More

    ಬರೋಬ್ಬರಿ 678 ದಿನಗಳ ಬಳಿಕ ಶಾರುಖ್​ ಖಾನ್​ ಕಡೆಯಿಂದ ಈ ನಿರ್ಧಾರ…

    ಮುಂಬೈ: ಬಾಲಿವುಡ್​ ಬಾದ್ಶಾ ಶಾರುಖ್​ ಖಾನ್​ 2018ರ ಡಿಸೆಂಬರ್​ನಲ್ಲಿ ಜೀರೋ ಸಿನಿಮಾ ಸೋಲಿನ ಬಳಿಕ ನಟನೆಯಿಂದ ಸುದೀರ್ಘ ಎರಡು ವರ್ಷ ಹಿಂದೆ ಸರಿದಿದ್ದರು. ನಟನೆ ಬದಿಗಿರಿಸಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಅಭಿಮಾನಿ ವಲಯದಲ್ಲಿ ಶಾರುಖ್​ ಅವರ ಈ ನಿರ್ಧಾರ ಬೇಸರ ತರಿಸಿತ್ತು. ಮತ್ತೆ ಯಾವಾಗ ತೆರೆಮೇಲೆ ಬರುತ್ತೀರಿ ಎಂದು ಸೋಷಿಯಲ್​ ಮೀಡಿಯಾದಲ್ಲಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಿದ್ದರು. ಇದೀಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದೆ.

    ಇದನ್ನೂ ಓದಿ: ಆ್ಯಕ್ಟ್​ 1978: ಕೊನೆಗೂ ನವೆಂಬರ್​ನಲ್ಲಿ ಬಿಡುಗಡೆ

    ಹೌದು, ಇತ್ತೀಚಿನ ಕೆಲ ತಿಂಗಳಿಂದ ಸಿನಿಮಾ ಒಪ್ಪಿಕೊಳ್ಳುವ ವಿಚಾರವಾಗಿಯೇ ಶಾರುಖ್​ ಖಾನ್​ ಸುದ್ದಿಯಲ್ಲಿದ್ದರು. ಪಠಾಣ್​ ಸಿನಿಮಾ ಮಾಡುವುದಾಗಿ ಹೇಳಿದ್ದರು. ಅದರಂತೆ, ಇದೀಗ ಆ ಸಿನಿಮಾ ಸೆಟ್ಟೇರಲು ಸಿದ್ಧವಾಗಿದೆ. ನವೆಂಬರ್​ನಲ್ಲಿ ಚಿತ್ರದ ಶೂಟಿಂಗ್​ನಲ್ಲಿ ಶಾರುಖ್​ ಖಾನ್​ ಭಾಗವಹಿಸಲಿದ್ದಾರೆ. ಈ ಮೂಲಕ ಸುದೀರ್ಘ 678 ದಿನಗಳ ಬಳಿಕ ಮತ್ತೆ ಕ್ಯಾಮರಾ ಮುಂದೆ ನಿಲ್ಲುವ ನಿರ್ಧಾರ ತೆಗೆದುಕೊಂಡಿದ್ದಾರೆ ಶಾರುಖ್​.

    ಜೀರೋ ಸಿನಿಮಾ ಸೋಲಿನ ಬಳಿಕ ಬೇರಾವ ಸಿನಿಮಾ ಆಯ್ದುಕೊಳ್ಳದ ಶಾರುಖ್​, ಇದೀಗ ಸುದೀರ್ಘ ಎರಡು ವರ್ಷದ ಬಳಿಕ ಪಠಾಣ್​ ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ. ಸಾಲು ಸಾಲು ಸೋಲು ಕಂಡು, ಅದರಿಂದ ಕೊಂಚ ಬೇಸರಗೊಂಡಿದ್ದ ಶಾರುಖ್​, ಇದೀಗ ಮತ್ತೆ ಹಳೇ ಲಯಕ್ಕೆ ಮರಳುತ್ತಿದ್ದಾರೆ. ಸದ್ಯ ಶಾರುಖ್​ ಅವರ ಈ ನಿರ್ಧಾರ ನಿರಾಸೆಯಲ್ಲಿದ್ದ ಅಭಿಮಾನಿಗಳಿಗೆ ಈ ವಿಚಾರ ಖುಷಿ ನೀಡಿದೆ.

    ಇದನ್ನೂ ಓದಿ: ನವರಾತ್ರಿ ವೈಭವ: ಹೆಣ್ಣನ್ನು ಗೌರವಿಸುವುದೇ ನಿಜವಾದ ನವರಾತ್ರಿ…

    ಸಿದ್ಧಾರ್ಥ್​ ಆನಂದ್​ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದ್ದು, ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಲಿದ್ದಾರೆ. ಜನವರಿ ವೇಳೆಗೆ ದೀಪಿಕಾ ಜತೆಗೆ ಜಾನ್​ ಅಬ್ರಹಂ ಸಹ ಶೂಟಿಂಗ್​ನಲ್ಲಿ ಭಾಗಿಯಾಗಲಿದ್ದಾರೆ. (ಏಜೆನ್ಸೀಸ್​)

    ಸಿಎಸ್​ಕೆ ಕ್ಯಾಪ್ಟನ್​ ಧೋನಿ ನಂತರ ನಟ ವಿಜಯ್​ ಸೇತುಪತಿ ಮಗಳಿಗೆ ಅತ್ಯಾಚಾರ ಬೆದರಿಕೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts