ಮುಂಬೈ: ಬಾಲಿವುಡ್ನ ಆ್ಯಂಗ್ರಿ ಯಂಗ್ಮ್ಯಾನ್ ಯಾರಿಗೆ ಗೊತ್ತಿಲ್ಲ ಹೇಳಿ. ಅವರ ಧ್ವನಿ ಮತ್ತು ನಟನೆಗೆ ಫಿದಾ ಆಗದವರೆ ಇಲ್ಲ. ಇಷ್ಟು ವಯಸ್ಸಾಗಿದ್ದರೂ ತಮ್ಮ ಕೆಲಸದಲ್ಲಿ ಸದಾ ಬಿಸಿಯಾಗಿದರುವ ನಟ. ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಅಮಿತಾಭ್ ಬಚ್ಚನ್ ಹೆಸರು ಗಳಿಸಿದ್ದಾರೆ. ಬಿಟೌನ್ ಬಿಗ್ಬಿ ಇತ್ತೀಚೆಗೆ ಅಂಗಡಿಯವನೊಬ್ಬ ಅವರಿಗೆ ಮಾಡಿದ ಅವಮಾನವನ್ನು ನೆನಪಿಸಿಕೊಂಡಿದ್ದಾರೆ.
ಇದನ್ನು ಓದಿ: ಯಂಗ್ ಟೈಗರ್ ಎನ್ಟಿಆರ್ ಅಭಿನಯದ ‘ದೇವರ’ ಟ್ರೇಲರ್ ಔಟ್; ಡೈಲಾಗ್ ಕೇಳಿ ಫ್ಯಾನ್ಸ್ ಖುಷ್
ಅಮಿತಾಭ್ ಬಚ್ಚನ್ ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮವೊಂದನ್ನು ನಿರೂಪಣೆ ಮಾಡುತ್ತಿದ್ದಾರೆ. ಅದರಲ್ಲಿ ಬಿಗ್ಬಿಗೆ ನೀವು ಶಾಪಿಂಗ್ ಹೋದಾಗ ಖರೀದಿಸುವ ವಸ್ತುಗಳ ಬೆಲೆಯನ್ನು ನೋಡುತ್ತೀರಾ ಎಂದು ಕೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅಮಿತಾಭ್ ಶಾಪಿಂಗ್ ವೇಳೆ ತಾವು ಎದುರಿಸಿದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.
ವಸ್ತುಗಳನ್ನು ಖರೀದಿಸುವಾಗ ಬೆಲೆ ನೋಡುವುದು ಸಹಜ ವಿಷಯ. ನಾವು ಲಂಡನ್ನಲ್ಲಿ ಒಮ್ಮೆ ಶಾಪಿಂಗ್ ಮಾಡಲು ಹೋಗಿದ್ದಾಗ, ಅಂಗಡಿಗಳಲ್ಲಿ ಕೆಲ ವಸ್ತುಗಳನ್ನು ಖರೀದಿಸುತ್ತಿದ್ದೇವು. ಅದೇ ವೇಳೆ ಅಲ್ಲೆ ಇದ್ದ ಟೈ ಮೇಲೆ ನನ್ನ ಗಮನ ಹರಿಯಿತು. ನಾನು ಅದನ್ನು ತೆಗೆದುಕೊಂಡು ನೋಡುತ್ತಿದ್ದೆ. ಅಂಗಡಿಯವನ್ನು ಅಲ್ಲಿಗೆ ಬಂದು ಇದು 120 ಪೌಂಡ್ ಎಂದು ಹೇಳಿದ. ಅವನ ಧ್ವನಿ ನಮಗೆ ಅದನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ಸೂಚಿಸುತ್ತಿರುವಂತೆ ಇತ್ತು.
ಬಳಿಕ ಅಮಿತಾಭ್ ಅವರು ರಿಯಾಕ್ಷನ್ ನೋಡಿ ಅಂಗಡಿಯವನೆ ಶಾಕ್ ಆಗಿದ್ದಾನೆ. ಅಂಗಡಿಯನವ ಮಾತು ಕೇಳಿದ ಬಿಗ್ಬಿ ಹಿಂತಿರುಗಿ ಅವನನ್ನು ನೋಡಿ ಇದೇ ರೀತಿಯ 10 ಟೈಯನ್ನು ಪ್ಯಾಕ್ ಮಾಡುವಂತೆ ಹೇಳಿದ್ದಾರೆ. ಈ ಘಟನೆಯನ್ನು ವಿವರಿಸಿದ ಬಳಿಕ ಅವರು, ಇಂತಹ ಕ್ಷಣಗಳು ನಮ್ಮ ಭಾರತೀಯ ಚೈತನ್ಯ ಮತ್ತು ಆತ್ಮವಿಶ್ವಾಸವನ್ನು ತೋರಿಸುವ ಪ್ರಾಮುಖ್ಯತೆಯನ್ನು ನನಗೆ ನೆನಪಿಸುತ್ತವೆ. ನಾವು ಕೆಲವೊಮ್ಮೆ ನಮ್ಮನ್ನು ಕಡಿಮೆ ಅಂದಾಜು ಮಾಡಬಾರದು ಅದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.
ಅಮಿತಾಭ್ ಬಚ್ಚನ್ ಕಲ್ಕಿ 2898 ಎಡಿ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಚಿತ್ರದಲ್ಲಿನ ಅವರ ಅದ್ಭುತ ನಟನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ವೆಟ್ಟೈಯಾನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ತಮಿಳಿನಲ್ಲಿ ಅವರ ಚೊಚ್ಚಲ ಚಿತ್ರವಾಗಿದೆ. (ಏಜೆನ್ಸೀಸ್)
ನಡುರಸ್ತೆಯಲ್ಲಿ ಜಿಮ್ ಮಾಲೀಕನ ಮೇಲೆ ಫೈರಿಂಗ್; ಹತ್ಯೆ ಹೊಣೆಹೊತ್ತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್!