ಯಂಗ್ ಟೈಗರ್ ಎನ್​​ಟಿಆರ್​ ಅಭಿನಯದ ‘ದೇವರ’ ಟ್ರೇಲರ್ ಔಟ್​​; ಡೈಲಾಗ್​​ ಕೇಳಿ ಫ್ಯಾನ್ಸ್​ ಖುಷ್​​​​​​​​

ಹೈದರಾಬಾದ್​​​: ಯಂಗ್ ಟೈಗರ್ ಎನ್​​ಟಿಆರ್​ ಅಭಿನಯದ ದೇವರ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್​ ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅದರಲ್ಲೂ ಮಾಸ್‌ ಮ್ಯಾನ್‌ ಎನ್‌ಟಿಆರ್‌ ಗೆಟಪ್​​ ಸಾಮಾನ್ಯವಾಗಿದ್ದರೂ ಲುಕ್​​ ರಗಡ್​ ಆಗಿ ಕಾಣುತ್ತಿದೆ. ಟ್ರೇಲರ್ ನೋಡಿದರೆ ಸಮುದ್ರದಲ್ಲಿ ನಡೆಯುವ ಕಥೆ ಎಂಬುದು ಅರ್ಥವಾಗುತ್ತದೆ.

ಇದನ್ನು ಓದಿ: ನನ್ನ ಜೀವನದಲ್ಲಿ 2 ಬ್ರೇಕಪ್ ಆಗಿದ್ದು ಇದೇ ಕಾರಣಕ್ಕೆ; ಮಿಲ್ಕಿ ಬ್ಯೂಟಿ ಏನೇಳಿದ್ರು ಗೊತ್ತಾ?

2 ನಿಮಿಷ 39 ಸೆಕೆಂಡುಗಳ ಟ್ರೇಲರ್​​ ಭೈರಾ (ಸೈಫ್ ಅಲಿ ಖಾನ್) ಮತ್ತು ಅವನ ಸೇನೆಯು ಸಮುದ್ರದಲ್ಲಿ ಹಡಗುಗಳನ್ನು ಲೂಟಿ ಮಾಡುವ ದೃಶ್ಯದೊಂದಿಗೆ ಆರಂಭವಾಗುತ್ತದೆ. ಜಾತಿ ಬೇಡ.. ಧರ್ಮ ಬೇಡ.. ಭಯವೇ ಇಲ್ಲವೇ ಇಲ್ಲ.. ಧೈರ್ಯ ಬಿಟ್ಟು ಬೇರೇನೂ ಗೊತ್ತಿಲ್ಲದ ಕಣ್ಣುಗಳಿಗೆ ಮೊದಲ ಬಾರಿಗೆ ಭಯದ ಕವಿದಿದೆ. ಭೈರಾ ಎಷ್ಟು ಡೇಂಜರ್, ಯಾರು ಅವನನ್ನು ಹೆದರಿಸಿದರು ಎಂದು ಹಿನ್ನೆಲೆ ಹೇಳುವ ಕಥೆಗೆ ಪ್ರಕಾಶ್ ರಾಜ್ ಧ್ವನಿ ಇದೆ.

ದೇವರ ಸಿನಿಮಾದಲ್ಲಿ ಜೂನಿಯರ್​ ಎನ್​ಟಿಆರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಂದೆ ಪಾತ್ರದಲ್ಲಿನ ಎನ್​ಟಿಆರ್ ಸತ್ತರೆ ಅವರ ಜಾಗಕ್ಕೆ ಮಗನ ಪಾತ್ರದಲ್ಲಿರುವ ಎನ್​ಟಿಆರ್​​ ಎಂಟ್ರಿ ಕೊಡ್ತಾರೆ ಅನ್ನೋದು ಟ್ರೈಲರ್ ನೋಡಿದ್ರೆ ಗೊತ್ತಾಗುತ್ತೆ. ಬಾಲಿವುಡ್ ಸ್ಟಾರ್ ಹೀರೋ ಸೈಫ್ ಅಲಿ ಖಾನ್ ವಿಲನ್ ಆಗಿ ನಟಿಸಿದ್ದಾರೆ. ಕಥೆಯಲ್ಲಿ ಅವರ ಪಾತ್ರ ಚಿತ್ರದಲ್ಲಿ ಹೆಚ್ಚಿರುವಂತೆ ತೋರುತ್ತದೆ. ಟ್ರೇಲರ್‌ನಲ್ಲಿ ಜಾನ್ವಿ ಕಪೂರ್ ಅವರ ಗೆಟಪ್ ಕೂಡ ಆಕರ್ಷಕವಾಗಿದೆ. ಮಾಸ್ ಆಕ್ಷನ್ ಮತ್ತು ಡೈಲಾಗ್​ಗಳು ಸಿನಿಮಾದ ಹೈಪ್​ ಹೆಚ್ಚಿಸಿದೆ.

ಸಿನಿಮಾ ಅನೌನ್ಸ್​ಮೆಂಟ್​ ಆದಗಿನಿಂದಲೂ ನಂದಮೂರಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ದೇವರ ಮೊದಲ ಭಾಗ ಇದೇ ತಿಂಗಳ 27ರಂದು ಬಿಡುಗಡೆಯಾಗಲಿದೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಹಾಗೂ ಪೋಸ್ಟರ್​ಗಳು ಸಿನಿಮಾದ ಮೇಲಿನ ನೀರಿಕ್ಷೆಗಳನ್ನು ಹೆಚ್ಚಿಸಿವೆ.
ಮಾಸ್‌ ಮ್ಯಾನ್‌ ಎನ್‌ಟಿಆರ್‌ಗೆ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ನಾಯಕಿಯಾಗಿದ್ದಾರೆ. ಈ ಚಿತ್ರದ ಮೂಲಕ ಟಾಲಿವುಡ್​ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ‘ಆಚಾರ್ಯ’ ಬಳಿಕ ಕೊರಟಾಲ ಶಿವ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಮೂರು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಈ ಸಿನಿಮಾವನ್ನು ಬಿಗ್​​ ಬಜೆಟ್​ನಲ್ಲಿ ನಿರ್ಮಿಸಲಾಗಿದ್ದು, ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಟ್ರೇಲರ್​, ಟೀಸರ್​​ ಹಾಗೂ ಹಾಡುಗಳಿಂದ ಹೈಪ್​ ಕ್ರಿಯೆಟ್​ ಮಾಡಿರುವ ಸಿನಿಮಾ ದೇವರ ಯಾವ ರೀತಿ ಕಮಾಲ್​ ಮಾಡಲಿದೆ ಎಂದು ಕಾದುನೋಡಬೇಕಿದೆ.(ಏಜೆನ್ಸೀಸ್​​)

ದೀಪ್ವೀರ್ ಮಗಳನ್ನು ನೋಡಲು ಆಸ್ಪತ್ರೆಗೆ ಬಂದ ಮುಖೇಶ್​ ಅಂಬಾನಿ

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…