ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ, ಆರೋಗ್ಯಕರ ಆಹಾರ ಕ್ರಾಂತಿಯು ಸಾಂಪ್ರದಾಯಿಕ ಸಿರಿಧಾನ್ಯಗಳ ಮೌಲ್ಯವನ್ನು ತಿಳಿಸಿವೆ. ವಿಶೇಷವಾಗಿ, ಕರೊನಾದಿಂದ ಮತ್ತು ಹಲವಾರು ಕಾಯಿಲೆಗಳಿಂದ ಜನರಲ್ಲಿ ಹೆಚ್ಚುತ್ತಿರುವ ಆರೋಗ್ಯ ಪ್ರಜ್ಞೆಯೊಂದಿಗೆ, ರಾಗಿ ಮುಂತಾದ ಪೌಷ್ಟಿಕಾಂಶದ ಸಿರಿಧಾನ್ಯಗಳ ಬೇಡಿಕೆಯಲ್ಲಿ ಏರಿಕೆ ಕಂಡುಬಂದಿದೆ. ಇನ್ನು ಇತ್ತೀಚೆಗೆ ಸಿರಿಧಾನ್ಯಗಳನ್ನ ಬಳಸಿ ಮಾಡುತ್ತಿರುವಂತಹ ಆರೋಗ್ಯಕರವಾದ ಮಿಲೆಟ್ ಮಿಕ್ಸ್ಗಳಿಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಅಂಥದ್ದೇ ಒಂದು ಮಿಲೆಟ್ ಮಿಕ್ಸ್ ನಿಮಗೆ ನಾವಿಂದು ಪರಿಚಯಿಸಿಕೊಡುತ್ತೇವೆ.
ಸಿರಿ ಧಾನ್ಯಗಳಿಂದ ಎಷ್ಟೊಂದು ಉಪಯೋಗಗಳಿವೆ ಎಂಬುದು ಬಹುತೇಕರಿಗೆ ಗೊತ್ತಿರುತ್ತೆ. ಪ್ರಾಚೀನ ಕಾಲದಿಂದಲೂ ಭಾರತದ ವಿವಿಧ ಭಾಗಗಳಲ್ಲಿ, ಸಿರಿಧಾನ್ಯಗಳನ್ನು ವಿವಿಧ ಭಕ್ಷ್ಯಗಳಿಗಾಗಿ ಬಳಸಲಾಗುತ್ತಿತ್ತು. ವಿಶೇಷವಾಗಿ, ಅವುಗಳ ನಂಬಲಾಗದ ಪೌಷ್ಟಿಕಾಂಶದ ಸಮೃದ್ಧ ಸಂಯೋಜನೆಗಾಗಿ ಬಳಸಲಾಗುತ್ತದೆ. ವಿಶ್ವದಲ್ಲೇ ಭಾರತವು ಮಧುಮೇಹ ಕಾಯಿಲೆಗೆ ಎರಡನೇ ಸ್ಥಾನದಲ್ಲಿದೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಲೂ ಸಿರಿಧಾನ್ಯಗಳ ಬೇಡಿಕೆ ಹೆಚ್ಚಾಗಿದೆ.
ಗ್ಲುಟನ್ ಮುಕ್ತ ಸಿರಿಧಾನ್ಯಗಳು ಹಲವಾರು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಮತ್ತು ಗುಣಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಏಕೆಂದರೆ, ಸಿರಿ ಧಾನ್ಯಗಳಲ್ಲಿ ಫೈಬರ್, ಮೆಗ್ನೀಸಿಯಮ್, ಫಾಸ್ಫರಸ್, ಕಬ್ಬಿಣ, ಕ್ಯಾಲ್ಸಿಯಂ, ಜಿಂಕ್ ಮತ್ತು ಪೊಟ್ಯಾಸಿಯಮ್ ಮುಂತಾದ ಅಂಶಗಳು ಇವೆ. ಇದರಿಂದ ಮಧುಮೇಹ, ರಕ್ತದೊತ್ತಡ, ಮೊಣಕಾಲು ನೋವು ಮುಂತಾದವುಗಳಿಂದ ಮುಕ್ತಿ ಸಿಗುತ್ತದೆ. ಹೀಗಿದ್ದಾಗ 27 ಸಿರಿ ಧಾನ್ಯಗಳನ್ನು ಬಳಿಸಿ ಮಾಡುವಂತಹ ಮಿಲೆಟ್ ಮಿಕ್ಸ್ ನಿಮ್ಮ ದೇಹಕ್ಕೆ ಎಷ್ಟು ಶಕ್ತಿ ಕೊಡಬಹುದು ಅಲ್ವಾ?
ಇದನ್ನೂ ಓದಿ: ಜೀವಾವಧಿ ಶಿಕ್ಷೆಗೊಳಗಾಗಿದ್ದವ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪರಾರಿ; 3 ವರ್ಷಗಳ ಕಾಲ ಸಿಗದೇ ಇರಲು ಹೀಗೆ ಮಾಡಿದ್ದ…
ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ 'ಹರಸು ಮಿಲೆಟ್ ಮಿಕ್ಸ್' ಪ್ರಾರಂಭವಾಗಿ ಕೇವಲ 6 ತಿಂಗಳಾದರೂ, ಇದೀಗ ರಾಜ್ಯದಲ್ಲಿ ಬಹಳಷ್ಟು ಜನರು ಇದರ ಬಗ್ಗೆ ಮಾತಾಡುತ್ತಿದ್ದಾರೆ. ಭಾರತಾದ್ಯಂತ ಈ ಮಿಲೆಟ್ ಮಿಕ್ಸ್ ಮೆಡಿಕಲ್ ಸ್ಟೋರ್ಗಳಲ್ಲಿ, ಆನ್ಲೈನ್ ಮಾರ್ಟ್ಗಳಲ್ಲಿ ಲಭ್ಯವಾಗುತ್ತಿದೆ. ಹರಸು ಮಿಲೆಟ್ ಮಿಕ್ಸ್ನಲ್ಲಿ 27 ಸಿರಿ ಧಾನ್ಯಗಳನ್ನು ಬಳಸಿದ್ದು, ಯಾವುದೇ ಕಲರ್, ಫ್ಲೇವರ್, ಶುಗರ್, ಪ್ರಿಸರ್ವೇಟಿವ್ಸ್ ಸೇರಿಸಿರುವುದಿಲ್ಲ.
ಹಾಗಾದರೆ, 'ಹರಸು ಮಿಲೆಟ್ ಹೆಲ್ತ್' ಮಿಕ್ಸ್ನ ಹೇಗೆ, ಎಲ್ಲಿ ತಯಾರಿ ಮಾಡಲಾಗುವುದು? ಅದರ ಬೆಲೆ ಎಷ್ಟು? ಹರಸು ಮಿಲೆಟ್ ಬೇರೆ ಮಿಲೆಟ್ ಮಿಕ್ಸ್ಗಳಿಗಿಂತ ಎಷ್ಟು ವಿಭಿನ್ನ? ಎಂಬ ಹಲವು ಪ್ರಶ್ನೆಗಳಿಗೆ ಈ ಮೇಲಿರುವ ವಿಡಿಯೋ ವೀಕ್ಷಿಸಿ...