

ಅಕ್ಟೋಬರ್ 23ಕ್ಕೆ ಪ್ರಭಾಸ್ ಹುಟ್ಟುಹಬ್ಬ. ಆ ವಿಶೇಷ ದಿನದಂದು ಸಾಹೋ ಮತ್ತು ಬಾಹುಬಲಿ ಸಿನಿಮಾ ತಂಡಗಳು ವಿಶೇಷ ಉಡುಗೊರೆಯನ್ನು ನೀಡಿವೆ. ಅದೇನೆಂದರೆ, ಈ ಎರಡು ಸಿನಿಮಾಗಳು ಜಪಾನ್ ಮತ್ತು ಅಮೆರಿಕದಲ್ಲಿ ಮರು ಬಿಡುಗಡೆ ಆಗಲಿವೆ.
ಕರೊನಾ ಹಿನ್ನಲೆಯಲ್ಲಿ ಕಳೆದ ಏಳು ತಿಂಗಳಿಂದ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತ್ತು. ಇದೀಗ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಶುರುವಾಗಿದ್ದು, ಪ್ರಭಾಸ್ ನಟನೆಯ ಬಾಹುಬಲಿ ಪಾರ್ಟ್ 2 ಮತ್ತು ಸಾಹೋ ಸಿನಿಮಾಗಳು ಜಪಾನ್ ಮತ್ತು ಅಮೆರಿಕದ ಹಲವು ಚಿತ್ರಮಂದಿರಗಳಲ್ಲಿ ಮತ್ತೆ ರಿಲೀಸ್ ಆಗಲಿವೆ.
ಸದ್ಯ ರಾಧೆ ಶ್ಯಾಮ್ ಮತ್ತು ಆದಿಪುರುಷ್ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇದರ ಜತೆಗೆ ಬಹುಭಾಷೆಗಳಲ್ಲಿ ಸಿದ್ಧವಾಗಲಿರುವ ಸಿನಿಮಾದಲ್ಲಿಯೂ ಪ್ರಭಾಸ್ ನಟಿಸಲಿದ್ದು, ಅಲ್ಲಿ ಅವರಿಗೆ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದಾರೆ. (ಏಜೆನ್ಸೀಸ್)