More

    ನೀವು ಇಷ್ಟೊಂದು ಬದಲಾಗಿಬಿಟ್ರಾ? ಅನಿಕಾರ ಬೋಲ್ಡ್​ ಅವತಾರ ಕಂಡು ಅಭಿಮಾನಿಗಳು ಶಾಕ್​!​

    ಚೆನ್ನೈ: ತಲಾ ಅಜಿತ್​ ಅಭಿನಯದ ಕಾಲಿವುಡ್​ ಸೂಪರ್​ ಡೂಪರ್​ “ಯೆನ್ನೈ ಅರಿಂದಾಲ್​” ಮತ್ತು “ವಿಶ್ವಾಸಂ” ಚಿತ್ರಗಳಲ್ಲಿ ಮಗಳ ಪಾತ್ರದಲ್ಲಿ ಬಾಲ ನಟಿಯಾಗಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ಅನಿಕಾ ಸುರೇಂದ್ರನ್, ಇದೀಗ ನಾಯಕಿಯಾಗಿ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಅನಿಕಾ ಅವರ ವಯಸ್ಸು 19. ದಕ್ಷಿಣ ಭಾರತದ ಭರವಸೆಯ ನಾಯಕಿಯಾಗುವ ಎಲ್ಲ ಲಕ್ಷಣಗಳು ಅನಿಕಾರಲ್ಲಿದೆ.

    ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಅನಿಕಾ, ಆಗಾಗ ತಮ್ಮ ಸ್ಟೈಲಿಶ್​ ಹಾಗೂ ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಅಭಿಮಾನಿಗಳ ಮನತಣಿಸುತ್ತಿರುತ್ತಾರೆ. ಅಲ್ಲದೆ, ಜಾಲತಾಣದಲ್ಲಿ ಲೈವ್​ ಬರುವ ಮೂಲಕ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸುತ್ತಿರುತ್ತಾರೆ.

    ತಾಜಾ ಸಂಗತಿ ಏನೆಂದರೆ, ಅನಿಕಾ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಫೋಟೋದಲ್ಲಿ ಅನಿಕಾ ಅವರು ಸ್ವಿಮ್ಮಿಂಗ್​ ಸೂಟ್​ ಧರಿಸಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಅನಿಕಾ ಅವರು ಈ ರೀತಿ ಬದಲಾಗಿಬಿಟ್ರಾ ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ಬಾಲನಟಿಯಾಗಿ ಅನಿಕಾ ಅವರನ್ನು ನೋಡಿದ್ದ ಅಭಿಮಾನಿಗಳಿಗೆ ಅವರ ಹಾಟ್​ ಅವತಾರಗಳನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.

    ವರ್ಷದ ಹಿಂದೆ ಬಿಡುಗಡೆಯಾದ ಓ ಮೈ ಡಾರ್ಲಿಂಗ್​ ಸಿನಿಮಾದಲ್ಲಿ ಅನಿಕಾ ಅವರ ಲಿಪ್​ಲಾಕ್​ ಸೀನ್​ ನೋಡಿ, ಅಭಿಮಾನಿಗಳು ಗರಂ ಆಗಿದ್ದರು. ಆ ವೇಳೆಯೂ ಅನಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಲೈವ್​ ಬಂದು ಸ್ಪಷ್ಟನೆ ನೀಡಿದ್ದರು. ಅನಿಕಾರನ್ನು ಆರಾಧಿಸುವ ಅಭಿಮಾನಿಗಳಿಗೆ ಅವರ ಹಾಟ್​ ಅವತಾರಗಳು ಕೊಂಚವೂ ಇಷ್ಟವಾಗುವುದಿಲ್ಲ. ಹೀಗಾಗಿ ಅನಿಕಾರ ವಿರುದ್ಧ ಬೇಸರ ಹೊರಹಾಕುತ್ತಲೇ ಇರುತ್ತಾರೆ.

    Anika 1

    ಇನ್ನೂ ಅನಿಕಾ ಅವರು ತುಂಬಾ ಬೋಲ್ಡ್​ ಆಗಿ ಮಾತನಾಡುವುದರಲ್ಲಿ ಹಿಂಜರಿಯುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೇಳುವ ಅಶ್ಲೀಲ ಪ್ರಶ್ನೆಗಳಿಗೂ ತುಂಬಾ ನೇರವಾಗಿಯೇ ಉತ್ತರಿಸುತ್ತಾರೆ. ಈ ಹಿಂದೆ ನೆಟ್ಟಿಗರೊಬ್ಬರು ಇದು ಸ್ವಲ್ಪ ವಿಚಿತ್ರ ಅನಿಸಬಹುದು ಆದರೆ, ನನಗೆ ಬ್ರಾಗಳ ಬಗ್ಗೆ ಸಲಹೆ ಬೇಕಿದೆ. ನೀವು ಯಾವುದನ್ನು ಬಳಸುತ್ತೀರಿ ಹೇಳಿ ಎಂದು ಪ್ರಶ್ನಿಸಿದ್ದರು. ಇದಕ್ಕೆ ಸ್ವಲ್ಪವೂ ಸಂಕೋಚ ಪಟ್ಟುಕೊಳ್ಳದ ಅನಿಕಾ, ಹತ್ತಿಯಲ್ಲಿ ಮಾಡಿದ ಸರಿಯಾದ ಗಾತ್ರದ ಬ್ರಾಗಳನ್ನು ನಿಮಗೆ ಸಲಹೆ ನೀಡುತ್ತೇನೆ. ಜಿವಾಮೆಯಂತಹ ಸೈಟ್​ಗಳ ಮೂಲಕ ಆನ್​ಲೈನ್​ನಲ್ಲಿ ನಾನು ಖರೀದಿಸುತ್ತೇನೆ ಎಂದಿದ್ದರು. ಇದು ಕೂಡ ವೈರಲ್​ ಆಗಿತ್ತು.

    ಸಿನಿಮಾ ವಿಚಾರಕ್ಕೆ ಬರುವುದಾದರೆ, ನಿಲುವುಕು ಎನ್​ ಮೇಲ್​ ಎನ್ನಾಡಿ ಗೋಪಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

    ಅರ್ಜುನ್​ ಸರ್ಜಾರ ಕಿರಿಯ ಪುತ್ರಿಯನ್ನು ನೋಡಿದ್ದೀರಾ? ಸಿಕ್ಕಾಪಟ್ಟೆ ಬೋಲ್ಡ್​ ಅಂಜನಾ ಸರ್ಜಾ!

    ಜಿಟಿಡಿ ವಿರುದ್ಧ ಚುನಾವಣಾ ಅಖಾಡದಲ್ಲಿ ತೊಡೆ ತಟ್ಟಿದ್ರೂ ದ್ವಾರಕೀಶ್​! ಆದ್ರೆ ಗಳಿಸಿದ ಮತಗಳೆಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts