ನಟ ಪುನೀತ್ ಅಥವಾ ಜನ ಮೆಚ್ಚಿದ ಅಪ್ಪು ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗದ, ಸಿನಿಪ್ರಿಯರ ಪಾಲಿಗೆ ದೊಡ್ಡ ನಷ್ಟ ಎಂದೇ ಹೇಳಬೇಕು. ಹಲವಾರು ಚಿತ್ರಗಳಲ್ಲಿ ನಟಿಸಿ, ನಂತರ ನಿರ್ಮಾಪಕನಾಗಿ 3 ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡಿ ಕೂಡ ಬಹಳಷ್ಟು ಖ್ಯಾತಿ ಗಳಿಸಿದರು. ಆದರೆ, ಇನ್ನೂ ಹಲವು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಲು, ನಟಿಸಲು ಭಗವಂತ ಅವಕಾಶ ಕೊಡಲಿಲ್ಲ. ಅವರು ಇಂದು ಬದುಕಿಲ್ಲವೆಂದರೂ, ಪುನೀತ್ ಅವರನ್ನು ನಾನಾ ರೀತಿಯಲ್ಲಿ ಜನ ನೆನಪಿಸಿಕೊಳ್ಳುತ್ತಿದ್ದಾರೆ. ಈಗ OTT ವೇದಿಕೆ ಆಗಿರುವ 'ಅಮೇಜಾನ್ ಪ್ರೈಮ್ ವಿಡಿಯೋ' ಕೂಡ ಅಪ್ಪು ಅವರನ್ನು ಅಭಿಮಾನಿಗಳು ನೆನಪಿಸಿಕೊಳ್ಳಲು ಒಂದು ಬಂಪರ್ ಆಫರ್ ಕೊಟ್ಟಿದೆ.