳಿಸಿದರೆ ರಾಹುಲ್​ ನಿರಾಳರಾಗಲಿದ್ದಾರೆ. ಇನ್ನು ರಾಹುಲ್​ರನ್ನು ಅನರ್ಹಗೊಳಿಸಿರುವ ನಿರ್ಧಾರ ಕೇಂದ್ರದ ರಾಜಕೀಯ ದ್ವೇಷ ಎಂದು ಆರೋಪ ಮಾಡಿದ್ದಾರೆ. (ಏಜೆನ್ಸೀಸ್​)

    ಅಕ್ರಮ ಹಣ ವರ್ಗಾವಣೆ ಪ್ರಕರಣ; ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ಏ.​ 5ಕ್ಕೆ ಮುಂದೂಡಿಕೆ

    ಪಂಚಮಸಾಲಿ ಮೀಸಲಾತಿ ಹೋರಾಟ ಸ್ಥಗಿತ; ವಿಜಯಾನಂದ ಕಾಶಪ್ಪನವರ್ ರಾಜೀನಾಮೆ

    ಟಾಲಿವುಡ್ ನಟ ನರೇಶ್, ಪವಿತ್ರಾ ಲೋಕೇಶ್ ಮದುವೆ ರಿಯಲ್ ಅಲ್ಲ ರೀಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts