More

  ಟಾಲಿವುಡ್ ನಟ ನರೇಶ್, ಪವಿತ್ರಾ ಲೋಕೇಶ್ ಮದುವೆ ರಿಯಲ್ ಅಲ್ಲ ರೀಲ್!

  ಹೈದರಾಬಾದ್​: ಟಾಲಿವುಡ್​ ನಟ ನರೇಶ್​, ಇತ್ತೀಚೆಗೆ ಪವಿತಾ ಲೋಕೇಶ್​ ಜತೆಗೆ ಮದುವೆಯಾಗುತ್ತಿರುವ ವಿಡಿಯೋವೊಂದನ್ನು ಸೋಷಿಯಲ್​ ಮೀಡಿಯಾ ಮೂಲಕ ಶೇರ್​ ಮಾಡಿಕೊಂಡಿದ್ದರು. ಅವರಿಬ್ಬರ ಕುರಿತು ಕೆಲವು ದಿನಗಳಿಂದ ಗುಸುಗುಸು ಕೇಳಿಬರುತ್ತಿದ್ದ ಕಾರಣ, ಅವರಿಬ್ಬರೂ ಮದುವೆಯಾಗಿರಬಹುದು ಎಂದೇ ಎಲ್ಲರೂ ನಂಬಿದ್ದರು. ಆದರೆ, ಅದು ರಿಯಲ್ ಮದುವೆಯಲ್ಲ, ರೀಲ್​ ಮದುವೆ ಮತ್ತು ಅವರಿಬ್ಬರ ಹೊಸ ಚಿತ್ರದ ಒಂದು ಝಲಕ್​ ಎಂಬ ವಿಷಯ ಸ್ಪಷ್ಟವಾಗಿದೆ.

  ಇದನ್ನೂ ಓದಿ: ಆಪ್ ನಾಯಕನ ಜತೆ ಕಾಣಿಸಿಕೊಂಡು ಡೇಟಿಂಗ್ ಗುಮಾನಿ ಹುಟ್ಟಿಸಿದ ಪರಿಣೀತಿ ಚೋಪ್ರಾ!

  ಹೌದು, ನರೇಶ್​ ಮತ್ತು ಪವಿತ್ರಾ ಲೋಕೇಶ್​ ಮದುವೆಯಾಗಿರುವುದು ರಿಯಲ್​ ಆಗಿ ಅಲ್ಲ. ‘ಮಲ್ಲಿ ಪೆಳ್ಳಿ’ ಎಂಬ ಹೊಸ ಚಿತ್ರಕ್ಕಾಗಿ. ವಿಜಯ ಕೃಷ್ಣ ಮೂವೀಸ್ ಬ್ಯಾನರ್ ನಡಿ ನರೇಶ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಎಂ. ಎಸ್. ರಾಜು ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಫಸ್ಟ್​ ಲುಕ್​, ಶುಕ್ರವಾರ ಬಿಡುಗಡೆಯಾಗಿದೆ. ಈ ಚಿತ್ರ ಬರೀ ತೆಲುಗು ಅಷ್ಟೇ ಅಲ್ಲ, ಕನ್ನಡದಲ್ಲೂ ‘ಮತ್ತೆ ಮದುವೆ’ ಎಂಬ ಹೆಸರಿನಲ್ಲಿ ಡಬ್​ ಆಗಿ ಬಿಡುಗಡೆಯಾಗುತ್ತಿದೆ.

  ‘ಮತ್ತೆ ಮದುವೆ’ ಒಂದು ಫ್ಯಾಮಿಲಿ ಚಿತ್ರವಾಗಿದ್ದು, ನರೇಶ್​ ಮತ್ತು ಪವಿತ್ರಾ ಲೋಕೇಶ್​ ಜತೆಗೆ ಜಯಸುಧಾ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

  ಇದನ್ನೂ ಓದಿ: ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಉತ್ತಮ ಚಿತ್ರಗಳ ಆಯ್ಕೆ: ಸಿಎಂ ಬೊಮ್ಮಾಯಿ‌

  ಈ ಚಿತ್ರಕ್ಕೆ ಸುರೇಶ್ ಬೊಬ್ಬಿಲಿ ಸಂಗೀತ, ಎಂ.ಎನ್. ಬಾಲ್ ರೆಡ್ಡಿ ಛಾಯಾಗ್ರಹಣವಿದ್ದು, ಸದ್ಯದಲ್ಲೇ ಚಿತ್ರತಂಡ ಸಿನಿಮಾ ಬಿಡುಗಡೆಯ ದಿನಾಂಕವನ್ನು ಹಂಚಿಕೊಳ್ಳಲಿದೆ.

  ಇನ್ನಷ್ಟು ಬಾರಿ ಜೈಲಿಗೆ ಹಾಕಿದರೂ ಹೆದರಲ್ಲ; ನಟ ಚೇತನ್

  ರಾಜ್ಯೋತ್ಸವ ರಸಪ್ರಶ್ನೆ - 29

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts