ನವದೆಹಲಿ: ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಅವರೊಂದಿಗೆ ಜುಲೈ 12ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಅದ್ಧೂರಿ ವಿವಾಹ ಮಹೋತ್ಸವದಲ್ಲಿ ಜಾಗತಿಕ ಐಕಾನ್, ಉದ್ಯಮಿಗಳು, ರಾಜಕಾರಣಿಗಳು ಹಾಗೂ ಬಾಲಿವುಡ್ ಸೆಲಿಬ್ರಿಟಿಗಳು ಪಾಲ್ಗೊಂಡಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮದುವೆಯಲ್ಲಿ ಪಾಲ್ಗೊಂಡು ವಧು-ವರರನ್ನು ಆಶೀರ್ವದಿಸಿದರು. ಇನ್ನು ಸಂಭ್ರಮದಲ್ಲಿ ಭಾಗಿಯಾಗಿದ್ದ ಸ್ನೇಹಿತರಿಗೆ ಅಂಬಾನಿ ಕುಟುಂಬ 2 ಕೋಟಿ ರೂಪಾಯಿ ಬೆಲೆಬಾಳುವ ದುಬಾರಿ ವಾಚ್ಗಳನ್ನು ಗಿಫ್ಟ್ ಆಗಿ ನೀಡಿದ್ದು ಎಲ್ಲರಿಗೂ ಗೊತ್ತೆ ಇದೆ.
ಇದನ್ನು ಓದಿ: ಮೈಕ್ರೋಸಾಫ್ಟ್ ಸರ್ವರ್ ಡೌನ್; 192 ಇಂಡಿಗೋ ವಿಮಾನ ಹಾರಾಟ ರದ್ದು, ಸದ್ಯಕ್ಕಿಲ್ಲ ಮರುಪಾವತಿ ಮತ್ತು ಮರು-ಬುಕಿಂಗ್
ಅನಂತ್ ಅಂಬಾನಿ ವಿವಾಹದಲ್ಲಿ ನೀಡಲಾದ ಈ ವಿಶೇಷ ವಾಚ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿದ್ದಂತೂ ಸುಳ್ಳಲ್ಲ. ಈ ಸ್ಪೆಷಲ್ ಕಸ್ಟಮೈಸ್ ವಾಚ್ ಲಿಮಿಟೆಡ್ ಎಡಿಷನ್ ಎಂದು ಹೇಳಲಾಗುತ್ತಿದೆ. ಹಾಗಾದ್ರೆ ಈ ವಾಚ್ನ ವಿಶೇಷತೆ ಏನು ಅಂತಾ ಗೊತ್ತಾದ್ರೆ ಅಬ್ಬಾ…. ಅಂತಾ ಹುಬ್ಬೆರಿಸೋದಂತು ಪಕ್ಕಾ.
ಈ ವಾಚ್ನಲ್ಲಿ 18 ಕ್ಯಾರೆಟ್ ರೋಸ್ ಗೋಲ್ಡ್ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ಕೇಸ್ 41 ಮಿಮೀ ಮತ್ತು ಇದು 9.5 ಮಿಮೀ ದಪ್ಪವಾಗಿರುತ್ತದೆ.ಇದು ಹಿಂಭಾಗದಲ್ಲಿ ನೀಲಮಣಿಯ ಸ್ಫಟಿಕ ಮತ್ತು ಸ್ಕ್ರೂ-ಲಾಕ್ ಕಿರೀಟವನ್ನು ಹೊಂದಿದೆ. ಇದನ್ನು ಆಡೆಮಾರ್ಸ್ ಪಿಗುಯೆಟ್ ತಯಾರಿಸಿದ್ದಾರೆ. ಈ ಕಂಪನಿ ಐಷಾರಾಮಿ ಕೈಗಡಿಯಾರಗಳನ್ನು ಮಾತ್ರ ತಯಾರಿಸುತ್ತದೆ. ‘ಮ್ಯಾನುಫ್ಯಾಕ್ಚರ್ ಕ್ಯಾಲಿಬರ್ 5134’ ಸ್ವಯಂ ಸುತ್ತುವ ಚಲನೆಯನ್ನು ಒಳಗೊಂಡಿರುವ ಈ ಗಡಿಯಾರವು ಪರ್ಪೆಚುಯಲ್ ಕ್ಯಾಲೆಂಡರ್ ಅನ್ನು ಸಹ ಒಳಗೊಂಡಿದೆ. ಇದು ವಾರ, ದಿನ, ದಿನಾಂಕ, ಖಗೋಳ ಚಂದ್ರ, ತಿಂಗಳು, ಅಧಿಕ ವರ್ಷ, ಗಂಟೆಗಳು ಮತ್ತು ನಿಮಿಷಗಳನ್ನು ತೋರಿಸುತ್ತದೆ. ಈ ವಾಚ್ 20 ಮೀಟರ್ವರೆಗಿನ ನೀರಿನಲ್ಲಿದ್ದರು ಸಹ ಹಾಳಾಗುವುದಿಲ್ಲ.
ಭಾರತದಲ್ಲಿ ಚಾಲ್ತಿಯಲ್ಲಿರುವ ತೆರಿಗೆ ಕಾನೂನುಗಳ ಪ್ರಕಾರ, ಉಡುಗೊರೆಗಳನ್ನು ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ತೆರಿಗೆ-ವಿನಾಯತಿ ಪಡೆಯಬಹುದು. ಉದಾಹರಣೆಗೆ ಮದುವೆಯ ಸಂದರ್ಭದಲ್ಲಿ ಸ್ವೀಕರಿಸಿದ ಮೊತ್ತ ಅಥವಾ ಸಂಬಂಧಿಕರಿಂದ ಪಡೆದ ಉಡುಗೊರೆಗಳು. ಆದರೆ ಅನಂತ್-ರಾಧಿಕಾ ಮದುವೆಯಲ್ಲಿ ಪಡೆದ ಉಡುಗೊರೆಗಳಿಗೆ ಯಾವುದೇ ತೆರಿಗೆ ವಿನಾಯಿತಿ ಅನ್ವಹಿಸುವುದಿಲ್ಲ. ಏಕೆಂದರೆ ಜನ್ಮದಿನಗಳು, ವಾರ್ಷಿಕೋತ್ಸವಗಳು ಅಥವಾ ಸ್ನೇಹಿತರಿಂದ ಪಡೆದ ಉಡುಗೊರೆಗಳು ತೆರಿಗೆಗೆ ಒಳಪಡುತ್ತವೆ. ಒಂದು ವರ್ಷದಲ್ಲಿ ಸ್ವೀಕರಿಸಿದ ಉಡುಗೊರೆಗಳ ಒಟ್ಟು ಮೌಲ್ಯವು 50,000 ರೂಪಾಯಿಗಳನ್ನು ಮೀರದಿದ್ದರೆ ಮಾತ್ರ ತೆರಿಗೆ ವಿನಾಯಿತಿ ಅನ್ವಯಿಸುತ್ತದೆ. ಒಮ್ಮೆ ಈ ಮಿತಿಯನ್ನು ಮೀರಿದರೆ ಸಂಪೂರ್ಣ ಮೊತ್ತವು ತೆರಿಗೆಗೆ ಒಳಪಟ್ಟಿರುತ್ತದೆ.
ಆದರೆ ಅಂಬಾನಿ ಅವರು ವಾಚ್ ಅನ್ನು ರಿಟರ್ನ್ ಗಿಫ್ಟ್ ಆಗಿ ನೀಡಿದ್ದು ಅದರ ಮೌಲ್ಯ 2 ಕೋಟಿ ರೂಪಾಯಿ ಆಗಿದೆ. ಉಡುಗೊರೆಗಳ ಒಟ್ಟು ಮೌಲ್ಯವು 50,000 ರೂ. ಮೀರಿರುವುದರಿಂದ ಈ ವಾಚ್ ಅನ್ನು ಗಿಫ್ಟ್ ಆಗಿ ಪಡೆದ ಪ್ರತಿಯೊಬ್ಬರು ತೆರಿಗೆ ಪಾವತಿಸಬೇಕಾಗುತ್ತದೆ. ವಾಚ್ನ ಮಾರುಕಟ್ಟೆ ಮೌಲ್ಯದ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಏಕೆಂದರೆ ಅದನ್ನು ನಗದು ಉಡುಗೊರೆಯಾಗಿ ಪರಿಗಣಿಸಲಾಗುತ್ತದೆ. ಮತ್ತು ಈ ಹಣವನ್ನು ಅವರ ಒಟ್ಟು ವಾರ್ಷಿಕ ಆದಾಯಕ್ಕೆ ಸೇರಿಸಲಾಗುತ್ತದೆ. (ಏಜೆನ್ಸೀಸ್)
ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಂಚನೆ ಬಹಿರಂಗ; ಯುಪಿಎಸ್ಸಿಯಿಂದ ಪ್ರಕರಣ ದಾಖಲು