ಹೈದರಾಬಾದ್: ತೆಲುಗು ಪವರ್ ಸ್ಟಾರ್ ನಟ ಪವನ್ ಕಲ್ಯಾಣ್ 'ಭೀಮ್ಲಾ ನಾಯಕ್' ಸಿನಿಮಾದಿಂದ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಜನವರಿ 12ರಂದು ರಿಲೀಸ್ಗೆ ರೆಡಿಯಾಗಿರುವ ಈ ಸಿನಿಮಾ ಮೇಲೆ ಪವರ್ ಸ್ಟಾರ್ ಅಭಿಮಾನಿಗಳು ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾದ ಸಿನಿಮಾದ ಒಂದಿಷ್ಟು ಪೋಸ್ಟ್ಗಳು, ಕೆಲವು ಹಾಡುಗಳು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿವೆ. ಚಿತ್ರದ ಒಂದು ಪೋಸ್ಟರ್ನಲ್ಲಿ ನಟ ಪವನ್ ಕಲ್ಯಾಣ್ ಅವರ ಪಂಚೆ ಲುಕ್ ಅವರ ಮಾಸ್ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ಅವರು ಈ ಸಿನಿಮಾದಲ್ಲಿ ಒಂದು ಗೀತೆ ಹಾಡಿದ್ದಾರೆಂಬ ಸುದ್ದಿ ಈಗ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಈತನ ಹುಟ್ಟೇ ಗಿನ್ನೆಸ್ ವರ್ಲ್ಡ್ ರೆಕಾರ್ಡ್; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!
ನಟ ಪವನ್ ಕಲ್ಯಾಣ್ ಮೈಕ್ ಮುಂದೆ ನಿಂತು ಹಾಡುತ್ತಿರುವ ಒಂದು ಫೋಟೋ ಕುತೂಹಲ ಕೆರಳಿಸಿದೆ. ತಮ್ಮ ಸಿನಿಮಾಗಳಲ್ಲಿ ಒಂದಲ್ಲಾ ಒಂದು ಹಾಡು ನಟರು ಹಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಹಾಗೆಯೇ, ನಟ ಪವನ್ 'ಪಾಪರಾಯುಡು', 'ಕಿಲ್ಲಿ ಕಿಲ್ಲಿ', 'ಗುಡುಂಬಾ ಶಂಕರ್', 'ಕಾಟಮ ರಾಯುಡಾ', ಎಂಬ ಹಾಡುಗಳನ್ನು ತಮ್ಮ ಹಿಂದಿನ ಸಿನಿಮಾಗಳಿಗಾಗಿ ಹಾಡಿದ್ದರು. ಈಗ 'ಭೀಮ್ಲಾ ನಾಯಕ್' ಸಿನಿಮಾಗೂ ನಟ ಪವನ್ ಒಂದು ಗೀತೆ ಹಾಡಿದ್ದಾರೆಂಬ ಸುದ್ದಿ ಅಭಿಮಾನಿಗಳಿಗೆ ತುಂಬಾ ಸಂತಸ ತಂದಿದೆ.
ಇದನ್ನೂ ಓದಿ: ಜೀವಾವಧಿ ಶಿಕ್ಷೆಗೊಳಗಾಗಿದ್ದವ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪರಾರಿ; 3 ವರ್ಷಗಳ ಕಾಲ ಸಿಗದೇ ಇರಲು ಹೀಗೆ ಮಾಡಿದ್ದ…
ಈ ಹಿಂದೆ 'ಭೀಮ್ಲಾ ನಾಯಕ್' ಸಿನಿಮಾದ 4 ಹಾಡುಗಳನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ನಟ ಪವನ್ ಕಲ್ಯಾಣ್ ಹಾಡಿರುವ ಸ್ಪೆಷಲ್ ಹಾಡು ಮಾತ್ರ ಚಿತ್ರದ ಬಿಡುಗಡೆಯ ಎರಡು ಅಥವಾ ಮೂರು ದಿನಗಳ ಮುನ್ನ ರಿಲೀಸ್ ಆಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಸಾಗರ್ ಕೆ. ಚಂದ್ರು ನಿರ್ದೇಶನದ ಈ ಚಿತ್ರಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.
ಇದು 'ಅಯ್ಯಪ್ಪನುಂ ಕೊಶಿಯುಂ' ಎಂಬ ಮಲಯಾಳಂ ಚಿತ್ರದ ರಿಮೇಕ್ ಆಗಿದ್ದು, ಇದರಲ್ಲಿ ಬಾಹುಬಲಿ ನಟ ರಾಣಾ ದಗ್ಗುಬಾಟಿ ಜತೆ ಪ್ರಮುಖ ನಟರಾದ ನಿತ್ಯಾ ಮೆನನ್, ಸಮುದ್ರಕನಿ, ಮುರಳಿ ಶರ್ಮಾ, ರಘು ಬಾಬು, ನರ್ರಾ ಶ್ರೀನು, ಕಾದಂಬರಿ ಕಿರಣ್ ಸಹ ಮುಖ್ಯಪಾತ್ರಗಳನ್ನು ನಿರ್ವಹಿಸಿದ್ದಾರೆ. ಇನ್ನು ನಟ ಪವನ್ ಗಾಯನವೂ ಇದೆ ಎಂಬ ಕಾರಣಕ್ಕೆ ಅವರ ಅಭಿಮಾನಿಗಳು ಈ ಸಿನಿಮಾ ನೋಡಲು ಕಾತುರರಾಗಿದ್ದಾರೆ.