ಜಿಲ್ಲೆ

ರಾಜ್ಯದ ಈ ಐದು ಜಿಲ್ಲೆಯಲ್ಲಿ 54 ವಕೀಲರು ಕರೊನಾಗೆ ಬಲಿ! ಕುಟುಂಬದ 50 ಸದಸ್ಯರೂ ಸಾವು

ಕಲಬುರಗಿ: ರಾಜ್ಯಾದ್ಯಂತ ರಣಕೇಕೆ ಹಾಕುತ್ತಿರುವ ಮಹಾಮಾರಿ ಕರೊನಾ ಸೋಂಕಿಗೆ ಕಲಬುರಗಿ ಹೈಕೋರ್ಟ್ ವ್ಯಾಪ್ತಿಯಲ್ಲಿ 54 ವಕೀಲರು ಬಲಿಯಾಗಿದ್ದಾರೆ. ಒಂದೂವರೆ ತಿಂಗಳಲ್ಲಿ ಸಂಭವಿಸಿದ ಈ ಸಾವಿನ ಆಘಾತ ತರಿಸಿದೆ.

ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳನ್ನೊಳಗೊಂಡ ಕಲಬುರಗಿ ಹೈಕೋರ್ಟ್ ವ್ಯಾಪ್ತಿಯಲ್ಲಿ ಕಳೆದ ಏಪ್ರಿಲ್ 1 ರಿಂದ ಮೇ 18ರ ವರೆಗೆ ಒಟ್ಟು 54 ವಕೀಲರು ಕರೊನಾದಿಂದ ಮೃತಪಟ್ಟಿದ್ದಾರೆ. ಇದಲ್ಲದೆ ವಕೀಲರ ಕುಟುಂಬ ಸದ್ಯರ ಪೈಕಿ 50 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮೃತರಲ್ಲಿ ಮದ್ಯ ವಯಸ್ಕ ವಕೀಲರ ಸಂಖ್ಯೆಯೇ ಹೆಚ್ಚು. ಇನ್ನು ಹಲವು ವಕೀಲರಿಗೂ ಕರೊನಾ ಸೋಂಕು ತಗುಲಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.