ಲೈಫ್‌ಸ್ಟೈಲ್

ಮೊದಲ ಡೋಸ್​ ಲಸಿಕೆ ಪಡೆದ ತೋಳಿಗೆ ಮತ್ತೊಂದು ಡೋಸ್​ ಪಡೆಯವುದು ಉತ್ತಮವೇ?: ಹೊಸ ಅಧ್ಯಯನ ಹೇಳಿದ್ದೇನು? ​| Vaccine

Vaccine : ಲಸಿಕೆ (ಇಂಜೆಕ್ಷನ್​) ಎನ್ನುವುದು ವೈದ್ಯಕೀಯ ಇತಿಹಾಸದಲ್ಲಿ ಅದ್ಭುತ ಅವಿಷ್ಕಾರವಾಗಿದೆ. ಈ ಲಸಿಕೆಗಳು ಜನರನ್ನು ಮಾರಕ ಕಾಯಿಲೆಗಳಿಂದ ರಕ್ಷಿಸುತ್ತದೆ. ಹೀಗಾಗಿ, ಮುನ್ನೆಚ್ಚೆರಿಕೆ ಕ್ರಮವಾಗಿ ಹುಟ್ಟಿದ ನವಜಾತು ಶಿಶುಗಳಿಗೆ ಲಸಿಕೆಯನ್ನು ನೀಡುತ್ತಾರೆ.

ಯಾರಾದರೂ ಅನಾರೋಗ್ಯಕ್ಕಿಡದಾಗ ವೈದ್ಯರು ಸಾಮಾನ್ಯವಾಗಿ ಇಂಜೆಕ್ಷನ್​ ನೀಡುತ್ತಾರೆ. ಆದರೆ, ಯಾವ ಕೈಗೆ ಲಸಿಕೆ ನೀಡುತ್ತಾರೆ ತಿಳಿದಿದೆಯೇ? ಒಂದು ವೇಳೆ ತಿಳಿದ್ರೆ ಏಡಗೈ ಅಥವಾ ಬಲಗೈಗೆ ಯಾವುದು ಉತ್ತಮ ಎಂದು ಗೊತ್ತಿಯೇ? ಇದೀಗ ಈ ಬಗ್ಗೆ ಆಸ್ಟ್ರೇಲಿಯಾದ ಸಂಶೋಧನೆಯೊಂದು ಬಹಿರಂಗಗೊಳಿಸಿದೆ.

ಹೌದು, ಸಂಶೋಧಕರು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. "ಲಸಿಕೆಯಲ್ಲಿ ಮೊದಲ ಡೋಸ್ ನೀಡಿದಂತೆಯೇ ಬೂಸ್ಟರ್ ಡೋಸ್ ನೀಡಿದರೆ ಫಲಿತಾಂಶಗಳು ಉತ್ತಮವಾಗಿರುತ್ತವೆ" ಎಂದು ಸಂಶೋಧನೆಯು ಬಹಿರಂಗಪಡಿಸಿದೆ.

ಯಾವುದೇ ತೋಳಿಗೆ ಲಸಿಕೆ ಹಾಕಿದರೂ, ಮೊದಲ ಡೋಸ್ ನೀಡಿದ ತೋಳಿನಿಂದಲೇ ಮುಂದಿನ ಡೋಸ್ ಲಸಿಕೆ ಹಾಕುವುದು ಉತ್ತಮ. ಯುಎನ್‌ಸ್‌ಡಬ್ಲ್ಯೂ ಸಿಡ್ನಿಯ ಗರ್ವಾನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ಕಿರ್ಬಿ ಇನ್‌ಸ್ಟಿಟ್ಯೂಟ್ ನಡೆಸಿದ ಈ ಅಧ್ಯಯನದ ಫಲಿತಾಂಶಗಳನ್ನು ಸೆಲ್ ಜರ್ನಲ್‌ನಲ್ಲಿ ಉಲ್ಲೇಖಿಸಿದೆ.

ಅದೇ ಸ್ಥಳದಲ್ಲಿ ಮತ್ತೊಂದು ಡೋಸ್​ ನೀಡಲು ಕಾರಣ ಏನು..?

ಲಸಿಕೆಯ ಮೊದಲ ಡೋಸ್ ನಂತರ, ಇಂಜೆಕ್ಷನ್ ಸ್ಥಳದ ಬಳಿ ಇರುವ ದುಗ್ಧರಸ ಗ್ರಂಥಿಗಳಲ್ಲಿ ಮ್ಯಾಕ್ರೋಫೇಜ್‌ಗಳು ಎಂಬ ವಿಶೇಷ ರೋಗನಿರೋಧಕ ಕೋಶಗಳು ಇರುತ್ತವೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಮೊದಲ ಡೋಸ್ ನೀಡಿದ ಪ್ರದೇಶದಲ್ಲಿಯೇ ಎರಡನೇ ಡೋಸ್ ನೀಡಿದಾಗ, ಈ ಜೀವಕೋಶಗಳು ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಪ್ರಮುಖವಾದ ಬಿ ಜೀವಕೋಶಗಳನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತವೆ, ಅವು ವೇಗವಾಗಿ ಪ್ರತಿಕ್ರಿಯಿಸುತ್ತವೆ ಎಂದು ಸಂಶೋಧನೆ ಉಲ್ಲೇಖಿಸಿದೆ.

ಇನ್ನು ಈ ಸಂಶೋಧನಾ ಭಾಗವಾಗಿ Pfizer-BioNTech Covid-19 ಲಸಿಕೆ ಪಡೆದ 30 ಜನರೊಂದಿಗೆ ಅಧ್ಯಯನ ನಡೆಸಿದೆ. ಎರಡು ಪ್ರತ್ಯೇಕ ತೋಳುಗಳಲ್ಲಿ ಲಸಿಕೆ ಪಡೆದವರಿಗಿಂದ ಒಂದೇ ತೋಳಿನಲ್ಲಿ ಎರಡು ಡೋಸ್​ ಪಡೆದವರಲ್ಲಿ ಪ್ರತಿಕಾಯ ಪ್ರತಿಕ್ರಿಯೆ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ಅಧ್ಯಯನ ಕಂಡುಕೊಂಡಿದೆ. (ಏಜೆನ್ಸೀಸ್​)