ಜಿಲ್ಲೆ

ಅತ್ತೆಯಾಗಲಿದ್ದಾರೆ ಲಕ್ಷ್ಮಿ ಹೆಬ್ಬಾಳ್ಕರ್‌: ಬೀಗರಾಗಲಿದ್ದಾರೆ ಕೈ ಶಾಸಕರು

suchetana

ಬೆಂಗಳೂರು: ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಹಾಗೂ ಕಾಂಗ್ರೆಸ್‌ನ ಶಾಸಕ ಸಂಗಮೇಶ್ ಶೀಘ್ರದಲ್ಲಿಯೇ ಬೀಗರಾಗಲಿದ್ದಾರೆ.

ಹೆಬ್ಬಾಳ್ಕರ್‌ ಅವರ ಮಗನ ಜತೆ ಸಂಗಮೇಶ್‌ ಅವರ ಸಹೋದರ ಶಿವಕುಮಾರ್ ಅವರ ಪುತ್ರಿ ಡಾ. ಹಿತಾ ಅವರ ನಿಶ್ಚಿತಾರ್ಥ  ನಡೆಯಲಿದೆ. ಕರೊನಾ ವೈರಸ್‌ ಹಿನ್ನೆಲೆಯಲ್ಲಿ ನಿಯಮಾವಳಿಗೆ ಅನುಗುಣವಾಗಿ ಇವರಿಬ್ಬರು ನಿಶ್ಚಿತಾರ್ಥ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಉತ್ತರ ಕರ್ನಾಟಕದ ಬಯಲು ಸೀಮೆ ಹಾಗೂ ಮಲೆನಾಡಿನ ಪ್ರಭಾವಿ ರಾಜಕಾರಣಿಗಳ ಮಧ್ಯೆ ಈ ಸಂಬಂಧ ಬೆಳೆದಿದೆ ಎನ್ನಲಾಗಿದೆ. ಏಕೆಂದರೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್ ಶಾಸಕಿಯಾಗಿದ್ದರೆ, ಸಂಗಮೇಶ್ ಭದ್ರಾವತಿಯ ಶಾಸಕರಾಗಿದ್ದಾರೆ.

ಇದೀಗ ಹೆಬ್ಬಾಳ್ಕರ್ ಪುತ್ರ ಮೃನಾಲ್ ಹಾಗೂ ಸಂಗಮೇಶ್ ಅವರ ಸಹೋದರ ಶಿವಕುಮಾರ್ ಅವರ ಮಗಳು ಡಾ. ಹಿತಾ ನಿಶ್ಚಿತಾರ್ಥ ನಡೆಯಲಿದೆ.

ಕುಟುಂಬದ ಗುರು-ಹಿರಿಯರ ನಿಶ್ಚಯದಂತೆ ಶಿವಮೊಗ್ಗದ ಸರ್ಜಿ ಛತ್ರದಲ್ಲಿ ಮೃನಾಲ್ ಹಾಗೂ ಡಾ. ಹಿತಾ ನಿಶ್ಚಿತಾರ್ಥ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಮದುವೆಯ ದಿನಾಂಕ ಇನ್ನೂ ತಿಳಿದುಬಂದಿಲ್ಲ.