ಆಲಿಯಾ ಭಟ್​ ನಿಮಗೆ ಇಷ್ಟೊಂದು ಟ್ರೋಲ್ ಆಗೋದು ಬೇಕಿತ್ತಾ?

Sadak 2
Published on

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಬೆನ್ನಲ್ಲೇ ಬಾಲಿವುಡ್​ನಲ್ಲಿ ಎರಡು ಬಣಗಳಿವೆ ಎಂಬುದು ಸಾಬೀತಾಗಿದೆ. ಸಲ್ಮಾನ್​ ಖಾನ್​, ಕರಣ್​ ಜೋಹಾರ್​, ಆಲಿಯಾ ಭಟ್​ ಸೇರಿ ಸಾಕಷ್ಟು ಸ್ಟಾರ್​ಗಳಿಗೆ ಬಹಿಷ್ಕಾರದ ಬಿಸಿ ತಟ್ಟಿತ್ತು. ನೆಪೋಟಿಸಂ ಮೂಲಕ ಸಿನಿಮಾ ಹಿನ್ನೆಲೆ ಇಲ್ಲದ ಕಲಾವಿದರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಆಲಿಯಾ ಭಟ್​ಗೆ ಮತ್ತೊಂದು ರೀತಿಯ ಸಂಕಷ್ಟ ಎದುರಾಗಿದೆ. ಅದು ನೇರವಾಗಿ ಸಡಕ್​ ಚಿತ್ರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಹೌದು, ಇತ್ತೀಚೆಗಷ್ಟೇ ಬಿಹಾರದಲ್ಲಿ ಸಲ್ಮಾನ್​ ಖಾನ್​, ಆಲಿಯಾ ಭಟ್ ಸಿನಿಮಾಗಳನ್ನು ನಿಷೇಧಿಸಲಾಗಿತ್ತು. ಇದೀಗ ಆಲಿಯಾ ಭಟ್​ ನಟಿಸಿರುವ ‘ಸಡಕ್​’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಡಿಸ್ನಿ ಹಾಟ್ ಸ್ಟಾರ್​ನಲ್ಲಿ ಜುಲೈ ತಿಂಗಳಲ್ಲಿ ಚಿತ್ರ ರಿಲೀಸ್ ಆಗಲಿದೆ. ಆ ಬೆನ್ನಲ್ಲೇ ಚಿತ್ರದ ಪೋಸ್ಟರ್​ಗಳು ಟ್ರೋಲ್​ಗೆ ಒಳಗಾಗುತ್ತಿವೆ. ಅದ್ಯಾವ ಮಟ್ಟಿಗೆ ಎಂದರೆ, ಬೈಕಾಟ್​ ಆಲಿಯಾ ಎಂದೆಲ್ಲ ಕಮೆಂಟ್ ಹಾಕಲಾಗುತ್ತಿದೆ.

‘ತುಂಬು ಹೃದಯದ ಧನ್ಯವಾದಗಳು, ಈ ವಿಚಾರವನ್ನು ಹೇಳಿಕೊಳ್ಳು ನನಗೆ ಗರ್ವ ಎನಿಸುತ್ತದೆ. ಪ್ಲಾಪ್​ ಸಿರೀಸ್​ಗಳ ಬಿಡುಗಡೆ ಶುರುವಾಗಲಿದೆ. ಅದರಲ್ಲಿ ಮೊದಲನೆಯದು ಸಡಕ್​ 2 ಸಿನಿಮಾ ಆಗಿರಲಿದೆ’ ಎಂದರೆ, ಇನ್ನು ಕೆಲವರು, ‘ಯಾವಾಗ ಸಡಕ್​ 2 ಅಟ್ಟರ್​ ಪ್ಲಾಪ್​ ಆಗುತ್ತದೋ, ಆವಾಗ ನಿಮಗೆ ಅರ್ಥವಾಗುತ್ತದೆ ಇದೇ ನಿಜವಾದ ಮುಕ್ತಾಯ ಎಂದು. ಜಸ್ಟಿಸ್ ಪಾರ್ ಸುಶಾಂತ್​ ಡೆತ್​’ ಎಂದು ಬರೆದುಕೊಂಡಿದ್ದಾರೆ. ‘ಬೈಕಾಟ್​ ಸಡಕ್​, ಬೈಕಾಟ್​ ಆಲಿಯಾ ಬೈಕಾಟ್ ಮಹೇಶ್ ಭಟ್‘ ಎಂದೆಲ್ಲ ಕಮೆಂಟ್​ ಮಾಡಿ ಹಿಗ್ಗಾಮುಗ್ಗಾ ಝಾಡಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net