

ಆಲಪ್ಪುಳ: ಮದುವೆಯ ನಂತರ ಕಳೆದ ಸೋಮವಾರ ಸ್ನೇಹ ಬಳಗ ಆಯೋಜಿಸಿದ್ದ ಸಂತೋಷ ಕೂಟದ ಭಾಗವಾಗಿ ಆಂಬ್ಯುಲೆನ್ಸ್ನಲ್ಲಿ ಜಾಲಿ ರೈಡ್ಗೆ ಹೋದ ನವದಂಪತಿಗೆ ಶಾಕ್ ಒಂದು ಎದುರಾಗಿತ್ತು.
ಆಂಬ್ಯುಲೆನ್ಸ್ನಲ್ಲಿ ತೆರಳಿದ ನವದಂಪತಿ ಕಯಮುಕಲಂ ಬಳಿಯಿರುವ ಕಟ್ಟನಂನಲ್ಲಿರುವ ವರನ ಮನೆಗೆ ತಲುಪಿದರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಕೇರಳದ ಆರ್ಟಿಒ ತಕ್ಷಣ ಪ್ರಕರಣ ದಾಖಲಿಸಿ, ವಾಹನವನ್ನು ಸೀಜ್ ಮಾಡಿ, ಚಾಲಕನ ಲೈಸೆನ್ಸ್ ಅನ್ನು ರದ್ದು ಮಾಡಿದೆ.
ವೃತ್ತಿಯಲ್ಲಿ ಆಂಬ್ಯುಲೆನ್ಸ್ ಚಾಲಕನಾಗಿರುವ ವರ, ವಧುವನ್ನು ಕೂರಿಸಿಕೊಂಡು ಮದುವೆಯ ಬಳಿಕ ತನ್ನ ಮನೆಗೆ ಆಂಬ್ಯುಲೆನ್ಸ್ ಮೂಲಕವೇ ತಲುಪಿದ. ಈ ವೇಳೆ ಆಂಬ್ಯುಲೆನ್ಸ್ ಒಳಗೆ ವರನ ಸ್ನೇಹಿತರು ಹಾಡು ಹಾಕಿಕೊಂಡ ನೃತ್ಯ ಮಾಡಿದ್ದಲ್ಲದೆ, ಆಂಬ್ಯುಲೆನ್ಸ್ ಸೈರನ್ ಹಾಕಿಕೊಂಡು ಸಂಭ್ರಮಿಸಿದ್ದಾರೆ. ಇದಿಷ್ಟು ಕ್ಷಣವು ಮೊಬೈಲ್ನಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೋ ತುಣುಕು ಜಾಲತಾಣದಲ್ಲಿ ಹರಿದಾಡಿದೆ.
ಆಂಬ್ಯುಲೆನ್ಸ್ ಚಾಲಕರ ಸಂಘ ದೂರು ನೀಡಿದ ಬಳಿಕ ಚಾಲಕ ಕಂ ವರನ ಮೇಲೆ ದೂರು ದಾಖಲಾಗಿದೆ. ತುರ್ತುಪರಿಸ್ಥಿತಿಗೆ ಬಳಸುವ ಆಂಬ್ಯುಲೆನ್ಸ್ ಅನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ದೂರು ದಾಖಲಿಸಲಾಗಿದ್ದು, ಈಗಾಗಲೇ ವಾಹನ ಸೀಜ್ ಮಾಡಿ, ಚಾಲಕನ ಲೈಸೆನ್ಸ್ ರದ್ದು ಮಾಡಲಾಗಿದೆ. (ಏಜೆನ್ಸೀಸ್)