More

    ತಾಯಿ ಗರ್ಭದಲ್ಲಿರುವ ಮಗುವನ್ನೂ ಬಿಡುತ್ತಿಲ್ಲ ಮಹಾಮಾರಿ ಕರೊನಾ!

    ಬಳ್ಳಾರಿ: ಮಹಾಮಾರಿ ಕರೊನಾ ಸೋಂಕಿಗೆ ತಾಯಿ ಗರ್ಭದಲ್ಲಿರುವ ಮಕ್ಕಳೂ ಬಲಿಯಾಗುತ್ತಿದ್ದಾರೆ ಎಂಬುದು ಆತಂಕ ಹುಟ್ಟಿಸಿದೆ. ಕೋಲಾರ ಜಿಲ್ಲೆ ಮೂಲದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಎಸ್​ಐ ಆಗಿದ್ದ 24 ವರ್ಷದ ಶಾಮಿಲಿ ಜತೆಗೆ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನೂ ಬಲಿ ಪಡೆದಿತ್ತು ಕರೊನಾ. ಇಂತಹ ಸಾವಿನ ಸರಣಿ ಮುಂದುವರಿದಿದೆ.

    ಬಳ್ಳಾರಿ ಜಿಲ್ಲೆಯಲ್ಲಿ ಕರೊನಾ ಎರಡನೇ ಅಲೆಯಲ್ಲಿ 177 ಗರ್ಭಿಣಿ ಮಹಿಳೆಯರಿಗೆ ಕರೋನಾ ಸೋಂಕು ದೃಢಪಟ್ಟಿದ್ದು, ಈವರೆಗೆ 7 ಸೋಂಕಿತ ಗರ್ಭಿಣಿಯರಿಗೆ ಚಿಕಿತ್ಸೆ ಫಲಕಾರಿಯಾಗದೆ ತಾಯಿ ಜತೆಗೆ ಗರ್ಭದಲ್ಲೇ ಮಕ್ಕಳೂ ಮೃತಪಟ್ಟಿದ್ದಾರೆ. ಸೋಂಕಿತ ನಾಲ್ವರಿಗೆ ಗರ್ಭಪಾತವಾಗಿದೆ.

    177 ಕರೊನಾ ಸೋಂಕಿತ ಗರ್ಭಿಣಿಯರ ಪೈಕಿ 134 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಹೆರಿಗೆಯಾಗಿರುವ ಕೆಲವು ಗರ್ಭಿಣಿಯರಿಗೆ ಸೋಂಕು ದೃಢಪಟ್ಟರೂ ನವಜಾತ ಶಿಶುಗಳಲ್ಲಿ ಕರೊನಾ ಪಾಸಿಟಿವ್​ ಬಂದಿಲ್ಲ. ನವಜಾತ ಶಿಶುಗಳಲ್ಲಿ ಸೋಂಕು ಕಾಣಿಸಿಕೊಳ್ಳದಿರುವುದು ಸಮಾಧಾನಕರ ಸಂಗತಿ. ಇದುವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಎರಡು ನವಜಾತ ಶಿಶುಗಳಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ ಡಿಸ್ಚಾರ್ಜ್ ಆಗುವ ವೇಳೆಗೆ ಕೋವಿಡ್ ರಿಪೋರ್ಟ್ ಕೂಡ ನೆಗೆಟಿವ್ ಬಂದಿದೆ.

    ಇನ್ನೆರಡು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ 24 ವರ್ಷದ ಪಿಎಸ್​ಐ ಕರೊನಾಗೆ ಬಲಿ!

    ಗಂಡನ ಅಂತ್ಯಸಂಸ್ಕಾರ ನೆರವೇರುತ್ತಿದ್ದಂತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

    ಕೋರ್ಟ್​ ಆವರಣದಲ್ಲೇ ಅರೆ ಬೆತ್ತಲೆ ಸ್ಥಿತಿಯಲ್ಲಿ ಸಿಬ್ಬಂದಿ ಶವ ಪತ್ತೆ! ನಿನ್ನೆ ರಾತ್ರಿ ನಡೆದಿದ್ದೇನು?

    ಏಕಕಾಲಕ್ಕೆ ಅಕ್ಕ-ತಂಗಿ ಇಬ್ಬರಿಗೂ ತಾಳಿಕಟ್ಟಿದ ಯುವಕ! ಈತ ಕೋಲಾರದ ಉಮಾಪತಿಯಲ್ಲ…

    ಪರಸ್ತ್ರೀ ಜತೆ ಯುವಕನ ಸಲ್ಲಾಪ! ಸೆಕ್ಸ್​ ಮಾಡುತ್ತಿರುವಾಗಲೇ ಸಿಕ್ಕಿಬಿದ್ದ ಜೋಡಿ… ಕ್ಷಣಾರ್ಧದಲ್ಲೇ ನಡೆಯಿತು ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts