ಕನ್ನಡದ ನಟ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಎಂಬುದು ಎಲ್ಲರಿಗೂ ಗೊತ್ತೆ ಇದೆ. ಆದರೆ, ಈಗ ನಟ ಯಶ್ ಅವರ ಹವಾ ನಮ್ಮ ದೇಶದಲ್ಲಿ ಮಾತ್ರವಲ್ಲದೇ, ಆಫ್ರಿಕಾದಲ್ಲೂ ಸಿಕ್ಕಾಪಟ್ಟೆ ಹೆಚ್ಚಾಗಲಿದೆ! ಇದಕ್ಕೆ, ಕಾರಣ ಏನು ಅಂತೀರಾ? ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 1’ ಸಿನಿಮಾದ ಹಾಡಿಗೆ ಅಲ್ಲಿನ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ಅವರು ಹೆಜ್ಜೆ ಹಾಕಿದ್ದಾರೆ. ಹೀಗಾಗಿ, ಆಫ್ರಿಕಾ ಖಂಡದಲ್ಲೂ ನಮ್ಮ ಕನ್ನಡ ನಟನ ಸಿನಿಮಾದ ಹಾಡು ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಕಿಲಿ ಪೌಲ್ ಅವರು ಕನ್ನಡದ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಅಂದಹಾಗೆ, ನಮ್ಮ ದೇಶದಲ್ಲಿರುವ ಅನೇಕರು ಕಿಲಿ ಪೌಲ್ ಅವರ ವಿಡಿಯೋಗಳಿಗೆ ಫಿದಾ ಆಗಿದ್ದು, ಇನ್ಸ್ಟಾಗ್ರಾಂನಲ್ಲಿ ಅವರ ಅನುಯಾಯಿಗಳು ಆಗಿದ್ದಾರೆ.