ಕಿಚ್ಚ ಸುದೀಪ್​ ಫ್ಯಾಂಟಮ್ ಚಿತ್ರಕ್ಕೆ ಸಂಗೀತ ನಿರ್ದೇಶಕರು ಇವರೇ..

collage (1)
Published on

ಫ್ಯಾಂಟಮ್​ ಸಿನಿಮಾ ಚಿತ್ರೀಕರಣಕ್ಕೆ ಈಗಾಗಲೇ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇನ್ನೇನು ಚಿತ್ರೀಕರಣಕ್ಕೆ ಹೊರಡಲು ಸಜ್ಜಾಗಿದೆ. ಕಿಚ್ಚ ಸುದೀಪ್​ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾದಲ್ಲಿ ವಿಕ್ರಾಂತ ರೋಣ ಹೆಸರಿನ ಪಾತ್ರ ನಿಭಾಯಿಸುತ್ತಿದ್ದಾರೆ. ಇದೀಗ ಇದೇ ಸಿನಿಮಾದಿಂದ ಹೊಸದೊಂದು ಅಪ್​ಟೇಟ್​ ಮಾಹಿತಿ ಲಭ್ಯವಾಗಿದೆ. ಚಿತ್ರಕ್ಕೆ ಸಂಗೀತ ನಿರ್ದೇಶಕರ ಆಗಮನವಾಗಿದೆ.

ಹೌದು, ಇದೇ ಮೊದಲ ಬಾರಿ ಕಿಚ್ಚ ಸುದೀಪ್​ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಲಿದ್ದಾರೆ. ಸದ್ಯ ಸ್ಯಾಂಡಲ್​ವುಡ್​ನಲ್ಲಿ ಸಾಲು ಸಾಲು ಸಿನಿಮಾ ಆಫರ್​ಗಳನ್ನು ಹಿಡಿದುಕೊಂಡು ಬಿಜೆಯೆಸ್ಟ್ ಮ್ಯೂಸಿಕ್​ ಡೈರೆಕ್ಟರ್ ಎಂದೇ ಕರೆಸಿಕೊಳ್ಳುತ್ತಿರುವ ಅಜನೀಶ್​, ಫ್ಯಾಂಟಮ್​ ಚಿತ್ರಕ್ಕೆ ರಾಗ ಸಂಯೋಜನೆ ಮಾಡಲಿದ್ದಾರೆ.

ಈ ಹಿಂದೆ ಅನೂಪ್​ ನಿರ್ದೇಶನ ಮಾಡಿದ್ದ ರಂಗಿತರಂಗ ಮತ್ತು ರಾಜರಥ ಚಿತ್ರಕ್ಕೆ ಇದೇ ಅಜನೀಶ್ ಸಂಗೀತ ನೀಡಿದ್ದರು. ಇದೀಗ ಅನೂಪ್​ ಜತೆ ಮೂರನೇ ಬಾರಿ ಕೈ ಜೋಡಿಸಿದ್ದಾರೆ. ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಲ್ ಬಾಟಂ, ಅವನೇ ಶ್ರೀಮನ್ನಾರಾಯಣ, ದಿಯಾ ಸಿನಿಮಾಗಳಿಗೆ ಅದ್ಭುತ ಸಂಗೀತ ನೀಡಿದ್ದಾರೆ ಅಜನೀಶ್​.

ಜುಲೈ ಮೊದಲ ವಾರದಿಂದ ಹೈದರಾಬಾದ್​ನಲ್ಲಿ ಫ್ಯಾಂಟಮ್​ ಚಿತ್ರದ ಚಿತ್ರೀಕರಣ ನಡೆಯಲಿದೆ ಎನ್ನಲಾಗುತ್ತಿದೆ. ಅದ್ದೂರಿ ಸೆಟ್​ ಸಹ ಹಾಕಲಾಗಿದೆ. ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ನಟಿಸುತ್ತಿದ್ದು, ಜಾಕ್​ ಮಂಜು ಚಿತ್ರಕ್ಕೆ ಬಂದವಾಳ ಹೂಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net