ಎರಡು ತಿಂಗಳ ಬಳಿಕ ತಿಮ್ಮಪ್ಪನ ದರ್ಶನ ಪಡೆದ ನಟಿ ತಾರಾ! ಫೋಟೋ ವೈರಲ್...

Published on
2021ರ ನವೆಂಬರ್ ತಿಂಗಳಲ್ಲಿ ಆಂಧ್ರ ಪ್ರದೇಶದಲ್ಲಿ ಮಳೆರಾಯನ ಅಬ್ಬರ ಜೋರಾಗಿತ್ತು. ಹಾಗಾಗಿ, ತಿರುಮಲ ತಿರುಪತಿಯಲ್ಲಿ‌ ಭಾರೀ ಮಳೆಯಿಂದ ಎರಡು ದಿನ‌ ಭಕ್ತರಿಗೆ ಗೋವಿಂದನ ದರ್ಶನ ಪಡೆಯುವುದು ಬಂದ್ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಕನ್ನಡದ ನಟಿ ತಾರಾ ಅನುರಾಧ ಅವರು ತಿಮ್ಮಪ್ಪನ ದರ್ಶನ ಪಡೆಯಲು ತಿರುಪತಿಗೆ ಹೋಗಿದ್ದರು. ಆದರೆ, ಭಾರೀ ಮಳೆಯಿಂದ ಆಗುವ ಅಪಾಯದ ಮುನ್ಸೂಚನೆ ಸಿಕ್ಕಿದ್ದು, ನಟಿ ಬೆಂಗಳೂರಿಗೆ ಮರಳಿದರು. ಇದೀಗ, ಎರಡು ತಿಂಗಳ ಬಳಿಕ ತಿರುಪತಿಗೆ ಹೋಗಿರುವ ನಟಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ರಿಯಾಲಿಟಿ ಶೋಗಳ ಕೆಲಸಗಳಲ್ಲಿ ಬ್ಯೂಸಿ ಆದ ನಟಿ ತಾರಾ ಮತ್ತೆ ತಿರುಪತಿಗೆ ಹೋಗೋಕೆ ಸಾಧ್ಯವಾಗಿರಲಿಲ್ಲ. ಈಗ ತಾರಾ ಅವರು ಬಿಡುವು ಮಾಡಿಕೊಂಡು ತಿರುಪತಿಗೆ ಹೋಗಿದ್ದಾರೆ. ನಟಿ ತಿಮ್ಮಪ್ಪನ ದೇಗುಲದಲ್ಲಿ ನಿಂತಿರುವ ಒಂದು ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​ ಆಗುತ್ತಿದೆ. ಈ ಫೋಟೋ ನೋಡಿದ ತಾರಾ ಅವರ ಅಭಿಮಾನಿಗಳಿಗೆ ಈಗ ಸಂತೋಷವಾಗಿದೆ. ಕೊನೆಗೂ, ತಾರಾ ಅವರಿಗೆ ತಿಮ್ಮಪ್ಪನ ದರ್ಶನ ಸಿಕ್ಕಿದೆ ಎಂದು ಹಲವರು ನಟಿಯ ಫೋಟೋ ಕೆಳಗೆ ಕಾಮೆಂಟ್ ಮಾಡುತ್ತಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net