ಜಿಲ್ಲೆ

ಆರ್​ಎಸ್ಎಸ್​ ಕಚೇರಿಗೆ ಮಂಡ್ಯ ಸಂಸದೆ ಸುಮಲತಾ ದಿಢೀರ್​ ಭೇಟಿ!

arunakunigal

ಮಂಡ್ಯ: ಸಂಸದೆ ಸುಮಲತಾ ಅಂಬರೀಷ್​ ಅವರು ಶುಕ್ರವಾರ ಇಲ್ಲಿನ ಆರ್​ಎಸ್​ಎಸ್​ ಕಚೇರಿಗೆ ದಿಢೀರ್​ ಭೇಟಿ ಕೊಟ್ಟದ್ದು, ಜಿಲ್ಲೆಯ ರಾಜಕಾರಣದಲ್ಲಿ ಕೆಲಕಾಲ ಸಂಚಲನ ಮೂಡಿಸಿತ್ತು.

ಆರ್​ಎಸ್​ಎಸ್​ನ ಮಂಡ್ಯ ಜಿಲ್ಲಾ ಪ್ರಚಾರಕ್ ಉಮೇಶ್ ಅವರನ್ನ ಭೇಟಿ ಮಾಡಿದ ಸಂಸದೆ, ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಹಣ ನೀಡುವ ಮೂಲಕ ಸಾಥ್ ನೀಡಿದರು. ಇದನ್ನೂ ಓದಿರಿ ವರ್ಷಗಳ ನಂತರ ಒಟ್ಟಿಗೆ ಗೋವಾಕ್ಕೆ ಹೊರಟಿದ್ದ ಶಾಲಾ ಗೆಳತಿಯರ ದುರಂತ ಅಂತ್ಯ! ಮನಕಲಕುತ್ತೆ ಕೊನೇ ವಾಟ್ಸ್​ಆ್ಯಪ್​ ಸ್ಟೇಟಸ್

ನನ್ನ ಭೇಟಿ ಹಿಂದೆ ಯಾವ ರಾಜಕೀಯವೂ ಇಲ್ಲ. ನಂಬಿಕೆ, ಸಂಪ್ರದಾಯಗಳಿಗೆ ರಾಜಕೀಯ ಬಣ್ಣ ನೀಡುವುದು ತಪ್ಪು. ರಾಮಮಂದಿರ ನಿರ್ಮಾಣ ಅಭಿಯಾನದಲ್ಲಿ ಭಾಗವಹಿಸಲು ಬಂದಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.