ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡುರಸ್ತೆಯಲ್ಲಿ ಜಿಮ್ ಮಾಲೀಕರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಗ್ರೇಟರ್ ಕೈಲಾಶ್-1 ಕಾಲೋನಿಯಲ್ಲಿ ಜನನಿಬಿಡ ರಸ್ತೆಯಲ್ಲಿ ಹಂತಕ ಗುಂಡಿನ ದಾಳಿ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನು ಓದಿ: ಮದ್ಯ ಸೇವಿಸಲ್ಲ ಎಂದಿದ್ದಕ್ಕೆ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿತ: ರ್ಯಾಗಿಂಗ್ ಮಾಡಿದ ಐವರು ಅರೆಸ್ಟ್
ವೈರಲ್ ವಿಡಿಯೋದಲ್ಲಿ ಜಿಮ್ ಮಾಲೀಕ ಎರಡು ಕಾರುಗಳ ಮಧ್ಯೆ ಮಾತನಾಡುತ್ತಾ ನಿಂತಿದ್ದಾರೆ. ರಾತ್ರಿ 10:40ರ ಸುಮಾರಿಗೆ ಚೆಕ್ ಶರ್ಟ್ ಧರಿಸಿರುವ ಹುಡುಗನೊಬ್ಬ ಅಲ್ಲಿಗೆ ಬರುತ್ತಾನೆ. ಕಾರಿನ ಪಕ್ಕದಲ್ಲಿ ನಿಂತಿದ್ದವರೊಂದಿಗೆ ಮಾತನಾಡುತ್ತಿದ್ದ ಜಿಮ್ ಮಾಲೀಕನ ಮೇಲೆ ಹಲವು ಬಾರಿ ಗುಂಡು ಹಾರಿಸಿರುವುದನ್ನು ಕಾಣಬಹುದಾಗಿದೆ. ಗುಂಡಿನ ದಾಳಿಯಿಂದಾಗಿ ತೀವ್ರ ಗಾಯಗೊಂಡಾಗ ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ತಿಳಿಸಲಾಗಿದೆ.
Heavy firing in Greater Kailash area of the capital Delhi -Around 10:45 pm, a person was shot in Greater Kailash E Block area – A person named Nadir Shah was shot who used to run a gym in partnership in the area – It is being told that about 7-8 rounds of bullets were fired pic.twitter.com/StCKXkMejO
— Abhimanyu Indian (@Abhi321997) September 13, 2024
ಹತ್ಯೆಗೀಡಾದ ವ್ಯಕ್ತಿಯನ್ನು ಅಫ್ಘಾನಿಸ್ತಾನ ಮೂಲದ ನಾದಿರ್ ಶಾ ಎಂದು ಹೇಳಲಾಗಿದೆ. ಹತ್ಯೆಯ ಬಳಿಕ ಹಂತಕ ಕೆಲವು ಮೀಟರ್ಗಳ ದೂರದಲ್ಲಿ ನಿಲ್ಲಿಸಿದ್ದ ಬೈಕ್ ಏರಿ ತಪ್ಪಿಸಿಕೊಂಡಿದ್ದಾನೆ. ಆರರಿಂದ ಎಂಟು ಬಾರಿ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಬುಲೆಟ್ ಪ್ರೊಜೆಕ್ಟಲೈಸ್ ಮತ್ತು ಖಾಲಿ ಕಾಟ್ರಿಡ್ಜ್ಗಳು ಪತ್ತೆಯಾಗಿವೆ ಎಂದು ಹೇಳಿದರು.
ಗುಂಡಿನ ದಾಳಿ ವೇಳೆ ಅಲ್ಲಿದ್ದ ವಾಹನಕ್ಕೂ ಹಲವು ಗುಂಡುಗಳು ಬಿದ್ದಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣವನ್ನು ಭೇದಿಸಲು ಐದು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಡಿಸಿಪಿ ಹೇಳಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಗೋಲ್ಡಿ ಬ್ರಾರ್‌ನ ಆಪ್ತ ಸಹಾಯಕ ರೋಹಿತ್ ಗೋಡಾರಾ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. ತಿಹಾರ್‌ನಲ್ಲಿ ಜೈಲಿನಲ್ಲಿರುವ ಅವರ ಸಹಾಯಕ ಸಮೀರ್ ಬಾಬಾ ಅವರಿಗೆ ಜಿಮ್ ಮಾಲೀಕ ತಮ್ಮ ವ್ಯಾಪಾರ ವ್ಯವಹಾರಗಳಿಗೆ ಅಡ್ಡಿಯಾಗುತ್ತಿದ್ದಾರೆ ಎಂಬ ಸಂದೇಶವನ್ನು ಕಳುಹಿಸಿದ್ದರಿಂದ ಅವರು ನಾದಿರ್ಶಾನನ್ನು ಕೊಲ್ಲಲು ಆದೇಶಿಸಿದರು ಎಂದು ಪೋಸ್ಟ್‌ನಲ್ಲಿ ಗೋಡಾರಾ ಹೇಳಿದ್ದಾರೆ. ಈ ಪೋಸ್ಟ್ನ ಸತ್ಯಾಸತ್ಯತೆಯನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ ಎಂದು ಎನ್ಡಿಟಿವಿ ವರದಿ ಮಾಡಿದೆ. (ಏಜೆನ್ಸೀಸ್)
ಪಿಎನ್ಬಿ ವಂಚನೆ ಪ್ರಕರಣ; ನೀರವ್ ಮೋದಿ ವಿರುದ್ಧ ಇಡಿ ಕ್ರಮ.. 29.75 ಕೋಟಿ ರೂ. ಆಸ್ತಿ ಜಪ್ತಿ