ಈ ಹತ್ತು ಸಿನಿಮಾಗಳನ್ನು ಆನ್​ಲೈನ್​ನಲ್ಲಿ ನೋಡಲೇಬೇಡಿ!; ನಿಮ್ಮ ಅಕೌಂಟ್​ ಹ್ಯಾಕ್​ ಆಗೋದು ಪಕ್ಕಾ...

collage (1)
Published on

ಮಹಾರಾಷ್ಟ್ರ ಸೈಬರ್​ ಕ್ರೈಂ ಡಿಪಾರ್ಟ್​ಮೆಂಟ್​ ಹೊಸದೊಂದು ಆದೇಶ ಹೊರಡಿಸಿದೆ. ಆನ್​ಲೈನ್​ನಲ್ಲಿ ಲಭ್ಯ ಇರುವ ಒಂದಷ್ಟು ಸಿನಿಮಾಗಳನ್ನು ಮತ್ತು ವೆಬ್​ ಸಿರೀಸ್​ಗಳನ್ನು ನೋಡುವುದರಿಂದ ಸೈಬರ್​ ಕಳ್ಳರು ನಿಮ್ಮ ಖಾತೆಗೆ ಕನ್ನ ಹಾಕಲಿದ್ದಾರೆ ಎಂದು ಎಚ್ಚರಿಸಿದೆ. ಈಗಾಗಲೇ ಅದಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿದ್ದೇ ತಡ, ಗಾಬರಿಯಲ್ಲಿಯೇ ಮಾಹಿತಿಯನ್ನು ಬಹಿರಂಗಪಡಿಸಿದೆ. ಹಾಗಾದರೆ ಆ ಹತ್ತು ಸಿನಿಮಾ ಮತ್ತು ವೆಬ್​ಸಿರೀಸ್​ಗಳು ಯಾವ್ಯಾವು?

ಮರ್ದಾನಿ, ಜೂತಾಪಿಯಾ, ಜವಾನಿ ದಿವಾನಿ, ಚಪಾಕ್​, ಲವ್​ ಆಜ್​ ಕಲ್​, ಇನ್​ಸೆಪ್ಷನ್​, ಬಾಹುಬಲಿ, ರಜನಿಗಂಧ, ಗಲ್ಲಿ ಬಾಯ್, ಬಾಲಾ ಇವಿಷ್ಟು ಸಿನಿಮಾಗಳಾದರೆ, ದಿಲ್ಲಿ ಕ್ರೈಂ, ಬ್ರೊಕ್ಲಿನ್​ ನೈನ್​ ನೈನ್, ಪಂಚಾಯತ್​, ಅಕೂರಿ, ಫೌದಾ, ಘೂಲ್​, ಮೈಂಡ್​ ಹಂಟರ್, ನಾರ್ಕೋಸ್​, ದೇವ್​ಲೋಕ್​, ಲೊಸ್ಟ್​ ವೆಬ್​ ಸಿರೀಸ್​ಗಳಾಗಿವೆ.

ಫ್ರೀ ಸಿನಿಮಾ ನೆಪದಲ್ಲಿ ವಾಟ್ಸ್​ಅಪ್​ ಮೂಲಕ ಯಾವುದೇ ಲಿಂಕ್​ಗಳು ಮೊಬೈಲ್​ಗೆ ಬಂದರೆ, ಅದನ್ನು ಯಾವುದೇ ಕಾರಣಕ್ಕೂ ಓಪನ್​ ಮಾಡಲೇಬೇಡಿ ಎಂದು ಸೈಬರ್​ ಕ್ರೈಂ ಇಲಾಖೆ ತಿಳಿಸಿದೆ. ಸೈಬರ್​ಗೆ ಸಂಬಂಧಿಸಿದಂತೆ ಲಾಕ್​ಡೌನ್​ ಅವಧಿಯಲ್ಲಿ 512 ಪ್ರಕರಣಗಳು ದಾಖಲಾಗಿವೆ. ಆ ಪೈಕಿ 273 ಜನರನ್ನು ಬಂಧಿಸಲಾಗಿದೆ. ಅದರಲ್ಲಿ 196 ಮಂದಿಯನ್ನು ಮೊಬೈಲ್​ ವಾಟ್ಸ್​ಅಪ್​ಗಳಿಗೆ ಅಫೆನ್ಸಿವ್​ ಮೆಸೆಜ್​ ಕಳುಹಿಸಿ ಸಿಕ್ಕಿಬಿದ್ದಿದ್ದಾರೆ. ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದಕ್ಕೆ 213 ಪ್ರಕರಣಗಳು ದಾಖಲಾಗಿವೆ. ಟಿಕ್​ಟಾಕ್​ನಲ್ಲಿ ಹಂಚಿಕೊಂಡಿದ್ದಕ್ಕೆ 28 ಪ್ರಕರಣ, 11 ಪ್ರಕರಣ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಕ್ಕೆ ದಾಖಲಾಗಿವೆ.

ಫ್ರೀ ಡಾಟಾ, ನೆಟ್​ಫ್ಲಿಕ್ಸ್ ನೋಂದಣಿ ಸೇರಿ ಫ್ರೀ ಸಿನಿಮಾ ವೀಕ್ಷಣೆ ರೀತಿಯ ಹಲವು ಆಮೀಷಗಳನ್ನು ವಾಟ್ಸ್ ಅಪ್​ ಮೂಲಕ ಕಳುಹಿಸಿ ಓಟಿಪಿ ಮತ್ತು ಪಾಸವರ್ಡ್​ ತಿಳಿದುಕೊಳ್ಳಲು ಯತ್ನಿಸುತ್ತಾರೆ. ಹಾಗಾಗಿ ಯಾವುದೇ ಕಾರಣಕ್ಕೆ ಅದಕ್ಕೆ ಎಡೆ ಮಾಡಿಕೊಡಬೇಡಿ ಎಂದು ಸೈಬರ್​ ಕ್ರೈಂ ಇಲಾಕೆ ಕಟ್ಟುನಿಟ್ಟಾಗಿ ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net