

ಮುಂಬೈ: ಬಾಲಿವುಡ್ನಲ್ಲಿ ಅಕ್ಷಯ್ ಕುಮಾರ್ ತುಂಬ ವೃತ್ತಿಪರತೆ ಹೊಂದಿರುವಂತಹ ನಟ. ಅಂದುಕೊಂಡ ಸಮಯಕ್ಕೆ ಹಿಡಿದ ಕೆಲಸವನ್ನು ಮುಗಿಸಿ, ಮುಂದಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರವರು. ಇತ್ತೀಚೆಗಷ್ಟೇ ಸ್ಕಾಟ್ಲೆಂಡ್ಗೆ ಹೋಗಿ ಬೆಲ್ಬಾಟಂ ಸಿನಿಮಾ ಶೂಟಿಂಗ್ ಮುಗಿಸಿಕೊಂಡು, ಬಿಡುಗಡೆ ದಿನಾಂಕವನ್ನೂ ಘೋಷಣೆ ಮಾಡಿಕೊಂಡಿದ್ದಾರವರು. ಇದೀಗ ಸಮಯ ಉಳಿಸಲು ಹೊಸ ದಾರಿಯನ್ನು ಹಿಡಿದಿದ್ದಾರೆ.
ಹೌದು, ಕರೊನಾ ಹಾವಳಿ ಮೊದಲಿನಂತಿಲ್ಲ. ಎಲ್ಲವೂ ಯಥಾಸ್ಥಿತಿಗೆ ಮರಳುತ್ತಿರುವುದರಿಂದ ಮುಂಬೈನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಆ ಟ್ರಾಫಿಕ್ನಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಅಕ್ಷಯ್ ಕುಮಾರ್, ಕಾರ್ ಬದಲಿಗೆ ಬೋಟ್ ಏರಿದ್ದಾರೆ.
ಸಿನಿಮಾ ಸಂಬಂಧಿ ಕೆಲಸದ ನಿಮಿತ್ತ ಮೊದಲಿಗೆ ಕಾರ್ ಏರಿದ್ದ ಅಕ್ಷಯ್, ಬಳಿಕ ಟ್ರಾಫಿಕ್ ಸಮಸ್ಯೆ ನೋಡಿ, ಬೀಚ್ ಬಳಿಯೇ ಕಾರ್ ಬದಲಿಸಿ, ಬೋಟ್ ಏರಿದ್ದಾರೆ. ಮಧ್ ಐಸ್ಲೆಂಡ್ನಿಂದ ತೆರಳಿದ್ದಾರೆ. ಹಾಗೆ ಬೋಟ್ನಲ್ಲಿ ಹೋಗುವ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಕ್ಷಯ್ ಅವರ ವೃತ್ತಿಪರತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.