ಏಕಕಾಲಕ್ಕೆ ಅಕ್ಕ-ತಂಗಿ ಇಬ್ಬರಿಗೂ ತಾಳಿಕಟ್ಟಿದ ಯುವಕ! ಈತ ಕೋಲಾರದ ಉಮಾಪತಿಯಲ್ಲ...

wedding
Published on

ತೆಲಂಗಾಣ: ಕೋಲಾರದಲ್ಲಿ ಉಮಾಪತಿ ಎಂಬಾತ ಒಂದೇ ಮಂಟಪದಲ್ಲಿ ಅಕ್ಕ-ತಂಗಿ ಇಬ್ಬರನ್ನೂ ಮದುವೆಯಾಗಿದ್ದು ಭಾರಿ ಸುದ್ದಿಯಾಗಿತ್ತು. ಅರೆ, ಒಂದು ಹುಡುಗಿ ಸಿಕ್ಕರೆ ಸಾಕು ಎಂದು ಮದ್ವೆ ಆಗಬೇಕು ಎಂದು ಕಾಯುತ್ತಿರುವ ಅದೆಷ್ಟೋ ಮಂದಿ ಉಮಾಪತಿಯ ಮದ್ವೆ ಫೋಟೋ ನೋಡಿ ಹುಬ್ಬೇರಿಸಿದ್ದರು. ಇಂತಹದ್ದೇ ಮದುವೆಯೋಗ ಮತ್ತೊಬ್ಬನಿಗೆ ಒಲಿದಿದ್ದು, ಆತನೊಂದಿಗೆ ಒಮ್ಮೆಲೆ ಇಬ್ಬರು ಯುವತಿಯರು ಸಪ್ತಪದಿ ತುಳಿದಿದ್ದಾರೆ. ವಧುಗಳಿಬ್ಬರೂ ಒಡಹುಟ್ಟಿದವರು!

ಇಂತಹ ಮದುವೆ ತೆಲಂಗಾಣ ರಾಜ್ಯಸ ಮೆದಕ್​ ಜಿಲ್ಲೆಯ ಕೋಲ್ಚರಂ ಪಂಚಾಯಿತಿ ವ್ಯಾಪ್ತಿಯ ಅನ್ಸಾನ್ ಪಲ್ಲಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗೋಪಾಲ ವೆಂಕಟೇಶ್ ಎಂಬುವರ ಮಕ್ಕಳಾದ ಸ್ವಾತಿ ಮತ್ತು ಶ್ವೇತಾ ಇಬ್ಬರೂ ಒಬ್ಬನನ್ನೇ ಮದುವೆ ಆಗಿದ್ದಾರೆ.

ಅಕ್ಕ ಸ್ವಾತಿಗೆ ಸಂಬಂಧಿಕರ ಹುಡುಗ ಬಾಲರಾಜು ಎಂಬಾತನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ತಂಗಿ ಶ್ವೇತಾ ಮಾನಸಿಕ ಅಸ್ವಸ್ಥಳಾಗಿದ್ದಳು. ಹಾಗಾಗಿ ಅಕ್ಕ-ತಂಗಿ ಇಬ್ಬರನ್ನೂ ಮದುವೆ ಆಗುವಂತೆ ಶ್ವೇತಾ ಹೇಳಿದ್ದು, ಕುಟುಂಬಸ್ಥರ ಸಮ್ಮುಖದಲ್ಲಿ ಬಾಲರಾಜು ಏಕಕಾಲಕ್ಕೆ ತಾಳಿ ಕಟ್ಟಿದ್ದಾನೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net